

ಬಾಗಲಕೋಟೆ: ಬಾಗಲಕೋಟೆ ನಗರಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಗರೋತ್ಥಾನ -೪ ಅಡಿಯಲ್ಲಿ ಕೈಗೊಳ್ಳಲಾಗಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಶಾಸಕ, ಬಿಟಿಡಿಎ ಅಧ್ಯಕ್ಷ ಎಚ್.ವೈ.ಮೇಟಿ ಹೇಳಿದರು.
ನಗರದ ಮಹಾವೀರ ರಸ್ತೆಯಲ್ಲಿರುವ ಮಾರುಕಟ್ಟೆ ಪ್ರಾರಂಗಣದಲ್ಲಿ ಶನಿವಾರ ನಗರಸಭೆ, ನಗರಾಭಿವೃದ್ಧಿ ಕೋಶ ಇಲಾಖೆಯು ನಗರೋತ್ಥಾನ -೪ ಅಡಿಯಲ್ಲಿ ೩.೩೦ ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮಾರುಕಟ್ಟೆ ಪ್ರದೇಶದ ಒಳಗೆ ಇರುವ ಅಂಗಡಿ ಮುಂಗಟ್ಟುಗಳನ್ನು ಅಭಿವೃದ್ಧಿ ಪಡಿಸಿ ಸುಸಜ್ಜಿತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸಾರ್ವ ಜನಿಕರು, ತರಕಾರಿ ಮಾರಾಟಗಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಇದರ ಜೊತೆಗೆ ೧೦ ಅಂಗನವಾಡಿ, ಗ್ರಂಥಾಲಯಗಳು, ಸೋಲಾರ ಲೈಟ ಸೇರಿದಂತೆ ವಿವಿಧ ಕಾಮಗಾರಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅನುದಾನ ನೀಡಿದೆ. ಅಚ್ಚುಕಟ್ಟಾದ ಕೆಲಸ ಆಗಬೇಕು. ಒಟ್ಟಾರೆ ಬಾಗಲಕೋಟೆ ನಗರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ವಿ.ಪ ಸದಸ್ಯ ಪಿ.ಎಚ್ .ಪೂಜಾರ ಮಾತನಾಡಿ, ಮುಳಗಡೆ ಹೊಂದಿರುವ ಬಾಗಲಕೋಟೆಯಲ್ಲಿ ಮಾರುಕಟ್ಟೆ ಚಟುವಟಿಕೆಗಳು ಮೊದಲಿನಂತೆ ಬರಬೇಕು. ಇದರಿಂದ ಸಹಜ ಸ್ಥಿತಿಗೆ ಬಾಗಲಕೋಟೆ ಬರುವಂತಾಗಬೇಕು. ಸರ್ಕಾರ ಕೈಗೊಳ್ಳುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಅಽಕಾರಿಗಳು, ಗುತ್ತಿಗೆದಾರರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದರು.
ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆನ್ನವರ, ಸದಸ್ಯರಾದ ಸರಸತ್ವಿ ಕುರಬರ, ರೇಖಾ ಕಲಬುರಗಿ, ಭುವನೇಶ್ವರಿ ಕುಪ್ಪಸ್ತ, ಲಕ್ಷಿ÷್ಮÃ ಚವ್ಹಾಣ್, ಪ್ರೇಮಾ ಅಂಬಿಗೇರ, ಮುಖಂಡರಾದ ಹನುಮಂತ ರಾಕುಂಪಿ, ನಾಗರಾಜ ಹದ್ಲಿ, ಗೋವಿಂದ ಬಳ್ಳಾರಿ, ಕಿಶೋರ ಸುರಪುರ, ಶಂಕರ ನಾಯಕ, ರಜಾಕ ಬೆನ್ನೂರ, ಮಲ್ಲು ವಡಗೇರಿ, ಸಿಕಂದರ ಅಥಣಿ, ರಾಜು ಮನ್ನಿಕೇರಿ, ಆಯುಕ್ತ ಆರ್.ವಾಸಣ್ಣ, ಎಸ್.ಜಿ.ಖಾಜಿ ಇದ್ದರು.