

ಕಾರವಾರ: ನಗರದಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದ್ದ ಸಾಗರ ಮತ್ಸ್ಯಾಲಯ ಶಾಶ್ವತವಾಗಿ ಬಾಗಿಲು ಹಾಕಿದೆ.
ಕಟ್ಟಡದ ಗೋಡೆ, ಮೇಲ್ಛಾವಣಿಗಳು ಬಿರುಕು ಬಿಟ್ಟಿದ್ದು, ಯಾವುದೇ ಹಂತದಲ್ಲಿ ಬೀಳುವ ಪರಿಸ್ಥಿತಿ ಇದೆ.
ಹಾಗಾಗಿ ಮತ್ಸ್ಯಾಲಯ ನಿರ್ವಹಣೆಯ ಟೆಂಡರ್ ಅವಧಿ ಮುಗಿಯುವ ಮೊದಲೇ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಪ್ರವೇಶವನ್ನು ನಿಷೇಧಿಸಲಾಗಿದೆ.
ಕಡಲ ತೀರದಲ್ಲಿ ಆಡಿ ಬಂದ ಜನರಿಗೆ ಕಡಲಾಳದ ಜೀವ ಸಂಕುಲಗಳ ಪರಿಚಯ ಮಾಡಿಸುವ ಕೇಂದ್ರ ಇದಾಗಿತ್ತು. ಕಡಲಾಳದಲ್ಲಿರುವ ತಲಾ 1 ಲಕ್ಷ ರೂ. ಬೆಲೆ ಬಾಳುವ ಅಪರೂಪದ ಬಣ್ಣ ಬಣ್ಣದ ಮೀನುಗಳು, ಏಡಿ,ಹಾವು ಮುಂತಾದವುಗಳು ಇಲ್ಲಿ ಜನರನ್ನು ಆಕರ್ಷಿಸುತ್ತಿದ್ದವು. ಜಿಲ್ಲಾ ಕಡಲ ತೀರಗಳ ಅಭಿವೃದ್ಧಿ ಸಮಿತಿ ಖಾಸಗಿ ಕಂಪನಿಯೊಂದಕ್ಕೆ ಗುತ್ತಿಗೆ ನೀಡಿ ಮೀನುಗಳ ನಿರ್ವಹಣೆ ಹಾಗೂ ಬರುವ ಪ್ರವಾಸಿಗದಿಂದ ಶುಲ್ಕ ವಸೂಲಿ ಜವಾಬ್ದಾರಿ ವಹಿಸಿತ್ತು. ಮತ್ಸ್ಯಾಲಯದಿಂದ ಉತ್ತಮ ಆದಾಯವೂ ಬರುತ್ತಿತ್ತು.
ಸಾಗರ ಮತ್ಸ್ಯಾಲಯ ಕಟ್ಟಡ ಶಿಥಿಲವಾಗಿದ್ದರಿಂದ ಅದನ್ನು ಬಂದ್ ಮಾಡಲಾಗಿದೆ. ಕಟ್ಟಡ ರಿಪೇರಿ ಅಥವಾ ಮರು ನಿರ್ವಣದ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಪಿಡಬ್ಲ್ಯುಡಿ ಇಂಜಿನಿಯರ್ಗೆ ಸೂಚಿಸಲಾಗಿದೆ. - ಡಾ.ಹರೀಶ ಕುಮಾರ ಕೆ., ಜಿಲ್ಲಾಧಿಕಾರಿ, ಉತ್ತರ ಕನ್ನಡ