ಬಸ್ ತಡೆದು ಯುವಕರಿಂದ ಪ್ರತಿಭಟನೆ

IMG-20250413-WA0176
Published on

ಗುಂಡ್ಲುಪೇಟೆ: ತಾಲೂಕಿನ ಶಿಂಡನಪುರ ಗೇಟ್‌ನಲ್ಲಿ ನಿಲುಗಡೆ ಮಾಡದೆ ಹೋಗುತ್ತಿದ್ದ ಸಾರಿಗೆ ಬಸ್ ತಡೆಗಟ್ಟಿ ಯುವಕರು ಭಾನುವಾರ ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ನಿಲುಗಡೆಯಿದ್ದರೂ ಬಹಳಷ್ಟು ಬಸ್‌ಗಳು ನಿಲ್ಲಿಸದೆ ಹೋಗುತ್ತಿರುವ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳಿಗೆ ಹಲವಾರು ಬಾರಿ ದೂರು ನೀಡಿದರೂ ಯಾವುದೇ ಉಪಯೋಗವಾಗದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಯುವಕರು ಭಾನುವಾರ ಬಸ್‌ಗಳು ಖಾಲಿಯಿದ್ದರೂ ನಿಲ್ಲಿಸಲಿಲ್ಲ. ಇದರಿಂದ ಪಟ್ಟಣದ ಆಸ್ಪತ್ರೆಗೆ ಹೋಗಲು ಬಂದಿದ್ದ ರೋಗಿಗಳು ಪರದಾಡುವಂತಾಗಿತ್ತು.

ಈ ಬಗ್ಗೆ ಯುವಕರು ಸಾರಿಗೆ ಅಧಿಕಾರಿಗಳಿಗೆ ಕರೆಮಾಡಿ ಮಾಹಿತಿ ನೀಡಿದರೂ ನಂತರ ಬಂದ ಬಸ್‌ಗಳು ಇದೇ ಪರಿಪಾಠ ಮುಂದುವರಿಸಿದ್ದರಿಂದ ರೊಚ್ಚಿಗೆದ್ದ ಯುವಕರು ಬಸ್ ಹಿಂಬಾಲಿಸಿ ಪಟ್ಟಣದ ಹೊರ ವಲಯದಲ್ಲಿ ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು.

ನಂತರ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಮುಂದೆ ಹೀಗೆ ಮಾಡದಂತೆ ಸಿಬ್ಬಂದಿಗೆ ಎಚ್ಚರಿಕೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net