ಬಹು ವರ್ಷಗಳ ಕನಸು ನನಸು

bkt-1-3
ನಗರದ ಅಂಬೇಡ್ಕರ ಕಾಲೋನಿಯಲ್ಲಿ ವಿ.ಪ ಸದಸ್ಯ ಪಿ.ಎಚ್.ಪೂಜಾರ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಮನೆಮನೆಗೆ ತಲುಪಿಸುವ ಮೂಲಕ ಅಭಿಯಾನ ನಡೆಸಿದರು.
Published on

ಬಾಗಲಕೋಟೆ: ಆಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ, ಆಮಂತ್ರಣ, ಶ್ರೀರಾಮ ಮಂದಿರದ ಪೋಟೋಗಳನ್ನು ಸೋಮವಾರ ನಗರದ ಅಂಬೇಡ್ಕರ ಕಾಲೋನಿಯಲ್ಲಿ ವಿ.ಪ ಸದಸ್ಯ ಪಿ.ಎಚ್.ಪೂಜಾರ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಮನೆಮನೆಗೆ ತಲುಪಿಸುವ ಮೂಲಕ ಅಭಿಯಾನ ನಡೆಸಿದರು.

ಜ.೨೨ ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಗೊಳುತಿದ್ದು, ಅಂದು ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ಶ್ರೀರಾಮ ಪೂಜೆ ನೆರವೇರಿಸಿ, ಸಂಜೆ ಮನೆಯ ಆವರಣದಲ್ಲಿ ದೀಪಗಳಿಂದ ಅಲಂಕರಿಸಬೇಕು ಎಂದು ಮನವಿ ಮಾಡಿದ ಅವರು, ಬಹು ವರ್ಷಗಳ ಕನಸು ನನಸಾಗಿದೆ. ಎಲ್ಲರು ದೀಪಾವಳಿಯಂತೆ ಸಂಭ್ರಮದಿಂದ ಆಚರಿಸಬೇಕು ಎಂದರು.

ಅಭಿಯಾನಕ್ಕೂ ಮುನ್ನ ಶ್ರೀಮೋಟಗಿ ಬಸವೇಶ್ವರ ದೇವಸ್ಥಾನದಲ್ಲಿ ಅಕ್ಷತೆ ಹಾಗೂ ಆಮಂತ್ರಣ ಪತ್ರಿಕೆಗಳಿಗೆ ಪೂಜೆ ಸಲ್ಲಿಸಲಾಯಿತು. ಕಾಲೋನಿಯಲ್ಲಿ ನಿವಾಸಿಗಳು ಸಂಭ್ರಮದಿಂದ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಸಂಜು ಡಿಗ್ಗಿ, ನೀತಿನ ಮಿರಜಕರ, ರಾಜು ನಾಯಕ, ಮಾಧವ ಮೇಲ್ನಾಡ, ರಾಮ ಗೌಳಿ, ಸುನೀಲ ಗೀರಡೆ, ರಾಜು ಮಿರಜಕರ, ವಿನೋದ ಮಿರಜಕರ, ಅಪ್ಪು ಕೊಪ್ಪದ, ಪವನ ಮಹೇಂದ್ರಕರ, ಮಂಜುನಾಥ ಮಿರಜಕರ, ಬಾಬು ರಾಮದುರ್ಗ, ಈರಣ್ಣ ಲಿಂಗದಳ್ಳಿ, ಮುತ್ತು ಅಂಬಗೇರ, ಶ್ರೀಧರ ಅಂಬಿಗೇರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net