ಬಾಗಲಕೋಟೆ ಗ್ರಾಮ ದೇವತೆ ಜಾತ್ರಾಮಹೋತ್ಸವ

bkt-19-11
ಬಾಗಲಕೋಟೆ ಕಿಲ್ಲಾದ ಗ್ರಾಮ ದೇವತೆ ಜಾತ್ರಾಮಹೋತ್ಸವದ ಸಮಿತಿಯ ಗೌರವಾಧ್ಯಕ್ಷ ಬಸವಪ್ರಭು ಸರನಾಯಕ ಅವರು ಸುದ್ದಿಗೋಷ್ಠಿಯಲ್ಲಿ ಜಾತ್ರೆಯ ಬಗ್ಗೆ ವಿವರ ನೀಡಿದರು. ಸಮಿತಿ ಅಧ್ಯಕ್ಷ ಬಂಡೇರಾವ್ ಸರದೇಸಾಯಿ, ಉಪಾಧ್ಯಕ್ಷ ಅಶೋಕ ಲಿಂಬಾವಳಿ, ನಾಗರಾಜ್ ಹದ್ಲಿ ಮತ್ತಿತರರು ಇದ್ದರು.
Published on

ಬಾಗಲಕೋಟೆ: ದಶಕಗಳ ಕಾಲ ನಿಂತುಹೋಗಿ, ೨೦೨೧ರಲ್ಲಿ ಪುನಾರಂಭವಾಗಿರುವ ಬಾಗಲಕೋಟೆ ಗ್ರಾಮ ದೇವತೆ ಜಾತ್ರಾ ಮಹೋತ್ಸವ ಈ ಸಲ ಡಿ. ೨೦ ರಿಂದ ೨೪ ವರೆಗೆ ಐದು ದಿನಗಳ ಕಾಲ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ನಡೆಯಲಿದೆ.

ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಗ್ರಾಮ ದೇವತೆ ಜಾತ್ರಾ ಮಹೋತ್ಸವಕ್ಕೆ ಈಗಾಗಲೇ ಇಡೀ ಬಾಗಲಕೋಟೆ ನಗರ ಸಜ್ಜಾಗಿದ್ದು, ಐದು ದಿನಗಳ ಕಾಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಬೆಳಗ್ಗೆಯಿಂದ ತಡರಾತ್ರಿ ವರೆಗೂ ನಡೆಯಲಿವೆ ಎಂದು ಗ್ರಾಮ ದೇವಿ ಸೇವಾ ಸಮಿತಿ ತಿಳಿಸಿದೆ.

ಈ ಬಗ್ಗೆ ಕಿಲ್ಲಾದಲ್ಲಿ ಇರುವ ಗ್ರಾಮ ದೇವತೆ ದ್ಯಾಮವ್ವ ದೇವಿ ಶಕ್ತಿಪೀಠದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಮಿತಿ ಗೌರವಾಧ್ಯಕ್ಷ ಬಸವಪ್ರಭು ಸರನಾಡಗೌಡ ಹಾಗೂ ಉಪಾಧ್ಯಕ್ಷ ಅಶೋಕ ಲಿಂಬಾವಳಿ ವಿವರಿಸಿದರು.

ಜಾತ್ರೆಯ ಹಿನ್ನೆಲೆಯಲ್ಲಿ ಹಳೇ ಬಾಗಲಕೋಟೆ ತರಕಾರಿ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಬೇರೆ ಕಡೆಗೆ ಸ್ಥಳಾಂತರ ಮಾಡಲು ಎಲ್ಲ ತರಕಾರಿ ವ್ಯಾಪಾರಸ್ಥರು ಒಪ್ಪಿದ್ದು, ಆ ಜಾಗದಲ್ಲಿ ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅದರ ಪಕ್ಕದಲ್ಲಿ ಹನುಮಾನ ದೇವಸ್ಥಾನದ ಹತ್ತಿರದ ಬಯಲು ಜಾಗೆಯಲ್ಲಿ ಐದು ದಿನಗಳ ಕಾಲ ಭಕ್ತರಿಗೆ ನ್ನ ಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಜಾತ್ರೆಯ ಹಿನ್ನೆಯಲ್ಲಿ ಡಿ. ೧೯ ರಂದು ಬೆಳಗ್ಗೆ ಗೋ ಪೂಜೆ ನಡೆಯಲಿದ್ದು, ಬಳಿಕ ರೈತರಿಗಾಗಿ ಎತ್ತಿನ ಬಂಡಿ ಸ್ಪರ್ಧೆ ನಡೆಯಲಿದೆ. ಡಿ. ೨೦ ರಂದು ಜಾತ್ರಾ ಮಹೋತ್ಸವ ಆರಂಭವಾಗಲಿದ್ದು, ಅಂದು ನಗರದ ಪ್ರಮುಖ ಬೀದಿಗಳಲ್ಲಿ ದೇವಿಯರ ಭವ್ಯ ಮೆರವಣಿಗೆ ಹಾಗೂ ಕುಂಭ ಮೆರವಣಿಗೆ ನಡೆಯಲಿದ್ದು, ಅಂದಾಜು ಎರಡು ಸಾವಿರದಷ್ಟು ಮಹಿಳೆಯರು ಕುಂಭ ಹೊತ್ತು ಪಾಲ್ಗೊಳ್ಳಲಿದ್ದಾರೆ. ಹಾಗೆಯೇ ಮೆರವಣಿಗೆಯಲ್ಲಿ ರೋಬೋಟ್ ಆನೆ ಸಹ ಇರುತ್ತದೆ. ಜೊತೆಗೆ ಉಡುಪಿಯ ಚಾಂಡಿ ಮೇಳ ಮತ್ತು ಹುಲಿ ಕುಣಿತವೂ ಇರುತ್ತದೆ ಎಂದು ತಿಳಿಸಿದರು.

ಐದು ದಿನಗಳ ಕಾಲ ಪ್ರತಿ ದಿನ ಸಂಜೆ ೬ ಗಂಟೆಯಿAದ ವೇದಿಕೆ ಕಾರ್ಯಕ್ರಮಗಳು ನಡೆಯಲಿದ್ದು, ವಿವಿಧ ಮಠಾಽÃಶರು, ಜನಪ್ರತಿನಿಽಗಳು, ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿರುವರು. ಸಾಂಸ್ಕೃತಿಕ ಕಾರ್ಯಕ್ರಮಗಳ ಅಡಿಯಲ್ಲಿ ಜಾನಪದ ಜಾತ್ರೆ, ಕೊನೆಯ ನಮಸ್ಕಾರ ಹಾಸ್ಯ ನಾಟಕ, ನಗೆಹಬ್ಬ ಹಾಗೂ ನೃತ್ಯೋತ್ಸವ, ಸಂಗೀತ ಸಂಭ್ರಮ, ಅಖಂಡ ಭಜನೆ, ಜಾಗೋ ಹಿಂದುಸ್ಥಾನಿ ಹೀಗೆ ಒಂದೊAದು ದಿನ ಒಂದೊAದು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹಾಗೆಯೇ ಸ್ಥಳೀಯ ಕಲಾವಿದರಿಗೂ ಹೆಚ್ಚಿನ ಅವಕಾಶ ಕಲ್ಪಿಸಿಕೊಡಲಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಬಂಡೇರಾವ್ ಸರದೇಸಾಯಿ, ನಾಗರಾಜ್ ಹದ್ಲಿ, ಗುಂಡೂರಾವ್ ಶಿಂಧೆ, ನಗರಸಭೆ ಸದಸ್ಯ ಶ್ರೀನಿವಾಸ ಸಜ್ಜನ, ಸಂಗಯ್ಯ ಸರಗಣಾಚಾರಿ, ರಾಜೇಂದ್ರ ಬಳೂಲಮಠ, ಉಮೇಶ್ ಪೂಜಾರ, ಸುರೇಶ್ ಮಜ್ಜಗಿ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net