

ಬಾಗಲಕೋಟೆ: ಜಿಲ್ಲಾ ಕೇಂದ್ರಸ್ಥಾನ ಬಾಗಲಕೋಟೆ ಮಾದರಿ ನಗರವನ್ನಾಗಿಸಲು ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ ಎಂದು ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.
ನಗರದ ವಿದ್ಯಾಗಿರಿಯ ಪ್ರಗತಿ ಮಹಿಳಾ ಮಂಡಳದ ಸಭಾಭವನದಲ್ಲಿ ಬಿಜೆಪಿ ನಗರ ಮಂಡಲ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ೩೨ನೇಯ ವಾರ್ಡಿನ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಬಾಗಲಕೋಟೆ ನಗರವನ್ನು ಮಾದರಿ ನಗರವನ್ನು ಮಾಡಲು ಸರ್ಕಾದಿಂದ ಸಾವಿರಾರು ಕೋಟಿ ರೂ,ಗಳ ಅನುದಾನ ತಂದು ಅನೇಕ ಯೋಜನೆಗಳ ಮೂಲಕ ವಿವಿಧ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ. ವಿದ್ಯಾಗಿರಿ ೩೨ನೇ ವಾರ್ಡ್ನಲ್ಲಿ ೭ ಲಕ್ಷ ರೂ, ವೆಚ್ಚದಲ್ಲಿ ಶುದ್ದ ಕುಡಿಯವು ನೀರಿನ ಘಟಕ ನಿರ್ಮಾಣ, ವಿದ್ಯಾಗಿರಿ ೧೨ ಲಕ್ಷ ರೂ. ವೆಚ್ಚದಲ್ಲಿ ೬ನೇ ಕ್ರಾಸ್ ನಗರಸಭೆ ವಾಣಿಜ್ಯ ಮಳಿಗೆಗಳ ಮುಂಭಾಗ ರಸ್ತೆಗ ಪೇವರ್ ಬ್ಲಾಕ್ ರಸ್ತೆ ನಿರ್ಮಾಣ, ೩೨ ಲಕ್ಷ ರೂ. ವೆಚ್ಚದಲ್ಲಿ ವಿದ್ಯಾಗಿರಿ ೩ನೇ ಕ್ರಾಸ್ ನಲ್ಲಿ ಪೇವರ್ ಬ್ಲಾಕ್ ಹಾಗೂ ಆರ್.ಸಿ.ಸಿ ಚರಂಡಿ ನಿರ್ಮಾಣ ಸೇರಿದಂತೆ ಸೇರಿದಂತೆ ಅಂದಾಜು ೪.೮ ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳು ಆಗಿವೆ ಎಂದರು.
ಇನ್ನು ನಗರೋತ್ಥಾನ ವಿಶೇಷ ಯೋಜನೆ ಅನುದಾನದಲ್ಲಿ ವಿದ್ಯಾಗಿರಿ ೩೨ ಹಾಗೂ ೩೩ರಲ್ಲಿ ೬ ನೇ ರಸ್ತೆಯಿಂದ ೨೦ ನೇ ರಸ್ತೆಯವರೆಗೂ ಎಲ್ಲ ರಸ್ತೆಗಳು ೫ ಕೋಟಿ ರೂ. ವೆಚ್ಚದಲ್ಲಿ ಡಾಂಬರಿಕರಣವಾಗಲಿವೆ. ಅದರಂತೆ ಎಲ್ಲ ವಾರ್ಡಗಳಲ್ಲಿಯೂ ಕೂಡಾ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಲಕ್ಷಿ÷್ಮÃ ನಾರಾಯಣ ಕಾಸಟ್, ಮುಖಂಡರಾದ ಸುನಿಲ ಅಂಬೋರೆ, ಸಂಗಮೇಶ ಗುಡ್ಡದ, ಲಕ್ಷ÷್ಮಣ ಹಡಪದ, ಕೃಷ್ಣಾಜಿ ರಾಜೂರ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಬಸವರಾಜ ಅವರಾದಿ, ನಗರ ಮಂಡಲ ಅಧ್ಯಕ್ಷ ಸದಾನಂದ ನಾರಾ, ಸದಸ್ಯ ಭುವನೇಶ್ವರಿ ಕುಪ್ಪಸ್ತ, ಬಿಜೆಪಿ ಉಪಾಧ್ಯಕ್ಷ ರಾಜು ರೇವಣಕರ, ಮಹಾಂತೇಶ ಶೆಟ್ಟರ, ಪ್ರಭು ಹಡಗಲಿ, ಭಾಗ್ಯಶ್ರೀ ಹಂಡಿ, ಶಂಕರ ಮಡಿವಾಳ, ಬದವರಾಜ ಹುನಗುಂದ, ಉಮೇಶ್ ಹಂಚಿನಾಳ ಸೇರಿದಂತೆ ಇತರರು ಇದ್ದರು.