ಬಾಣಂತಿ ಸಾವು, ತನಿಖೆಗೆ ಒತ್ತಾಯ

9KWR5
Published on

ಕಾರವಾರ: ಬಾಣಂತಿ ಸಾವಿನ ಪ್ರಕರಣ ಸಮರ್ಪಕ ತನಿಖೆಯಾಗಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ ಹೇಳಿದರು. ಸೆ. 3 ರಂದು ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ವೇಳೆ ಮೃತಪಟ್ಟ ಗೀತಾ ಬಾನಾವಳಿ ಅವರ ಮನೆಗೆ ಮಂಗಳವಾರ ಅವರು ಭೇಟಿ ನೀಡಿ, ತಬ್ಬಲಿಯಾಗಿರುವ ಮಗುವನ್ನು ಎತ್ತಿಕೊಂಡರು. ಪತಿ ಶಿವನಾಥ ಬಾನಾವಳಿ ಹಾಗೂ ಮೂರು ವರ್ಷದ ಮಗನಿಗೆ ಸಮಾಧಾನ ಹೇಳಿ ನೆರವು ನೀಡಿದರು. ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಚೈತ್ರಾ ಕೊಠಾರಕರ್ ಮಾತನಾಡಿ, ಬಾಣಂತಿ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು. ಕೃಷ್ಣ ಮೇಥಾ, ರಾಜು ತಾಂಡೇಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net