ಬಸವೇಶ್ವರ ಬ್ಯಾಂಕ್‌ಗೆ ೪.೨೨ ಕೋಟಿ ರೂ.ನಿವ್ವಳ ಲಾಭ

bkt-12-1
ಬಾಗಲಕೋಟೆ ನಗರದ ಬಸವೇಶ್ವರ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Published on

ಬಾಗಲಕೋಟೆ: ಬಸವೇಶ್ವರ ಸಹಕಾರಿ ಬ್ಯಾಂಕ್‌ಗೆ ೨೦೨೨-೨೩ ಸಾಲಿನಲ್ಲಿ ೪.೨೨ ಕೋಟಿ ರೂ.ನಿವ್ವಳ ಲಾಭ ಗಳಿಸಿದೆ. ಅನೇಕ ವರ್ಷಗಳಿಂದ ಬ್ಯಾಂಕ್ ಪ್ರಗತಿ ಪಥದಲ್ಲಿ ಸಾಗುತ್ತಿದೆ. ಬ್ಯಾಂಕ್ ಲಾಭದತ್ತ ಹೆಜ್ಜೆ ಇಟ್ಟಿದೆ ಎಂದು ಬಸವೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹೇಳಿದರು.

ನಮ್ಮ ಬ್ಯಾಂಕಿನ ಎಲ್ಲ ಗ್ರಾಹಕರಿಗೆ ಉತ್ತಮ ಹಾಗೂ ನಿರ್ಧಿಷ್ಟ ಸೇವೆಯನ್ನು ನೀಡಲು ಬ್ಯಾಂಕಿನ ಎಲ್ಲ ಶಾಖೆಗಳಿಗೂ ಕೋರ ಬ್ಯಾಂಕಿಂಗ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಮೊಬೈಲ ಬ್ಯಾಂಕಿಂಗ್ ಹಾಗೂ ಎಟಿಎಂ ಸೇವೆಯನ್ನು ಪ್ರಾರಂಭಿಸಲಾಗಿದೆ. ಈ ಎಟಿಎಂ ಕಾರ್ಡ್ ನ್ನು ಯಾವುದೇ ಬ್ಯಾಂಕಿನಲ್ಲಿ ಬಳಸಲು ಅವಕಾಶವಿದೆ. ಮೊಬೈಲ್ ಬ್ಯಾಂಕಿಂಗ್ ಸೇವೆ ಹಾಗೂ ಯುಪಿಐ ಆಧಾರಿತ ಹಣ ವರ್ಗಾವಣೆ ಆರಂಭಿಸಲಾಗಿದೆ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಮಹಾಂತಪ್ಪ ತಪಶೆಟ್ಟಿ ಅಧ್ಯಕ್ಷತೆಯಲ್ಲಿ ೧೯೨೫ ರೂ. ಶೇರು ಬಂಡವಾಳದೊಂದಿಗೆ ೨-೩-೧೯೧೭ ರಂದು ಬೀಳೂರು ಗುರುಬಸವ ಶ್ರೀಗಳ ಆಶೀರ್ವಾದಿಂದ ಬಸವೇಶ್ವರ ಬ್ಯಾಂಕ್ ಆರಂಭವಾಯಿತು. ಕೇವಲ ಆರ್ಥಿಕ ಅಭಿವೃದ್ಧಿಗೆ ಮಾತ್ರ ಸೀಮಿಗೊಳಿದೇ ಶೈಕ್ಷಣಿಕ, ಧಾರ್ಮಿಕವಾಗಿಯು ಬ್ಯಾಂಕ್ ಸಮಾಜ ಸೇವೆ ಮಾಡುತ್ತಿದೆ. ಆರ್ಥಿಕ ಸಮಾನತೆಯ ಹರಿಕಾರ ವಿಶ್ವ ಗುರು ಬಸವಣ್ಣ ಅವರ ಆಶಯಗಳ ದಾರಿಯಲ್ಲಿ ಬ್ಯಾಂಕು ಸಾಗುತ್ತಿದೆ. ಬಾಗಲಕೋಟೆ ನಗರದಲ್ಲಿ ಪ್ರಧಾನ ಕಚೇರಿ ಸೇರಿ ೬ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ವಿಜಯಪುರ, ಗೋಕಾಕ, ಗಜೇಂದ್ರಗಡ, ಗದಗ, ಧಾರವಾಡ, ಬೆಳಗಾವಿ ಸೇರಿ ೨೭ ಶಾಖೆಗಳೊಂದಿಗೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ೮ ಜಿಲ್ಲೆಗಳಲ್ಲಿ ಕಾರ್ಯ ಕ್ಷೇತ್ರ ವಿಸ್ತರಿಸಿಕೊಂಡಿದೆ. ಗದಗ ಹಾಗೂ ಬನಹಟ್ಟಿಯಲ್ಲಿ ಸ್ವಂತ ಕಟ್ಟಡ ನಿರ್ಮಾಣ ಕಾರ್ಯ ಈ ವರ್ಷ ಆರಂಭಿಸಲಾಗುವುದು ಎಂದು ತಿಳಿಸಿದರು.

ಬ್ಯಾಂಕಿನ ಕಾರ್ಯಚಟುವಟಿಕೆ:
೨೦೨೩-೨೪ ನೇ ಸಾಲಿನ ಸದಸ್ಯರ ಸಂಖ್ಯೆಯನ್ನು ಶೇ.೫ ರಷ್ಟು ಹೆಚ್ಚಿಸುವುದು, ಸೌಲಭ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಪೂರೈಸುವುದು, ಅದರಂತೆ ಠೇವು ಶೇ.೧೦ ರಷ್ಟು, ಸಾಲಗಳಲ್ಲಿ ಶೇ.೨೦ ಹೆಚ್ಚಿಸುವುದು ಗುರಿ ಹೊಂದಲಾಗಿದೆ. ಬ್ಯಾಂಕಿನ ಸಿಬ್ಬಂದಿಗಳಿಗೆ ತರಬೇತಿ ನೀಡುವುದು, ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ, ವಿವಿಧ ಕೈಗಾರಿಕೆ, ಆಸ್ಪತ್ರೆ ಹಾಗೂ ಕಟ್ಟಡ ನಿರ್ಮಾಣ, ಯಂತ್ರಗಳ ಅವಳವಡಿಕೆಗೆ ಸಾಲ ಸೌಲಭ್ಯ ಕಲ್ಪಿಸುವುದು, ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು, ಮಹಿಳೆಯರ ಸಬಲೀಕರಣಕ್ಕೆ ವಿವಿಧ ಕೌಶಲ ತರಬೇತಿ ನೀಡುವುದು ಸೇರಿದಂತೆ ವಿವಿಧ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಬ್ಯಾಂಕಿನ ಉಪಾಧ್ಯಕ್ಷ ಎಂ.ಜಿ.ವಾಲಿ, ನಿರ್ದೇಶಕರಾದ ಶಶಿದರ ಜಿಗಳೂರ, ಸುರೇಶ ಜಂಗಿ, ಸಿದ್ದಲಿಂಗೇಶ್ವರ ಗೋಡಿ, ಜಯಮ್ಮ ಅಬ್ದಲಪುರ, ನಾರಾಯಣ ಕುಲಕರ್ಣಿ, ಶ್ರೀಶೈಲ ಆರಬ್ಬಿ, ರವಿಕುಮಾರ ಪಟ್ಟಣದ, ಸಂಗಪ್ಪ ಕಂಕಣಮೇಲಿ, ವೀರಪ್ಪ ವಿ ಶಿರಗಣ್ಣವರ, ಹೂವಪ್ಪ ರಾಠೋಡ, ಭರತಕುಮಾರ ಈಟಿ, ಉಷಾ ಜಿಗಜಿನ್ನಿ, ನಿಂಗಪ್ಪ ಪಲ್ಲೇದ, ಶ್ರೀನಿವಾಸ ಬಳ್ಳಾರಿ, ಮುಖ್ಯ ಕಾರ್ಯನಿರ್ವಣಾಧಿಕಾರಿ ವಿ.ಎಸ್.ಕೇಮಾಳಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net