ಬಾಲಮಂದಿರದ ಮಕ್ಕಳಿಗೆ 1 ಲಕ್ಷ ರೂ. ದೇಣಿಗೆ

bkt-6-2
Published on

ಬಾಗಲಕೋಟೆ: ಕಾರ್ಗಿಲ್ ಹುತಾತ್ಮ ಯೋಧರ ಸ್ಮರಣಾರ್ಥವಾಗಿ ಮಾಜಿ ಸೈನಿಕ ಹಾಗೂ ಗೋವಿಂದಕೊಪ್ಪದ ಎಚ್.ಪಿ.ಎಸ್ ಶಾಲೆಯ ಶಿಕ್ಷಕ ಎಸ್.ಎಲ್.ಸನಪ್ಪನವರ ತಮ್ಮ ಮೊಮ್ಮಗಳ ಹುಟ್ಟು ಹಬ್ಬದ ನಿಮಿತ್ಯ ಸರ್ಕಾರಿ ಬಾಲಕಿಯರ ಬಾಲಮಂದಿರ 10 ಜನ ಬಾಲಕಿಯರಿಗೆ ತಲಾ 10 ಸಾವಿರ ರೂ.ಗಳಂತೆ ಒಟ್ಟು 1 ಲಕ್ಷ ರೂ.ಗಳನ್ನು ದೇಣಿಗೆಯನ್ನು ಬಾಲಕಿಯ ಬಾಲಮಂದಿರದ ಅಧೀಕ್ಷಕಿ ಜಯಮಾಲಾ ದೊಡಮನಿ ಅವರಿಗೆ ನೀಡಿದರು.
ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ದೇಣಿಗೆಯಾಗಿ ನೀಡಿರುವದನ್ನು ಶಿಕ್ಷಕ ಸಣ್ಣಪ್ಪನವರ ಮಾನವೀಯತೆಗೆ ಜಿಲ್ಲಾಧಿಕಾರಿಗಳು ಆಗಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷರಾದ ಕೆ.ಎಂ.ಜಾನಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಅಕ್ಕಮಹಾದೇವಿ ಕೆ.ಎಚ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಸ್ತಗೀರಸಾಬ ಮುಲ್ಲಾ, ಹಾಗೂ ಸರ್ಕಾರಿ ಬಾಲಕಿಯರ ಬಾಲಂಮದಿರದ ಅಧೀಕ್ಷಕಿ ಜಯಮಾಲಾ ದೊಡಮನಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಚ್ ಪಿ, ಎಸ್ ಬಾಲಮಂದಿರ ಬಾಗಲಕೋಟೆ ಮುಖ್ಯೋಪಾಧ್ಯಾಯ ಕೆ.ಎವi.,ನಾಗರಾಳ ಹಾಗೂ ಶಿಕ್ಷಕ ವೃಂದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net