

ವಿಜಯವಾಣಿ ಸುದ್ದಿಜಾಲ ಕುಮಟಾ: ಶಿರಸಿಯಿಂದ ಗೋವಾ ಕಡೆಗೆ ತೆರಳುತ್ತಿದ್ದ ಬಾಳೆಕಾಯಿ ತುಂಬಿದ ವಾಹನದಲ್ಲಿ ಸಾಗಿಸುತ್ತಿದ್ದ. 4 ಕಡವೆಗಳ ಕೋಡು ಹಾಗೂ 54 ಘನ ಮೀಟರ್ ಅನುತಿ ಇಲ್ಲದ ಕಟ್ಟಿಗೆಯನ್ನು ಕುಮಟಾ ಕತಗಾಲ ಅರಣ್ಯ ವಲಯದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 8 ಕ್ವಿಂಟಾಲ್ ಬಾಳೆಕಾಯಿಯನ್ನೂ ವಶಕ್ಕೆ ಪಡೆಯಲಾಗಿದೆ.
ವಾಹನ ಚಾಲಕ ಶಿರಸಿ ಕಸ್ತೂರಬಾ ನಗರದ ಮಹಮದ್ ಅಸ್ಲಾಂ ಬಾಬಾಜಾನ್ ಕರ್ಕಿಮಕ್ಕಿ ಹಾಗೂ ಶಿರಸಿಯ ಅಂಜು ಫರ್ನೀಚರ್ ಮಾಲೀಕ ಅಂತೋನ್ ವಿ.ನರೋನಾ ಎಂಬುವವರನ್ನು ಬಂಧಿಸಲಾಗಿದೆ.
ಉಪ ವಲಯ ಅರಣ್ಯಾಧಿಕಾರಿ ಬಿ.ಎನ್.ಬಂಕಾಪುರ, ಅರಣ್ಯ ರಕ್ಷಕರಾದ ಮಹೇಶ ಹವಳೆಮ್ಮನವರ್, ಗಣೇಶ ನಾಯಕ, ಸದಾಶಿವ ಪುರಾಣಿಕ, ಸಿಬ್ಬಂದಿ ವಸಂತ ನಾಯ್ಕ, ನಾಗೇಶ ಪಟಗಾರ, ಶಂಕರ ಗೌಡ ಕಿರಣ ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.