ಬಸವೇಶ್ವರ ಆಸ್ಪತ್ರೆಯಲ್ಲಿ ಶಸ್ತ್ರಕ್ರಿಯೆ ಘಟಕಕ್ಕೆ ಚಾಲನೆ

2708klb03
Published on

ಕಲಬುರಗಿ: ನಗರದ ಬಸವೇಶ್ವರ ಆಸ್ಪತ್ರೆಯ ಅತ್ಯಾಧುನಿಕ ಮತ್ತು ಸುಸಜ್ಜಿತ ಮಾಡ್ಯುಲರ್ ಶಸ್ತ್ರಕ್ರಿಯೆ ಘಟಕಕ್ಕೆ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ಭಾನುವಾರ ಚಾಲನೆ ನೀಡಿದರು.
ಹಿಂದುಳಿದ ಈ ಭಾಗದ ಬಡವರಿಗೆ ಕಡಿಮೆ ದರದಲ್ಲಿ ಉತ್ಕೃಷ್ಟ ಆರೋಗ್ಯ ಸೇವೆ ದೊರಕಲಿ ಎಂಬ ಉದ್ದೇಶದೊಂದಿಗೆ ಈ ಅತ್ಯಾಧುನಿಕ ಘಟಕ ಸ್ಥಾಪನೆ ಮಾಡಲಾಗಿದೆ ಎಂದು ಡಾ. ಬಿಲಗುಂದಿ ಹೇಳಿದರು.
ಸಂಸ್ಥೆಯ ಉಪಾಧ್ಯಕ್ಷ ಡಾ.ಎಸ್.ಆರ್.ಹರವಾಳ್, ಕಾರ್ಯದರ್ಶಿ ಡಾ.ಜಗನ್ನಾಥ ಬಿಜಾಪುರೆ, ಸಹ ಕಾರ್ಯದರ್ಶಿ ಡಾ.ಮಹಾದೇವಪ್ಪ ರಾಂಪುರೆ, ಆಸ್ಪತ್ರೆ ಸಂಚಾಲಕರೂ ಆದ ಆಡಳಿತ ಮಂಡಳಿ ಸದಸ್ಯ ಡಾ.ಎಸ್.ಬಿ.ಕಾಮರೆಡ್ಡಿ, ಎಂಆರ್‌ಎಂಸಿ ಡೀನ್ ಡಾ.ಎಸ್.ಎಂ.ಪಾಟೀಲ್, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಬಸವರಾಜ ಪಾಟೀಲ್ ರಾಯಕೋಡ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net