ಬಸವೇಶ್ವರ ಬ್ಯಾಂಕ್‌ಗೆ ೪.೨೯ ಕೋಟಿ ರೂ.ನಿವ್ವಳ ಲಾಭ

bkt-25-1
ಬಾಗಲಕೋಟೆ ನಗರದ ಬಸವೇಶ್ವರ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Published on

ಬಾಗಲಕೋಟೆ: ಬಸವೇಶ್ವರ ಸಹಕಾರಿ ಬ್ಯಾಂಕ್‌ಗೆ ೨೦೨೩-೨೪ ಸಾಲಿನಲ್ಲಿ ೪.೨೯ ಕೋಟಿ ರೂ.ನಿವ್ವಳ ಲಾಭ ಗಳಿಸಿದೆ. ಅನೇಕ ವರ್ಷಗಳಿಂದ ಬ್ಯಾಂಕ್ ಪ್ರಗತಿ ಪಥದಲ್ಲಿ ಸಾಗುತ್ತಿದೆ. ಬ್ಯಾಂಕ್ ಲಾಭದತ್ತ ಹೆಜ್ಜೆ ಇಟ್ಟಿದೆ ಎಂದು ಬಸವೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹೇಳಿದರು.

೧೯೮೪ ರಲ್ಲಿ ನಮ್ಮ ನಿರ್ದೇಶಕ ಮಂಡಳಿ ಮೊದಲ ಬಾರಿ ಅಧಿಕಾರ ಸ್ವೀಕರಿಸಿದ್ದಾಗ ೩೩೪೯ ಸದಸ್ಯರ ಸಂಖ್ಯೆ ಹೊಂದಿತ್ತು. ಇಂದು ೪೪೧೦೭ ವರೆಗೆ ಏರಿಕೆಯಾಗಿದೆ. ೭ ಲಕ್ಷ ಇದ್ದ ಶೇರು ಬಂಡವಾಳ ೩೨.೦೦ ಕೋಟಿ ವರೆಗೆ ಏರಿಕೆಯಾಗಿದೆ. ೩.೪೮ ಲಕ್ಷ ಇದ್ದ ನಿಽಗಳು ೬೦.೦೦ ಕೋಟಿಗೆ ಏರಿಕೆಯಾಗಿದೆ. ೫.೬೨ ಲಕ್ಷ ರೂ. ಇದ್ದ ದುಡಿಯುವ ಬಂಡವಾಳ ೧೦೫೨.೦೦ ಕೋಟಿ ರೂ.ಗಳಿಗೆ ಏರಿದೆ. ೨.೦೭ ಲಕ್ಷ ರೂ.ಇದ್ದ ಠೇವುಗಳು ೯೦೭.೦೦ ಕೋಟಿ ರೂ.ಗಳ ವರೆಗೆ ಇದೆ. ೯೨ ಲಕ್ಷ ರೂ. ಇದ್ದ ಸಾಲ ಬಟವಡೆ ೫೯೦.೦೦ ಕೋಟಿ ರೂ. ಗಳಿಗೆ ಏರಿದೆ. ಶೇ.೨೬.೪೬ ಇದ್ದ ಎನ್‌ಪಿಎ ಇಂದು ಶೇ.೨.೯೦ ಇದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬ್ಯಾಂಕುಗಳ ಠೇವಣಿಯಲ್ಲಿ ಗಮನಾರ್ಹ ಪ್ರಗತಿ ಸಾಽಸಲಾಗಿದೆ. ೨೦೨೨-೨೩ ನೇ ಸಾಲಿನಲ್ಲಿ ೮೩೨ ಕೋಟಿ ರೂ. ಇದ್ದ ಠೇವಣಿ ೨೦೨೩-೨೪ ಸಾಲಿಗೆ ೯೦೭ ಕೋಟಿ ರೂ. ಆಗಿದೆ. ಗ್ರಾಹಕರು, ಠೇವಣಿದಾರರ ಬ್ಯಾಂಕಿನ ಮೇಲೆ ಇಟ್ಟ ವಿಶ್ವಾವೇ ಕಾರಣ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಏರಿಳಿತ ಇದ್ದರು ಠೇವಣಿಗಳ ಬಡ್ಡಿದರವನ್ನು ವಾಣಿಜ್ಯ, ರಾಷ್ಟ್ರೀಕೃತ ಬ್ಯಾಂಕ್‌ಗಳಿಗ್ಗಿಂತ ಹೆಚ್ಚಳ ಮಾಡಲಾಗಿದೆ. ೩೧-೩-೨೦೨೪ ಕ್ಕೆ ಒಟ್ಟು ೫೭೯ ಕೋಟಿ ರೂ. ಸಾಲ ವಿತರಿಸಲಾಗಿದೆ. ೪.೨೨ ಕೋಟಿ ಲಾಭ ಗಳಿಸಿ ಅ ವರ್ಗಗಳಿಗೆ ಅಡಿಟ್ ವರ್ಗಿಸಲಾಗಿದೆ ಎಂದರು.

ನಮ್ಮ ಬ್ಯಾಂಕಿನ ಎಲ್ಲ ಗ್ರಾಹಕರಿಗೆ ಉತ್ತಮ ಹಾಗೂ ನಿಷ್ಕೃಷ್ಟ ಸೇವೆಯನ್ನು ನೀಡಲು ಬ್ಯಾಂಕಿನ ಎಲ್ಲ ಶಾಖೆಗಳಿಗೂ ಕೋರ ಬ್ಯಾಂಕಿಂಗ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಮೊಬೈಲ ಬ್ಯಾಂಕಿಂಗ್ ಹಾಗೂ ಎಟಿಎಂ ಸೇವೆಯನ್ನು ಪ್ರಾರಂಭಿಸಲಾಗಿದೆ. ಈ ಎಟಿಎಂ ಕಾರ್ಡ್ನ್ನು ಯಾವುದೇ ಬ್ಯಾಂಕಿನಲ್ಲಿ ಬಳಸಲು ಅವಕಾಶವಿದೆ. ಮೊಬೈಲ್ ಬ್ಯಾಂಕಿಂಗ್ ಸೇವೆ ಹಾಗೂ ಯುಪಿಐ ಆಧಾರಿತ ಹಣ ವರ್ಗಾವಣೆ ಆರಂಭಿಸಲಾಗಿದೆ.

ಮಹಾಂತಪ್ಪ ತಪಶೆಟ್ಟಿ ಅಧ್ಯಕ್ಷತೆಯಲ್ಲಿ ೧೯೨೫ ರೂ. ಶೇರು ಬಂಡವಾಳದೊಂದಿಗೆ ೨-೩-೧೯೧೭ ರಂದು ಬೀಳೂರು ಗುರುಬಸವ ಶ್ರೀಗಳ ಆಶೀರ್ವಾದಿಂದ ಬಸವೇಶ್ವರ ಬ್ಯಾಂಕ್ ಆರಂಭವಾಯಿತು. ಕೇವಲ ಆರ್ಥಿಕ ಅಭಿವೃದ್ಧಿಗೆ ಮಾತ್ರ ಸೀಮಿಗೊಳಿದೇ ಶೈಕ್ಷಣಿಕ, ಧಾರ್ಮಿಕವಾಗಿಯು ಬ್ಯಾಂಕ್ ಸಮಾಜ ಸೇವೆ ಮಾಡುತ್ತಿದೆ. ಆರ್ಥಿಕ ಸಮಾನತೆಯ ಹರಿಕಾರ ವಿಶ್ವ ಗುರು ಬಸವಣ್ಣ ಅವರ ಆಶಯಗಳ ದಾರಿಯಲ್ಲಿ ಬ್ಯಾಂಕು ಸಾಗುತ್ತಿದೆ. ಬಾಗಲಕೋಟೆ ನಗರದಲ್ಲಿ ಪ್ರಧಾನ ಕಚೇರಿ ಸೇರಿ ೬ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ವಿಜಯಪುರ, ಗೋಕಾಕ, ಗಜೇಂದ್ರಗಡ, ಗದಗ, ಧಾರವಾಡ, ಬೆಳಗಾವಿ ಸೇರಿ ವಿವಿಧ ಶಾಖೆಗಳೊಂದಿಗೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ೮ ಜಿಲ್ಲೆಗಳಲ್ಲಿ ಕಾರ್ಯ ಕ್ಷೇತ್ರ ವಿಸ್ತರಿಸಿಕೊಂಡಿದೆ ಎಂದು ತಿಳಿಸಿದರು.

ಬ್ಯಾಂಕಿನ ಉಪಾಧ್ಯಕ್ಷ ಎಂ.ಜಿ.ವಾಲಿ, ನಿರ್ದೇಶಕರಾದ ರವಿಕುಮಾರ ಪಟ್ಟಣದ, ಶಶಿಧರ ಜಿಗಳೂರ, ಸುರೇಶ ಜಂಗಿ, ಸಿದ್ದಲಿಂಗೇಶ್ವರ ಗೋಡಿ, ಜಯಮ್ಮ ಅಬ್ದಲಪುರ, ನಾರಾಯಣ ಕುಲಕರ್ಣಿ, ಶ್ರೀಶೈಲ ಆರಬ್ಬಿ, ಸಂಗಪ್ಪ ಕಂಕಣಮೇಲಿ, ವೀರಪ್ಪ ವಿ ಶಿರಗಣ್ಣವರ, ಹೂವಪ್ಪ ರಾಠೋಡ, ಭರತಕುಮಾರ ಈಟಿ, ಉಷಾ ಜಿಗಜಿನ್ನಿ, ನಿಂಗಪ್ಪ ಪಲ್ಲೇದ, ಶ್ರೀನಿವಾಸ ಬಳ್ಳಾರಿ, ಮುಖ್ಯ ಕಾರ್ಯನಿರ್ವಣಾಽಕಾರಿ ವಿ.ಎಸ್.ಕೇಮಾಳಿ, ಅಧಿಕಾರಿಗಳಾದ ಎಂ.ಎಸ್.ಗುಡಗುಂಟಿ, ಪಿ.ಎಂ.ಹಿರೇಮಠ, ಎಸ್.ಬಿ.ಬಾದಾಮಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net