ಬಸ್ತೀಪುರದಲ್ಲಿ ರೈತರಿಗೆ ಸಾಲದ ಚೆಕ್ ವಿತರಣೆ

23kglphoto-1.,,,
Published on

ಕೊಳ್ಳೇಗಾಲ: ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಆರಂಭಗೊಳ್ಳಲಿದೆ ಎಂದು ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಮಾಜಿ ಶಾಸಕ ಆರ್.ನರೇಂದ್ರ ಹೇಳಿದರು.


ಪಟ್ಟಣದ ಬಸ್ತೀಪುರ ರಸ್ತೆಯಲ್ಲಿರುವ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ರೈತರಿಗೆ ಸಾಲದ ಚೆಕ್ ವಿತರಣೆ ಮಾಡಿದ ಬಳಿಕ ಮಾತನಾಡಿದರು.


ಕೊಳ್ಳೇಗಾಲದ ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಗೆ 5 ಪಂಚಾಯಿತಿ ಒಳಪಡುತ್ತದೆ. ವರ್ಷದಿಂದ ವರ್ಷಕ್ಕೆ ಸಾಲಸೌಲಭ್ಯದ ಚಟುವಟಿಕೆಗಳು ಅಭಿವೃದ್ಧಿಗೊಳ್ಳುತ್ತಿದೆ. ಇದೀಗ 142 ಹೊಸ ಸದಸ್ಯರಿಗೆ 1 ಕೋಟಿ 14 ಲಕ್ಷದ 52 ಸಾವಿರ ರೂ. ಕೆಸಿಸಿ ಬೆಳೆ ಸಾಲದ ಚೆಕ್ ವಿತರಿಸಲಾಗಿದೆ. ನಿಯಮ ಪ್ರಕಾರ ಪ್ರತಿ ವರ್ಷ ಶೇ.25ರಿಂದ 30ರಷ್ಟು ಹೊಸ ಸದಸ್ಯರಿಗೆ ಸಾಲ ನೀಡಬೇಕಿದೆ ಅದರಂತೆ ಕಸಬಾ ಕೃಷಿ ಪತ್ತಿನ ಸಹಕಾರ ಸಂಘ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.


ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಿ.ಸೋಮಶೇಖರ್, ಉಪಾಧ್ಯಕ್ಷೆ ಶೀಲಾ, ನಿರ್ದೇಶಕ ಮಹೇಶ್, ಚಿಕ್ಕಬಸವೇಗೌಡ, ಶಿವಮೂರ್ತಿ, ಮಹೇಶ್, ಮಹದೇವಸ್ವಾಮಿ, ರಮೇಶ್, ಮಹಾದೇವಪ್ಪ, ಬಾಲಸುಬ್ರಹ್ಮ ಣ್ಯಸ್ವಾಮಿ, ಶೈಲಜಾ, ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ನಾಗರಾಜು, ಕೊಳ್ಳೇಗಾಲದ ಎಂಡಿಸಿಸಿ ಬ್ಯಾಂಕ್ ಮ್ಯಾನೇಜರ್ ಪ್ರವೀಣ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net