ಬಾಗಲಕೋಟೆ ಪ್ರಥಮ ಪ್ರಜೆ ಆಯ್ಕೆ ಇನ್ನೂ ಕುತೂಹಲ !

bkt-28-11
ಬಾಗಲಕೋಟೆ ನಗರಸಭೆ
Published on

ಅಶೋಕ ಶೆಟ್ಟರ, ಬಾಗಲಕೋಟೆ:
ಬಹುಮತ ಇರುವ ಸ್ಥಳೀಯ ಸಂಸ್ಥೆಗಳನ್ನು ಒಂದೊಂದಾಗಿ ಕಳೆದುಕೊಳ್ಳುವ ಮೂಲಕ ತೀವ್ರ ಮುಜುಗರಕ್ಕೆ ಈಡಾಗಿರುವ ಬಿಜೆಪಿಗೆ ಬಾಗಲಕೋಟೆಯಲ್ಲೂ ಆಗಬಹುದು ಎನ್ನಲಾಗುತ್ತಿದ್ದ ಮುಖಭಂಗ ತಪ್ಪಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.
ಸಂಪೂರ್ಣ ಬಹುಮತ ಹೊಂದಿರುವ ಬಾಗಲಕೋಟೆ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಇಂದು (ಆ. ೨೯) ನಡೆಯಲಿದ್ದು, ಇಲ್ಲಿಯೂ ಸಹ ಟ್ಟು ಸದಸ್ಯರ ಪೈಕಿ ಕಾಳುಭಾಗ ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಆಪರೇಷನ್ ಹಸ್ತದ ಮೂಲಕ ಅಽಕಾರ ಗದ್ದುಗೆ ಹಿಡಿಯಲು ಕೆಲ ಮುಖಂಡರು ಪ್ರಯತ್ನ ನಡೆಸಿದ್ದರು. ಆದರೆ, ಕೈ ಮೇಲಾಟಕ್ಕೆ ಅವಕಾಶ ಕೊಡದೇ ತನ್ನ ಸದಸ್ಯರನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಬಿಜೆಪಿ ಯಶಸ್ವಿ ಆಗಿದ್ದು, ಕೈ ಲೆಕ್ಕಾಚಾರ ಬುಡಮೇಲು ಮಾಡಿದ್ದಾರೆ. ಇದರಿಂದ ಬಿಜೆಪಿ ಮುಖಂಡರು ಘೋಷಿಸುವ ಸದಸ್ಯರೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗುವುದು ಪಕ್ಕಾ ಆಗಿದೆ.
ಬಿಜೆಪಿ ಸದಸ್ಯರೇ ಅಧ್ಯಕ್ಷ-ಉಪಾಧ್ಯಕ್ಷ ಆಗುವುದು ನಿಶ್ಚಿತ ಆಗಿದ್ದರೂ ಆ ಅದೃಷ್ಟ ಯಾರಿಗೆ ಎನ್ನುವುದು ಈ ಕ್ಷಣದ ವರೆಗೂ ವರಿಷ್ಠರು ಗುಟ್ಟು ಬಿಟ್ಟುಕೊಟ್ಟಿಲ್ಲ. ಬಾಗಲಕೋಟೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ನಿರ್ಧಾರಕ್ಕೆ ತಾವೆಲ್ಲ ಬದ್ಧರು ಎನ್ನುವ ಅಭಯವನ್ನು ಬಿಜೆಪಿ ಸದಸ್ಯರು ನೀಡಿದ್ದಾರೆ. ಆದರೂ ಸಹ ಚರಂತಿಮಠ ಅವರು ಈ ವರೆಗೂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಯಾರು ನಾಮಪತ್ರ ಸಲ್ಲಿಸಬೇಕು ಎಂದು ಹೇಳಿಲ್ಲ. ಬದಲಿಗೆ ಗುರುವಾರ ಬೆಳಗ್ಗೆ ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಅವರೊಂದಿಗೆ ಕೂಡಿಕೊಂಡು ಯಾರು ಬಾಗಲಕೋಟೆ ಪ್ರಥಮ ಪ್ರಜೆ ಆಗಲು ನಾಮಪತ್ರ ಸಲ್ಲಿಸಬೇಕು ಎಂದು ಘೋಷಿಸಲಿದ್ದಾರಂತೆ.

ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಏನಿದೆ…?

ಬಾಗಲಕೋಟೆ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸಾಮಾನ್ಯಕ್ಕೆ ಮೀಸಲಾತಿ ಬಂದಿದೆ. ಹಾಗೆ ನೋಡಿದರೆ ಬಿಜೆಪಿಯಿಂದ ಗೆದ್ದು ಬಂದಿರುವ ೨೯ ಸದಸ್ಯರು ಹಾಗೂ ಬೆಂಬಲಿಸಿದ ಓರ್ವ ಪಕ್ಷೇತರ ಸದಸ್ಯ ಸೇರಿ ೩೦ ಸದಸ್ಯರು ಆಯ್ಕೆಗೆ ಅರ್ಹರು ಇದ್ದಾರೆ. ಆದರೆ, ಸಾಮಾನ್ಯ ಕ್ಷೇತ್ರಕ್ಕೆ ಬಂದಿರುವುದರಿಂದ ಮಾಜಿ ಶಾಸಕ ಚರಂತಿಮಠ ಅವರು ಮೀಸಲಾಗಿಯಲ್ಲಿ ಅವಕಾಶ ಇರುವ ಸದಸ್ಯರನ್ನು ಹೊರತುಪಡಿಸಿ ಉಳಿದವರಿಗೆ ಅವಕಾಶ ಎನ್ನುವ ಸೂತ್ರ ರೂಪಿಸಿದ್ದಾರೆ. ಅದರಂತೆ ಅಧ್ಯಕ್ಷ ಸ್ಥಾನಕ್ಕೆ ಆರು ಜನ ಮಹಿಳೆಯರು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರು ಸ್ಪರ್ಧೆಯಲ್ಲಿ ಇದ್ದಾರೆ ಎಂದು ತಿಳಿಸಿದ್ದು, ಇದೀಗ ಆ ಅರು ಜನರಲ್ಲಿ ಯಾರು ಹಿತವರು ಪ್ರಥಮ ಪ್ರಜೆ ಆಗಲು ಎನ್ನುವ ಕುತೂಹಲವನ್ನು ಕೊನೆ ಕ್ಷಣದ ವರೆಗೂ ಮುಂದುವರೆಯುವಂತೆ ಮಾಡಿದ್ದಾರೆ ಪಕ್ಷದ ಮುಖಂಡರು.

ಯಾರಿದ್ದಾರೆ ಅಧ್ಯಕ್ಷ-ಉಪಾಧ್ಯಕ್ಷ ರೇಸ್ ನಲ್ಲಿ :

ಬಿಜೆಪಿ ಮುಖಂಡರು ಸಿದ್ದಪಡಿಸಿದ ಸೂತ್ರದಂತೆ ಅಧ್ಯಕ್ಷ ಸ್ಥಾನಕ್ಕೆ ಆರು ಜನ ಮಹಿಳೆಯರು ಇದ್ದು, ಈ ಪೈಕಿ ಶೋಭಾ ರಾವ್, ಸವಿತಾ ಲೆಂಕಣ್ಣವರ ಹೆಸರು ಗುಂಯ್ ಗುಟ್ಟುತ್ತಿದೆ. ಜೊತೆಗೆ ಶಿವಲೀಲಾ ಪಟ್ಟಣಶೆಟ್ಟಿ, ರತ್ನಾ ಕೆರೂರ, ರೇಖಾ ಕಲಬುರಗಿ, ಪಾರ್ವತಿ ಅಕ್ಕಿಮರಡಿ ಅವರ ಹೆಸರು ಕೇಳಿ ಬರುತ್ತಿದೆ. ಇನ್ನು ಉಪಾಧ್ಯಕ್ಷರ ರೇಸ್ ನಲ್ಲಿ ಚನ್ನವೀರಯ್ಯ ಹಿರೇಮಠ, ಶಿವಬಸವ ಬಳ್ಳಾರಿ ಹೆಸರು ಸೂತ್ರದ ಅನ್ವಯ ಇದೆ. ಆದರೆ, ಅಧ್ಯಕ್ಷ ಸ್ಥಾನದ ಜೊತೆಗೆ ಉಪಾಧ್ಯಕ್ಷ ಸ್ಥಾನವನ್ನು ಮಹಿಳೆಯರಿಗೆ ಕೊಟ್ಟರೆ ಹೇಗೆ ಎನ್ನುವ ಮಾತನ್ನು ಮಾಜಿ ಶಾಸಕ ಚರಂತಿಮಠ ಅವರು ಬುಧವಾರ ನಗರಸಭೆ ಸದಸ್ಯರ ಸಭೆಯಲ್ಲಿ ಹರಿಬಿಟ್ಟಿದ್ದಾರೆ. ಹೀಗಾಗಿ ಎರಡು ಸ್ಥಾನಗಳನ್ನು ಮಹಿಳೆಯರಿಗೆ ಕೊಡುತ್ತಾರಾ ಅಥವಾ ಉಪಾಧ್ಯಕ್ಷ ಸ್ಥಾನವನ್ನು ಪುರುಷರಿಗೆ ಕೊಡುತ್ತಾರಾ ಎನ್ನುವುದು ಗುರುವಾರ ಬೆಳಗ್ಗೆಯೇ ಸ್ಪಷ್ಟವಾಗಲಿದೆ.

ಕೆಲ ಸದಸ್ಯರಿಗೆ ಲೆಪ್ಟರೈಟ್ :
ಇನ್ನು ಕಳೆದ ನಾಲ್ಕÊೆದು ದಿನಗಳಿಂದ ಬಾಗಲಕೋಟೆ ನಗರಸಭೆಯೂ ಸಹ ಬಿಜೆಪಿ ಕೈತಪ್ಪಲಿದೆ. ಆಪರೇಷನ್ ಹಸ್ತ ಜೋರಾಗಿ ನಡೆದಿದೆ ಎನ್ನುವ ಸುದ್ದಿ ದೊಡ್ಡಮಟ್ಟದ ಸೌಂಡ್ ಮಾಡಿತ್ತು. ಅದಕ್ಕೆ ಪೂರಕ ಎನ್ನುವಂತೆ ಕೆಲ ಸದಸ್ಯರನ್ನು ಸಂಪರ್ಕಿಸಿ, ಅವರಿಗೆ ಉಡುಗೊರೆಗಳ ಆಮಿಶ ಸಹ ಒಡ್ಡಲಾಗಿತ್ತು ಎನ್ನುವ ಮಾತುಗಳು ಇವೆ. ಉಡುಗೊರೆಯ ಜೊತೆಗೆ ಮುಂಬರುವ ನಗರಸಭೆ ಚುನಾವಣೆಗಳಲ್ಲಿ ಸ್ಪರ್ಧೆಗೆ ಅವಕಾಶ ಹಾಗೂ ಗೆಲ್ಲಿಸುವ ಅಭಯವನ್ನು ನೀಡಿದ್ದಾರೆ. ಹೀಗಾಗಿ ಹತ್ತಕ್ಕೂ ಹೆಚ್ಚು ಸದಸ್ಯರು ಕೈಪಡೆಯ ಸಂಪರ್ಕದಲ್ಲಿ ಇದ್ದಾರೆ ಎನ್ನುವ ಮಾತುಗಳು ಇದ್ದವು.
ಈ ಸುದ್ದಿ ಮಾಜಿ ಶಾಸಕರ ಚರಂತಿಮಠ ಅವರ ಗಮನಕ್ಕೂ ಬಂದಿತ್ತು ಎನ್ನಲಾಗುತ್ತಿದೆ. ಹೀಗಾಗಿ ಬುಧವಾರ ಕರೆದ ಸದಸ್ಯರ ಸಭೆಯಲ್ಲಿ ಚಂಚಲ ಮನಸ್ಸಿನ ಕೆಲ ಸದಸ್ಯರಿಗೆ ಲೆಪ್ಟರೈಟ್ ತೆಗೆದುಕೊಂಡಿದ್ದು, ಪಕ್ಷಾಂತರ ಮಾಡುವುದಿದ್ದರೆ ಮಾಡಿ, ಆದರೆ, ನಮ್ಮಲ್ಲೆ ಇದ್ದುಕೊಂಡು ಪಕ್ಷಕ್ಕೆ ವಿರುದ್ಧವಾಗಿ ನಡೆದುಕೊಳ್ಳಬೇಡಿ ಎಂದು ನೇರವಾಗಿಯೇ ಕೆಲವರಿಗೆ ಕಿವಿ ಹಿಂಡಿದ್ದಾರಂತೆ. ಚಹಾಕೂಟಕ್ಕೆ, ಪ್ರತ್ಯೇಕವಾಗಿ ಪಿಸುಮಾತನ್ನಾಡಿದವರ ಬಗ್ಗೆಯೂ ಸಂಬಂಽಸಿದವರಿಗೆ ಹೇಳಿದ್ದಾರಂತೆ. ಯಾವುದೇ ಕಾರಣಕ್ಕೂ ಪಕ್ಷದ ವಿರುದ್ಧ ನಡೆದುಕೊಳ್ಳಲ್ಲ ಎನ್ನುವ ಅಭಯವನ್ನು ಸದಸ್ಯರೆಲ್ಲರೂ ನೀಡಿದ್ದು, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ತಾವು ಯಾರ ಹೆಸರು ಹೇಳುತ್ತೀರಿ ಅವರನ್ನೆ ಬೆಂಬಲಿಸುವುದಾಗಿ ಎಲ್ಲ ಸದಸ್ಯರು ಭರವಸೆ ನೀಡಿದ್ದಾರೆ. ಹೀಗಾಗಿ ಗುರುವಾರ ನಾಮಪತ್ರ ಸಲ್ಲಿಕೆಗೂ ಸ್ವಲ್ಪ ಹೊತ್ತು ಮುಂಚೆ ಹೆಸರು ಘೋಷಿಸಲಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಕೇವಲ ಐದು ಸದಸ್ಯರನ್ನು ಇಟ್ಟುಕೊಂಡು ನಗರಸಭೆ ಗದ್ದುಗೆ ಕಸನು ಕಾಣುತ್ತಿದ್ದ ಕೈಪಡೆಗೆ ಇದೀಗ ನಿರಾಸೆ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net