ಬಾಗಲಕೋಟೆ ಜಿಲ್ಲೆಯ ವಿವಿಧೆಡೆ ಲೋಕಾ ಶಾಕ್ !

bkt-24-12
ಲೋಕಾಯುಕ್ತರು ದಾಳಿ ನಡೆಸಿದ ಬಾಗಲಕೋಟೆ ನವನಗರದಲ್ಲಿ ಇರುವ ಸಿಪಿಐ ಬಿ.ಡಿ.ಪಾಟೀಲ ಅವರ ನಿವಾಸ.
Published on

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ವಿವಿಧೆಡೆ ಮಂಗಳವಾರ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ಅಽಕಾರಿಗಳು ದಾಳಿ ನಡೆಸಿ, ಇಬ್ಬರು ಅಽಕಾರಿಗಳ ಕುಟುಂಬದವರಿಗೆ ಶಾಕ್ ನೀಡಿದ್ದಾರೆ.

ಧಾರವಾಡದ ಕರ್ನಾಟಕ ನೀರಾವರಿ ನಿಗಮದ ಮಲಪ್ರಭಾ ಪ್ರಾಜಕ್ಟ್ನ ಮುಖ್ಯ ಎಂಜನಿಯರ್ ಅಶೋಕ ವಾಸನದ ಅವರ ಮನೆಗಳು ಇರುವ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರ ಹಾಗೂ ಬಾಗಲಕೋಟೆ ತಾಲೂಕಿನ ಖಜ್ಜಿಡೋಣಿ ಗ್ರಾಮದ ನಿವಾಸಗಳ ಮೇಲೆ ಧಾರವಾಡ ಲೋಕಾಯುಕ್ತ ಅಽಕಾರಿಗಳ ತಂಡ ದಾಳಿ ನಡೆಸಿ ಅನೇಕ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಹಾಗೆಯೇ ಗದಗ ನಗರ ಠಾಣೆ ಸಿಪಿಐ ಆಗಿರುವ ಬಾಗಲಕೋಟೆ ಮೂಲದ ಬಿ.ಡಿ.ಪಾಟೀಲ ಅವರ ನಿವಾಸಗಳ ಮೇಲೆ ದಾಳಿ ನಡೆದಿದೆ. ಬಾಗಲಕೋಟೆ ನವನಗರದ ಸೆಕ್ಟರ್ ನಂಬರ್ ೧೮ ಹಗೂ ತಾಲೂಕಿನ ಛಬ್ಬಿ ಗ್ರಾಮದಲ್ಲಿ ಇರುವ ಅವರ ನಿವಾಸದ ಮೇಲೆ ದಾಳಿ ನಡೆಸಿ, ಅನೇಕ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಗದಗ ಲೋಕಾಯುಕ್ತ ಅಽಕಾರಿಗಳ ತಂಡ ಈ ದಾಳಿ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net