ಬಾಲಕಿ ಮೇಲೆ ಅತ್ಯಾಚಾರ ಅಪರಾಧಿಗೆ ಜೀವವಾಧಿ ಶಿಕ್ಷೆ

jpg
Published on

ಬಾಗಲಕೋಟೆ: ಪ್ರತಿಸುವ ನಾಟಕ ಮಾಡಿ, ಮದುವೆ ಆಗುವುದಾಗಿ ನಂಬಿಸಿ ೧೬ ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಠಿಣ ಶಿಕ್ಷೆ ಮತ್ತು ದಂಡ ವಿಽಸಿ ಆದೇಶಿಸಿದೆ.

ಅಮರನಾಥ ಪ್ರೇಮನಾಥ ಮೈಲಿ ಅಪರಾಽಯಾಗಿದ್ದು, ಅಪ್ತಾಪ್ತ ವಯಸ್ಸಿನ ಬಾಲಕಿಯನ್ನು ಪ್ರೀತಿಸಿ ಅತ್ಯಾಚಾರ ಮಾಡಿದಲ್ಲದೇ ಅಪಹರಣ ಮಾಡಿ ಒತ್ತಾಯ ಪೂರ್ವಕವಾಗಿ ಮದುವೆ ಮಾಡಿಕೊಂಡು ಸತತವಾಗಿ ಸಂಭೋಗ ಮಾಡಿ ಗರ್ಭಿಣಿಯಾಗುವಂತೆ ಮಾಡಿದ ಹಿನ್ನಲೆಯಲ್ಲಿ ಈ ಕುರಿತು ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಹುನಗುಂದ ಪೊಲೀಸ್ ಉಪಾಧೀಕ್ಷಕ ಚಂದ್ರಕಾಂತ ನಂದರಡ್ಡಿ ಪ್ರಕರಣ ವಿಚಾರಣೆ ನಡೆಸಿ ದೋಷಾರೋಪಣೆ ಸಲ್ಲಿಸಿದ್ದರು.

ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದಕ್ಕೆ ಆರೋಪಿಗೆ ಸೆಕ್ಷನ್ ೪ ಪೋಕ್ಸೋದಡಿ ೨೦ ವರ್ಷ ಕಠಿಣ ಜೈಲು ವಾಸ, ೧೦ ಸಾವಿರ ದಂಡ, ತಪ್ಪಿದಲ್ಲಿ ಇನ್ನು ೧ ವರ್ಷ ಸಾದಾ ಜೈಲು ಶಿಕ್ಷೆ, ಸೆ.೬ ಪೋಕ್ಸೋದಡಿ ೨೦ ವರ್ಷಗಳ ಕಠಿಣ ಜೈಲು ವಾಸ, ೧೦ ಸಾವಿರ ದಂಡ ತಪ್ಪಿದಲ್ಲಿ ೧ ವರ್ಷ ಸಾದಾ ಜೈಲು ಶಿಕ್ಷೆ, ಕಲಂ ೩೬೩ ಐಪಿಸಿ ಅಪರಾಧಕ್ಕೆ ೩ ವರ್ಷ ಸಾದಾ ಜೈಲು, ೩ ಸಾವಿರ ದಂಡ ತಪ್ಪಿದಲ್ಲಿ ೧ ತಿಂಗಳ ಸಾದಾ ಜೈಲುವಾಸ, ಕಲಂ ೩೬೬ದಡಿ ೩ ವರ್ಷ ಸಾದಾ ಜೈಲು ೩ ಸಾವಿರ ರೂ. ದಂಡ ಹಾಗೂ ಸೆ.೩(೨)(ವಿಎ) ಎಸ್‌ಸಿ ಮತ್ತು ಎಸ್‌ಟಿ(ಪಿಒಎ) ದಡಿ ೧೦ ವರ್ಷ ಕಠಿಣ ಜೈಲುವಾಸ ೧೦ ಸಾವಿರ ರೂ. ದಂಡ ವಿಽಸಿದೆ. ದಂಡ ಕೊಡಲು ತಪ್ಪಿದಲ್ಲಿ ೧ ವರ್ಷ ಹೆಚ್ಚುವರಿ ಸಾದಾ ಜೈಲು ಶಿಕ್ಷೆ ನೀಡುವಂತೆ ಆದೇಶಿಸಿದೆ.
ನೋಂದ ಬಾಲಕಿಗೆ ೪ ಲಕ್ಷ ರೂ.ಗಳ ಪರಿಹಾರ ಧನವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರ, ಬಾಗಲಕೋಟೆ ಇವರು ಸಹಾಯಧನವಾಗಿ ಕೊಡುವಂತೆ ಆದೇಶಿಸಿದೆ. ಈ ಪ್ರಕರಣದಲ್ಲಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರಕಾರಿ ಅಭಿಯೋಜಕ ಎಸ್.ಆರ್.ಹೊಸಮಠ ಸಾಕ್ಷಿಗಳ ವಿಚಾರಣೆ ಮತ್ತು ವಾದ ಮಂಡಿಸಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net