

ಬಾಗಲಕೋಟೆ: ಬಿಜೆಪಿಯವರಿಗೆ ಬೇರೆ ದಂಧೆಯೇ ಇಲ್ಲವಾಗಿದೆ. ಮುಸ್ಲಿಂರು ಇಲ್ಲ ಎಂದರೆ ಅವರು ಅಽಕಾರಕ್ಕೆ ಬರಲು ಆಗಲ್ಲ. ಹೀಗಾಗಿ ಬೆಳಗಾದರೆ ಸಾಕು ತಮ್ಮ ಓಟಿಗಾಗಿ ಕಾಂಗ್ರೆಸ್‌ನವರು ಮುಸ್ಲಿಂರ ಪರ ಇದ್ದಾರೆ ಎಂದು ಹೇಳುತ್ತಲೇ ಇರುತ್ತಾರೆ. ಬಹುಸಂಖ್ಯಾತರನ್ನು ಒಂದುಗೂಡಿಸಲು ಕಾಂಗ್ರೆಸ್ ವಿರುದ್ಧ ಅವರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಾಗಲಕೋಟೆಯಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಹಿಂದುಗಳೆ ಆಗಿರುವ ದಲಿತರ ಮೇಲೆ ದಿನಂಪ್ರತಿ ದಾಳಿ ನಡೆಯುತ್ತವೆ. ಯಾಕೆ, ಅವರು ಹಿಂದುಗಳು ಅಲ್ವಾ? ಈ ಬಗ್ಗೆ ಬಿಜೆಪಿಯವರು ಕೇಳುವುದಿಲ್ಲವೇಕೆ ಎಂದು ಪ್ರಶ್ನಿಸಿದರು.
ಇವರ ವಿಚಾರದಲ್ಲಿ ದಲಿತರು ರೋಸಿಹೋಗಿದ್ದು, ಸಾಕಷ್ಟು ನೊಂದಿದ್ದಾರೆ. ಇಷ್ಟು ವರ್ಷಗಳು ಕಳೆದರೂ ಇನ್ನೂ ಸಹ ದೇವಾಲಯಗಳಲ್ಲಿ ದಲಿತರಿಗೆ ಪ್ರವೇಶ ಇಲ್ಲವಾಗಿದೆ. ಬದುಕಿನಲ್ಲಿ ನಮ್ಮನ್ನು ಬೇರೆ ಇಟ್ಟಿದ್ದಾರೆ. ವರ್ಣಾಶ್ರಮ ಧರ್ಮ ಹೇರಿ ಹೇರಿ ನಾವು ಹಿಂದುಗಳು ಹೌದೋ ಅಲ್ಲವೋ ಎಂದು ಪ್ರಶ್ನಿಸುವಂತಾಗಿದೆ. ಇದಕ್ಕೆ ಅವರ ಬಳಿ ಉತ್ತರ ಇದೆಯಾ ಎಂದು ಮರುಪ್ರಶ್ನೆ ಮಾಡಿದರು.
ದಲಿತರಲ್ಲಿ ಎಷ್ಟು ಮರ್ಯಾದೆ ಹತ್ಯೆ ಆಗುತ್ತಿವೆ? ಆ ಬಗ್ಗೆ ಈ ಬಿಜೆಪಿಯವರು ಮಾತನಾಡುವುದಿಲ್ಲ ಏಕೆ? ಓಟಿಗಾಗಿ ಜಾತಿ-ಧರ್ಮ ಎನ್ನುವ ರಾಜ್ಯದಲ್ಲಿ ಘರ್ಷಣೆಗೆ ಇಳಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇದೀಗ ಮಂಗಳೂರ ಘಟನೆ ಏನದು? ಒಬ್ಬ ಕೊಲೆ ಮಾಡಿ ಜೈಲಿಗೆ ಹೋಗಿದ್ದ, ಅವನನ್ನು ಕೊಲೆ ಮಾಡಿದ್ದಾರೆ. ಇದನ್ನು ಧರ್ಮಕ್ಕೆ ಎಳೆದು ತರುವುದೇಕೆ? ಇವರು ದೇಶವನ್ನು ಯಾವ ಸ್ಥಿತಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ? ನಾನು ಸಹ ಹಿಂದು ಇದ್ದೇನೆ. ನಾನೆಷ್ಟು ಇಲ್ಲಿ ನೋವು ಅನುಭವಿಸಿದ್ದೇನೆ, ನನ್ನ ಜನಾಂಗ ಎಷ್ಟು ನೋವು ಅನುಭವಿಸುತ್ತಿದೆ. ದಲಿತರನ್ನು ಈ ಹಿಂದುಗಳ ಎಷ್ಟು ಅಪ್ಪಿಕೊಂಡಿದ್ದಾರೆ? ಎಷ್ಟು ದಿನ ನಾವು ಇದನ್ನು ಸಹಿಸಿಕೊಂಡು ಇರಬೇಕು ಎಂದು ನೋವು ಹೊರಹಾಕಿದರು.
ರೈತರಿಗೆ ಕಬ್ಬು ಬಿಲ್ಲು ಪಾವತಿ ಹಾಗೂ ಎ-ïಆರ್‌ಪಿ ಬೆಲೆ ಕಡಿಮೆ ಆಗಿದೆ ಎನ್ನುವ ಆರೋಪಕ್ಕೆ ಸಂಬAಽಸಿದAತೆ ಸಚಿವ ತಿಮ್ಮಾಪುರ ಅವರು, ಶುಗರ್ ಕೇಂದ್ರದ ಕೈಯಲ್ಲಿದೆ. ಸಕ್ಕರೆ ಮಾರಾಟಕ್ಕೆ ಇಂಡೆAಟ್, ಸಕ್ಕರೆ ರ-ÀÅ್ತ ಮಾಡಲು ಕಾರ್ಖಾನೆಗೆ ಅವಕಾಶ ಕೊಡಲಿಲ್ಲ ಎಂದರೆ ಅವರು ಏನು ಮಾಡಬೇಕು? ಎಥಿನಾಲ್ ಬೆಲೆ ಹೆಚ್ಚಳ ಮಾಡಿದರೆ ಇದರಿಂದ ಕಾರ್ಖಾನೆ ಹಾಗೂ ರೈತರಿಗೂ ಅನುಕೂಲವಾಗುತ್ತದೆ. ಬೇರೆ ದೇಶಗಳಿಂದ ಪೆಟ್ರೀಲ್, ಡಿಸೇಲ್ ತಂದು ದೇಶಕ್ಕೆ ಹಾನಿ ಮಾಡುವ ಬದಲಿಗೆ ನಮ್ಮದೇ ದೇಶದಲ್ಲಿ ಉತ್ಪಾದನೆ ಮಾಡುವ ಎಥಿನಾಲ್ ಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಕೇಂದ್ರದ ತಪ್ಪು ನೀತಿಗಳಿಂದ ರೈತರು ಮತ್ತು ಕಾರ್ಖಾನೆಗಳಿಗೆ ತೊಂದರೆ ಅನುಭವಿಸುವಂತಾಗಿದೆ. ಸಕ್ಕರೆ ವಿಚಾರದಲ್ಲಿ ಕೇಂದ್ರದ ಧೋರಣೆ ಸರಿಯಿಲ್ಲ ಎಂದು ಆರೋಪಿಸಿದರು.
ಸಚಿವ ಶಿವಾನಂದ ಪಾಟೀಲ ಅವರ ರಾಜೀನಾಮೆ ಪ್ರಹಸನ ಬಗ್ಗೆ ಪ್ರಶ್ನಿಸಿದಾಗ, ಇದು ಇಬ್ಬರದ್ದು ಚಾಲೆಂಜ್ ವಿಚಾರ. ಯತ್ನಾಳ್ ಅವರು ಸಚಿವರ ಹುಟ್ಟಿನ ಬಗ್ಗೆ ಮಾತನಾಡಿ, ರಾಜೀನಾಮೆಗೆ ಸವಾಲ್ ಹಾಕಿದ್ದರು. ಅದರಂತೆ ಶಿವಾನಂದ ಪಾಟೀಲ ಅವರು ರಾಜೀನಾಮೆ ನೀಡಿ ಸವಾಲ್ ಸ್ವೀಕಾರ ಮಾಡಿದ್ದಾರೆ. ಸಚಿವ ಸವಾಲ್ ಸ್ವೀಕಾರ ಮಾಡಿ ಯತ್ನಾಳ್ ಅವರು ರಾಜೀನಾಮೆ ಕೊಟ್ಟು ಚುನಾವಣೆಗೆ ಮುಂದಾಗಿದ್ದರೆ ಅವರಿಗೆ ಹೌದು ಎನ್ನುತ್ತಿದ್ದೇವು. ಅದನ್ನು ಬಿಟ್ಟು ಮತ್ತೊಂದು ಸವಾಲ್ ಹಾಕಿರುವುದಕ್ಕೆ ಅರ್ಥ ಇಲ್ಲ. ರಾಜಕಾರಣದಲ್ಲಿ ಯಾರೇ ಆಗಲಿ ನೋವಾಗದಂತೆ ಮಾತನಾಡಬೇಕು. ಇತಿಮಿತಿ ಅರಿತುಕೊಂಡು ಮಾತನಾಡಬೇಕು. ಆದರೆ, ಯತ್ನಾಳ್ ಅವರು ಇತಿಮಿತಿ ಮೀರಿ ಮಾತನಾಡಿದ್ದು ಸರಿಯಲ್ಲ ಎಂದು ತಿಮ್ಮಾಪುರ ಹೇಳಿದರು.