ಬಾಗಲಕೋಟೆ ನಗರ ಅಭಿವೃದ್ಧಿಗೆ ಶ್ರಮಿಸಿದ್ದೆ

bkt-27-3 (2)
ಬಾಗಲಕೋಟೆ ನಗರದ ಕಿಲ್ಲಾ ಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ವೈ.ಮೇಟಿ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದರು.
Published on

ಬಾಗಲಕೋಟೆ: ಬಾಗಲಕೋಟೆ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ವೈ.ಮೇಟಿ ಅವರಿಗೆ ನಗರದ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಸ್ಪಂಧನೆ ವ್ಯಕ್ತವಾಗುತ್ತಿದ್ದು, ಪಾದಯಾತ್ರೆ ಮೂಲಕ ಮನೆ ಮನಗೆ ಹೋಗಿ ಮತಯಾಚಿಸುತ್ತಿರುವ ಎಚ್.ವೈ.ಮೇಟಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ಯುವಕರ, ಮಹಿಳೆಯರು ಉತ್ತಮ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ಗುರುವಾ ನಗರದ ಕಿಲ್ಲಾದಲ್ಲಿರುವ ಗಣೇಶ ದೇವಸ್ಥಾನಕ್ಕೆ, ಕೊತ್ತಲೇಶ್ವರ ದೇವಾಲಯ, ಶಿವ ಭವಾನಿ, ಕೇದಾರೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಪಾದಯಾತ್ರೆ ಮಾಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಅಗತ್ಯ ದಿನ ಬಳಕೆ ವಸ್ತುಗಳ ಬೆಲೆೆ ಏರಿಕೆ ಮಾಡಿ ಜನರನ್ನು ಸಂಕಷ್ಟಕ್ಕೆ ದೂಡಿದೆ. ಭ್ರಷ್ಟ ಬಿಜೆಪಿ ಸರ್ಕಾರವನ್ನು ಸೋಲಿಸಲು ಕಾಂಗ್ರೆಸ್‌ಗೆ ಮತ ನೀಡಬೇಕು. ಈ ಹಿಂದೆ ನನ್ನ ಅವಽಯಲ್ಲಿ ನಗರೋತ್ಥಾನ ಯೋಜನೆಯಡಿ ಬಾಗಲಕೋಟೆ ನಗರ ಅಭಿವೃದ್ಧಿಗೆ ೩೫ ಕೋಟಿ ಮತ್ತು ನಡುಗಡ್ಡೆಯಾಗುತ್ತಿದ್ದ ಕಿಲ್ಲಾ ಪ್ರದೇಶದಲ್ಲಿರುವ ಜನರಿಗೆ ಪುನರ್ ವಸತಿ ಕಲ್ಪಿಸಲಾಗಿದೆ ಎಂದರು.

ಬಸವೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಮತಯಾಚನೆ ವೇಳೆ ಮಾತನಾಡಿ, ಈ ಚುನಾವಣೆಯಲ್ಲಿ ಕಾಂಗ್ರೆಸ್ ಗಾಳಿ ಬೀಸುತ್ತಿದ್ದು ಎಲ್ಲರೂ ಕಾಂಗ್ರೆಸ್ ಸೇರುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಽಕಾರದ ಚುಕ್ಕಾಣೆ ಹಿಡಿಯುವುದು ಖಚಿತ. ಬಿಪಿಎಲ್ ಕುಟುಂಬಕ್ಕೆ ೧೦ ಕೆ.ಜಿ ಅಕ್ಕಿ, ೨೦೦ ಯುನಿಟ್ ವಿದ್ಯುತ್ ಉಚಿತ, ಮನೆಯ ಪ್ರತಿ ಯಜಮಾನಿಗೆ ಮಾಸಿಕ ೨೦೦೦ ರೂಪಾಯಿ ಹಾಗೂ ಪದವೀಧರರಿಗೆ ನಿರುದ್ಯೋಗದ ಭತ್ಯೆ ನೀಡಲಾಗುವುದು ಹೀಗೆ ಅನೇಕ ಯೋಜನೆಗಳು ಬಡವರ, ಮಾಧ್ಯಮ ವರ್ಗಗಳ ಪರವಾಗಿ ಇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಽಕಾರಕ್ಕೆ ಬಂದರೆ ಈ ಗ್ಯಾರೆಂಟಿ ಯೋಜನೆಗಳು ಜಾರಿಯಾಗಲಿವೆ ಎಂದು ಹೇಳಿದರು.
ಜಿಪಂ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ ಮಾತನಾಡಿ, ಎಲ್ಲ ಜಾತಿ, ಧರ್ಮದವರ ಜೊತೆಯಲ್ಲಿ ಸಹೋದರತ್ವ ಸಂಬಂಧವನ್ನು ಹೊಂದಿರುವ ನಮ್ಮ ತಂದೆಯವನ್ನು ಮತ ನೀಡಿ ಸ್ವಾಸ್ತ್ಯ ಸಮಾಜ ನಿರ್ಮಾಣಕ್ಕೆ ಕಾಂಗ್ರೆಸ್ ಗೆಲ್ಲಿಸಿ ಎಂದರು.

ಮುಖಂಡ ಬಸವಪ್ರಭು ಸರನಾಡಗೌಡ ಮಾತನಾಡಿ, ಕಾಂಗ್ರೆಸ್ ಪಕ್ಷವು ಎಲ್ಲ ಜಾತಿ, ಧರ್ಮದವರ ಪಕ್ಷವಾಗಿದೆ. ಜನ ಕಲ್ಯಾಣಕ್ಕೆ ಕಾರ್ಯಕ್ರಮ ನೀಡುತ್ತಾ ಬಂದಿದೆ. ರಾಜ್ಯದ ಜನ ಈ ಸಾರಿ ಬದಲಾವಣೆ ಬಯಸಿದ್ದು, ಕಾಂಗ್ರೆಸ್‌ಗೆ ಅವಕಾಶ ನೀಡಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ನಾಗರಾಜ ಹದ್ಲಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ, ಶ್ರೀನಿವಾಸ ಬಳ್ಳಾರಿ, ಶಂಕರ ತಪಶೆಟ್ಟಿ, ಸಂಜೀವ ವಾಡ್ಕರ, ರಾಜು ಹುಲ್ಯಾಳ, ಸಂತೋಷ ರಾಮತಾಳ, ಆನಂದ ಜಿಗಜಿನ್ನಿ, ಮಾಹಂತೇಶ ಧರಮತ್ತಿ, ಮುಲ್ಲು ಕಲ್ಯಾಣಿ, ಶಿವು ನಂದಿಕೋಳಮಠ,ಮುಲ್ಲು ಶಿರೂರು, ಭರತ ಈಟಿ, ಮಲ್ಲ ವಡಗೇರಿ, ವಿರೇಶ ಹುಂಡೆಕರ, ನಗರಸಭೆ ಸದಸ್ಯ ಚನ್ನವೀರ ಅಂಗಡಿ, ಮಲ್ಲಿಕಾರ್ಜುನ ತಪ್ಪಶೆಟ್ಟಿ, ಅಂದಾನೇಪ್ಪ ಬ್ಯಾಡಗಿ, ನಾರಾಯಣ ದೇಸಾಯಿ, ಕಲ್ಪನಾ ಮೇಟಿ, ರೇಣುಕಾ ನಾರಾಯಣಕರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net