

ಬಾಗಲಕೋಟೆ: ಎಸ್.ಆರ್.ಪಾಟೀಲ ಸಮೂಹ ಸಂಸ್ಥೆಯ ಬಾಪೂಜಿ ಸೌಹಾರ್ದ ಸಂಘ ಇದೀಗ ಮಲ್ಟಿಸ್ಟೇಟ್ ಕ್ರೆಡಿಟ್ ಕೋ.ಆ. ಸೊಸೈಯಾಗಿ ಆಗಿದೆ. ಸದ್ಯ ೬೩೪ ಕ್ಕೂ ಹೆಚ್ಚು ಜನರಿಗೆ ಸೊಸೈಟಿ ಉದ್ಯೋಗ ನೀಡಿದ್ದು, ಮುಂಬರುವ ದಿನಗಳಲ್ಲಿ ಕನಿಷ್ಠ ೩ ರಿಂದ ೪ ಸಾವಿರ ಜನರಿಗೆ ಉದ್ಯೋಗ ನೀಡಿ, ಆ ಕುಟುಂಬಗಳಿಗೆ ಅನ್ನಹಾಕುವ ಸಂಸ್ಥೆಯಾಗಿ ಬೆಳೆಯಲಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತಿಳಿಸಿದರು.
ನವನಗರದ ಬಾಪೂಜಿ ಬ್ಯಾಂಕ್ ಆವರಣದಲ್ಲಿ ಭಾನುವಾರ ಬಾಪೂಜಿ ಮಲ್ಟಿಸ್ಟೇಟ್ ಕ್ರೆಡಿಟ್ ಕೋ.ಆ. ಸೊಸೈಟಿ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕೇವಲ ಎರಡು ಸೌಹಾರ್ದ ಸಹಕಾರಿ ಸಂಘಗಳಿಗೆ ಮಾತ್ರ ಮಲ್ಟಿಸ್ಟೇಟ್ ಬ್ಯಾಂಕಿಗೆ ಸಹಕಾರ ಇಲಾಖೆ ಎನ್‌ಒಸಿ ನೀಡಿದ್ದು, ಒಂದು ಎಸ್.ಆರ್.ಪಾಟೀಲ ನೇತೃತ್ವದ ಬಾಪೂಜಿ ಸೌಹಾರ್ದ ಮತ್ತೊಂದು ವಿಜಯಪುರದ ನನ್ನ ಸಿದ್ದಸಿರಿ ಸೌಹಾರ್ದ ಸಂಘ. ಇದರಿಂದ ಈ ಎರಡು ಸಂಸ್ಥೆಗಳ ಬಗ್ಗೆ ಅವರಿಗೆ ಇರುವ ವಿಶ್ವಾಸವನ್ನು ಎತ್ತಿತೋರಿಸುತ್ತದೆ. ಬಾಪೂಜಿಗೆ ಕೇಂದ್ರ ಸರ್ಕಾರದಿಂದ ಒಪ್ಪಿಗೆ ಸಿಕ್ಕಿದ್ದು, ಸದ್ಯ ಅವರು ಮಹಾರಾಷ್ಟçದಲ್ಲಿ ಶಾಖೆ ಆರಂಭಿಸಬಹುದು. ನಮ್ಮ ಸಂಸ್ಥೆಗೆ ಇನ್ನೊಂದು ವಾರದಲ್ಲಿ ಬರಲಿದೆ ಎಂದರು.
ಬಾಗಲಕೋಟೆ-ವಿಜಯಪುರ ಅವಳಿ ಜಿಲ್ಲೆಗಳಲ್ಲಿ ಇವತ್ತು ಸಕ್ಕರೆ ಕಾರ್ಖಾನೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ಇವೆ ಎಂದರೆ ಅದಕ್ಕೆ ಕಾರಣವೇ ಸಹಕಾರಿ, ಸೌಹಾರ್ದ ಸಂಘಗಳು. ಅದೇ ರಾಷ್ಟಿçÃಯ ಬ್ಯಾಂಕ್‌ಗಳಲ್ಲಿ ಸಾಲವೇ ಸಿಗಲ್ಲ. ಅವರು ಸಿಬಿಲ್ ರೇಟ್ ಬೇಕು ಅಂತಾರೆ. ಆದರೆ, ಕೆಲವರು ಯಾವುದೋ ಪರಿಸ್ಥಿತಿಯಲ್ಲಿ ಲಾಸ್ ಆಗಿರುತ್ತಾರೆ. ಅಂತವರಿಗೆ ಸಾಲವನ್ನೆ ಕೊಡಲ್ಲ. ಆದರೆ, ಸಹಕಾರಿ ಸಂಘಗಳು ಆಗಲ್ಲ. ನಿಯತ್ತು ಇದ್ದರೆ ಅವರು ಬಿದ್ದವರಿದ್ದರೂ ಅವರಿಗೆ ಸಾಲ ಕೊಟ್ಟು ಆರ್ಥಿಕವಾಗಿ ಮೇಲೆತ್ತುವ ಕೆಲಸ ಮಾಡುತ್ತವೆ ಎಂದು ಅದಕ್ಕೆ ಹಲವಾರು ಉದಾಹರಣೆಗಳನ್ನು ಸಹ ಮುಂದಿಟ್ಟರು.
ಈ ವಿಚಾರದಲ್ಲಿ ನಾನು ಮತ್ತು ಎಸ್.ಆರ್.ಪಾಟೀಲ ಅವರು ಒಬ್ಬರಿಗೊಬ್ಬರು ಕಾಫಿ ಮಾಡುತ್ತೇವೆ. ಅವರು ಏನಾದರೂ ಸಂಸ್ಥೆ ಆರಂಭಿಸಿದಾಗ ನಾನು ಅದನ್ನು -Áಲೋ ಮಾಡುತ್ತೇನೆ. ನಾನು ಮಾಡಿದಾಗ ಅವರು -Áಲೋ ಮಾಡುತ್ತಾರೆ. ಇದೀಗ ಎಸ್.ಆರ್.ಪಾಟೀಲ ಅವರು ಮೆಡಿಕಲ್ ಕಾಲೇಜ್ ಆರಂಭಿಸಿದ್ದಾರೆ. ಅದನ್ನು ನೋಡಿಕೊಂಡು ಬಂದಿದ್ದೇನೆ. ನಾನು ಸಹ ವಿಜಯಪುರದಲ್ಲಿ ಮೆಡಿಕಲ್ ಕಾಲೇಜು ಆರಂಭಿಸುತ್ತೇನೆ ಎಂದು ಘೋಷಿಸಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಮಾತನಾಡಿ, ಅವಳಿ ಜಿಲ್ಲೆಯಲ್ಲಿ ಎಸ್.ಆರ್.ಪಾಟೀಲ ಹಾಗೂ ಯತ್ನಾಳ್ ಅವರ ಈ ಎರಡು ಸೌಹಾರ್ದ ಸಂಘಗಳು ಇದೀಗ ಮಲ್ಟಿಸ್ಟೇಟ್ ಕ್ರೆಡಿಟ್ ಸೊಸೈಟಿಗಳಾಗಿದ್ದು, ಮುಂದಿನ ದಿನಗಳಲ್ಲಿ ಆ ಎರಡು ಸಂಸ್ಥೆಗಳು ಮಲ್ಟಿ ನ್ಯಾಶನಲ್ ಬ್ಯಾಂಕ್‌ಗಳಾದರೂ ಆಶ್ಚರ್ಯವಿಲ್ಲ. ಬಿದ್ದವರನ್ನು ಮೇಲೆತ್ತುವ ಕೆಲಸ ಸಹಕಾರಿ ರಂಗದಿAದ ಆಗಿದೆ. ಸಮಾಜದ ಪ್ರತಿಯೊಬ್ಬರಿಗೂ ಸಹಾಯ ಮಾಡಲು ಸಾಧ್ಯ ಇರುವ ಕ್ಷೇತ್ರವೆಂದರೆ ಅದು ಸಹಕಾರಿ ಕ್ಷೇತ್ರ ಎಂದು ಹೇಳಿದರು.
ಶಾಸಕ ಎಚ್.ವೈ.ಮೇಟಿ ಮಾತನಾಡಿ, ಎಸ್.ಆರ್.ಪಾಟೀಲ ಅವರ ಸಾಧನೆ ದೊಡ್ಡದು ಇದೆ. ಬಾಪೂಜಿ ಹೆಸರಿನಲ್ಲಿ ಬ್ಯಾಂಕ್ ತೆರೆದು ಇಷ್ಟೊಂದು ದೊಡ್ಡಮಟ್ಟದಲ್ಲಿ ಬೆಳೆಸಿರುವುದು ಸಣ್ಣ ಸಾಧನೆಯಲ್ಲ. ಅದರ ಜೊತೆಗೆ ಗ್ರಾಮದಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪಿಸಿರುವುದು ಅವರ ಮತ್ತೊಂದು ಮೈಲುಗಲ್ಲು. ಬಾಪೂಜಿ ಸೌಹಾರ್ದದಲ್ಲಿ ನಾನು ಸಹ ಸಾಲ ಪಡೆದುಕೊಂಡಿದ್ದೇನೆ ಎಂದು ತಿಳಿಸಿದರು.
ಎಸ್.ಆರ್.ಪಾಟೀಲ ಸಮೂಹ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಜಿ.ಎನ್.ಪಾಟೀಲ, ನಿರ್ದೇಶಕರಾದ ಎ.ಎಂ.ಶೆಟ್ಟರ, ಎಸ್.ಕೆ.ಯಡಹಳ್ಳಿ, ಪಿ.ಆರ್.ಗೌಡರ, ಎಲ್.ಕೆ.ಬಳಗಾನೂರ, ಎ.ಎಸ್.ಲಾಗಲೋಟಿ, ಆರ್.ಪಿ.ಕಲಬುರ್ಗಿ, ಎಸ್.ಬಿ.ಬೆಳಗಲಿ, ಎಂ.ಎಸ್.ಪಾಟೀಲ, ಸಿ.ಎಂ.ನ್ಯಾಮಗೌಡ, ಎಸ್.ಎಸ್.ರಂಗನಗೌಡರ, ಎಸ್.ಸಿ.ಬಂಡಿವಡ್ಡರ, ಎಸ್.ಕೆ.ತಳವಾರ, ಎಂ.ಬಿ.ಅರಳಿಕಟ್ಟಿ, ವಿ.ಎಲ್.ಕುರ್ತಕೋಟಿ, ಎಸ್,ಎಸ್.ಪಾತ್ರೋಟ, ಪ್ರಧಾನ ವ್ಯವಸ್ಥಾಪಕ ವಿ.ಎಸ್.ಭಟ್, ಮುಖ್ಯಕಾರ್ಯನಿರ್ವಾಹಣಾಽಕಾರಿ ಎಸ್.ಸಿ.ಮೋಟಗಿ ಇದ್ದರು.