ಕಲಬುರಗಿ ನಗರದ ಹೊರವಲಯದ ಶರಣಸಿರಸಗಿ ಮಡ್ಡಿ ಸಮೀಪದಲ್ಲಿ ಬೈಕ್‌ಗೆ ಬಸ್ ಡಿಕ್ಕಿ ಹೊಡೆದು ಯುವಕನೊಬ್ಬ ಮೃತಪಟ್ಟ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.
ಬಾಪುನಗರದ ನಿವಾಸಿಯಾಗಿದ್ದ ಶ್ರೀಮಂತ ಕಟ್ಟಿಮನಿ ಮೃತಪಟ್ಟ ಬೈಕ್ ಸವಾರ. ನಾಲ್ಕು ತಿಂಗಳ ಹಿಂದೆ ಬೆಂಗಳೂರಿನ ವಿಧಾನ ಸೌಧದಲ್ಲಿ ಬೆರಳಚ್ಚುಗಾರ ಉದ್ಯೋಗ ಸಿಕ್ಕಿತ್ತು. ಹೀಗಾಗಿ ಬೆಂಗಳೂರಿನಲ್ಲಿದ್ದರು. ಎರಡು ದಿನಗಳ ಹಿಂದೆ ಊರಿಗೆ ಬಂದಿದ್ದರು. ಕೆಲಸ ನಿಮಿತ್ತ ಸಹೋದರ ಬೈಕ್ ತೆಗೆದುಕೊಂಡು ಶರಣಸಿರಸಗಿ ಕಡೆಗೆ ಹೋಗಿ ಮರಳಿ ಕಲಬುರಗಿಗೆ ಬರುವಾಗ ಅಲ್ಲಿನ ಅಪಾರ್ಟ್ಮೆಂಟ್ ತಿರುವಿನಲ್ಲಿ ಬಸ್ ಡಿಕ್ಕಿ ಹೊಡೆದಿದೆ. ಗಾಯಗೊಂಡಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ಕೊನೆಯುಸಿರೆಳೆದಿದ್ದಾರೆ.ಸಂಚಾರ ಠಾಣೆ-ರಲ್ಲಿ ಕೇಸ್ ದಾಕಲಾಗಿದೆ.
==