

ಬಾಗಲಕೋಟೆ: ಬಾಗಲಕೋಟೆ ಅಭಿವೃದ್ಧಿ ಮಾಡಿದ್ದು, ಮಾಜಿ ಪ್ರಧಾನ ಮಂತ್ರಿ ದೇವೇಗೌಡರ ಕೊಡುಗೆ. ಎಸ್.ಎಂ.ಜಾಮದಾರ ಅಂತಹ ಪ್ರಾಮಾಣಿಕ ಅಽಕಾರಿ ನಿಯುಕ್ತಿಗೊಳಿಸಿ ಮುಳಗಡೆ ಅನೇಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಯಿತು. ಬಾಗಲಕೋಟೆ ಜನ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಿದಲ್ಲಿ. ಮುಂದಿನ ಅವಽಯಲ್ಲಿ ತಮ್ಮ ಋಣ ತೀರಿಸುವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದ ಸಕ್ರಿ ಕಾಲೇಜು ಮೈದಾನದಲ್ಲಿ ಬುಧವಾರ ಬೆಳಗ್ಗೆ ಹಮ್ಮಿಕೊಂಡಿದ್ದ ಜೆಡಿಎಸ್ ಬೃಹತ್ ಸಮಾವೇಶದಲ್ಲಿ ಜೆಡಿಎಸ್ ಅಭ್ಯರ್ಥಿ ಡಾ.ದೇವರಾಜ ಪಾಟೀಲ ಪರ ಮತಯಾಚನೆ ಮಾಡಿ ಅವರು ಮಾತನಾಡಿದರು.
ಅತ್ಯಂತ ಕ್ರೀಯಾಶೀಲ, ವೈದ್ಯಕೀಯ ವೃತ್ತಿಯಲ್ಲಿ ಹಲವಾರು ಜನರ ಸಮಸ್ಯೆಗೆ ಪರಿಹಾರ ನೀಡಿರುವ ದೇವರಾಜ ಪಾಟೀಲ ಅವರಿಗೆ ಮತದಾರರು ಅವಕಾಶ ನೀಡಬೇಕು. ಈ ಕ್ಷೇತ್ರದ ಜನರು ಆಶೀರ್ವಾದ ಮಾಡಬೇಕು. ಬಾಗಲಕೋಟೆ ಪರಿಸ್ಥಿತಿಗಳನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಅದಕ್ಕೆ ನಮ್ಮ ಅಽಕಾರ ಅವಽಯಲ್ಲಿ ಒಳ್ಳೆಯ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
೨೦೦೬ ರಲ್ಲಿ ನಾನು ಸಿಎಂ ಇz್ದÁಗ ಮುಧೋಳ ತಾಲೂಕಿನ ಗ್ರಾಮವೊಂದರಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದೆ. ಸಚಿವ ಗೋವಿಂದ ಕಾರಜೋಳ ಇದ್ದರು. ವಾಸ್ತವ್ಯದ ವೇಳೆ ನನಗೆ ಮನವಿ ಮಾಡಿದ ಹೆಣ್ಣು ಮಗಳ ಕಣ್ಣೀರು ಹಾಕಿದ್ದು ನನಗೀಗೂ ಮರೆಯೋಕೆ ಆಗಲ್ಲ. ದೇವದಾಸಿ ಹೆಣ್ಣುಮಗಳ ಪುತ್ರಿ ಎಂಎ ಪದವಿ ಹೊಂದಿದ್ದಳು. ತಾನು ಈ ವೃತ್ತಿಯಲ್ಲಿ ಮುಂದು ವರೆಯ ಬಾರದು ಎಂದು ಕೊಂಡಿದ್ದಳು. ಅಂತರಕಾತಿ ಮದುವೆ ಆಗಿದ್ದರು ಸರ್ಕಾರದಿಂದ ಸರ್ಕಾರದ ಹಣ ಸಿಕ್ಕಿರಲಿಲ್ಲ. ತಕ್ಷಣ ಹಣ ನೀಡಿ ಸಿಎಂ ಕಚೇರಿಯಲ್ಲಿ ಉದ್ಯೋಗ ನೀಡಿದ್ದೆ. ಬಿಜೆಪಿ ಸರ್ಕಾರ ಬಂದ ಮೇಲೆ ಆ ಹೆಣ್ಣು ಮಗಳನ್ನು ಸೇವೆಯಿಂದ ತೆಗೆದರು. ಇಂತಹ ಸರ್ಕಾರಗಳು ಬೇಕಾ? ಅಂತ ಪ್ರಶ್ನಿಸಿದರು.
ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ದುರಹಂಕಾರಿ ಇದ್ದಾರೆ. ಜೆಡಿಎಸ್ ಅಭ್ಯರ್ಥಿ ದೇವರಾಕ ಪಾಟೀಲ ಸರಳ, ಸಜ್ಜನರಾಗಿz್ದÁರೆ ಬಾಗಲಕೋಟೆ ಅಭಿವೃದ್ಧಿಯಾಗಿದ್ದು ದೇವೇಗೌಡರ ಸರ್ಕಾರ ಇದ್ದಾಗ. ಕ್ರಾಂತಿಕಾರಿ ತೀರ್ಮಾನ ಮಾಡಿದ್ದು ನಿಮ್ಮ ದೇವೆಗೌಡರು. ೨೦ ವರ್ಷಗಳಿಂದ ಪುನರ್ವಸತಿ ಸೌಕರ್ಯ ಕಲ್ಪಿಸಲು ಆಗಿಲ್ಲ. ದಯವಿಟ್ಟು ಎರಡು ರಾಷ್ಟ್ರೀಯ ಪಕ್ಷಗಳನ್ನು ನಿರಾಕರಿಸಿ ಡಾ.ದೇವರಾಜ ಪಾಟೀಲರನ್ನು ಆಯ್ಕೆ ಮಾಡಿ ಕಳುಹಿಸಿ ಅಂತ ಮನವಿ ಮಾಡಿದರು.
ಜೆಡಿಎಸ್ ಅಭ್ಯರ್ಥಿ ಡಾ.ದೇವರಾಜ ಪಾಟೀಲ ಮಾತನಾಡಿ, ಜನರ ಸೇವೆಯ ಸಂಕಲ್ಪದೊಂದಿಗೆ ಚುನಾವಣೆಗೆ ಸ್ಪಽðಸಿದ್ದೇನೆ. ಜೆಡಿಎಸ್ ಬೆಂಬಲಿಸುವ ಮೂಲಕ ನಿಮ್ಮ ಸೇವೆಗೆ ಅವಕಾಶ ಕಲ್ಪಿಸಬೇಕು ಎಂದು ವಿನಂತಿಸಿದರು.
ಬಾದಾಮಿ ವಿಧಾನಸಭೆ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹಣಮಂತ ಮಾವಿನಮರದ, ಬಿಟಿಡಿಎ ಮಾಜಿ ಅಧ್ಯಕ್ಷ ಜಾಕೀರ್ ಮೊಕಾಶಿ, ರಜಾಕ್ ಹಳ್ಳೂರ, ಅಕ್ರಮ್ ಸೌದಾಗರ, ಮುಖಂಡರಾದ ಶ್ರೀನಿವಾಸ ಗೌಡರ, ಆತ್ಮಾನಂದ ಜಾಲಿಹಾಳ, ಡಿ.ಬಿ.ಸಿದ್ದಾಪುರ, ಡಾ.ಭಾಗ್ಯಾ ಪಾಟೀಲ, ರೇಣುಕಾ ಭಜಂತ್ರಿ, ಅಯ್ಯನಗೌಡ ಗೌಡರ, ವೈ.ಎಚ್.ಇದ್ದಲಗಿ, ಪ್ರಭುರಾಜ ಪಾಟೀಲ, ಕೃಷ್ಣಾ ಪಾಟೀಲ ಇದ್ದರು.