ಬಾಲಕಿಯನ್ನು ಕೊಂದ ಚಿಕ್ಕಮ್ಮ

5HLY-2
Published on

ಹಳಿಯಾಳ: ತಾಲೂಕಿ ತೇರಗಾಂವ ಗ್ರಾಮದಲ್ಲಿ ಭಾನುವಾರ ಅಕ್ಕಳ ಮಗಳನ್ನೇ ಮಹಿಳೆಯೊಬ್ಬಳು ಕುತ್ತಿಗೆ ಹಿಸುಕಿ ಕೊಂದಿದ್ದಾಳೆ.

ಶ್ರೀದೇವಿ ಸೋಮನಿಂಗಪ್ಪ ನಲ್ವಡಿ(9) ಕೊಲೆಯಾದ ಬಾಲಕಿ. ಸಾವಿತ್ರಿ ಉದಯಕುಮಾರ ಮುನವಳ್ಳಿ (26) ಬಂಧಿತ ಆರೋಪಿ.ಆರೋಪಿಯ ಹಿರಿಯ ಸಹೋದರಿ ಬಸವಣ್ಣೆವ್ವ ಸೋಮನಿಂಗ ನಲ್ವಡಿ ಅವರನ್ನು ಕಲಘಟಗಿಯ ಮಡಕಿ ಹೊನ್ನಳ್ಳಿಗೆ ವಿವಾಹ ಮಾಡಿಕೊಡಲಾಗಿತ್ತು. ಇವರು ನಾಲ್ಕು ವರ್ಷಗಳ ಹಿಂದೆ ಮೃತರಾಗಿದ್ದರು.

ಆಗ ಆರೋಪಿ ಸಾವಿತ್ರಿಯು ಅಕ್ಕನ ಮಗಳು ಶ್ರೀದೇವಿಯನ್ನು ತೇರಗಾಂವಕ್ಕೆ ಕರೆತಂದಿದ್ದಳು. ಆದರೆ, ಸಾವಿತ್ರಿಗೆ ತನ್ನ ಮಕ್ಕಳೊಂದಿಗೆ ಶ್ರೀದೇವಿಯನ್ನು ಸಾಕುವುದು ಕಷ್ಟವಾಗತೊಡಗಿತ್ತು. ಅಲ್ಲದೆ, ಬಾಲಕಿ ನಡವಳಿಕೆಯೂ ವಿಪರೀತವಾಗಿತ್ತು. ಇದರಿಂದ ಬೇಸತ್ತ ಸಾವಿತ್ರಿಯು ಸೀರೆಯಿಂದ ಬಾಲಕಿಯ ಕುತ್ತಿಗೆಯನ್ನು ಬಿಗಿದು ಕೊಲೆ ಮಾಡಿದಳು. ಈ ವಿಚಾರವನ್ನು ಆರೋಪಿಯು ಒಪ್ಪಿಕೊಂಡಿದ್ದು, ಹಳಿಯಾಳ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net