ಬಸವ ಭಕ್ತರಿಗೆ ಅಪಾರ್ಥ ಬೇಡ: ಪಂಚಮಸಾಲಿ ಶ್ರೀ

5344ce75-4edc-44f0-a0dc-5f8a6f434e35
Published on

ಬಾಗಲಕೋಟೆ: ಬಸವಣ್ಣನವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿಚಾರವಾಗಿ ಬಸವ ಭಕ್ತರು ಅಪಾರ್ಥ ಮಾಡಿಕೊಳ್ಳಬಾರದು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಜಿಲ್ಲೆಯ ಬನಹಟ್ಟಿಯಲ್ಲಿ ಶನಿವಾರ ಪಂಚಮಸಾಲಿ ಮೀಸಲಾತಿ ಹೋರಾಟದ ಬಗ್ಗೆ ಸಭೆಗೆ ಆಗಮಿಸಿದ್ದ ಅವರು, ಸುದ್ದಿಗಾರರ ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯೆ ನೀಡಿದರು.

ಯತ್ನಾಳ್ ಅವರಿಗೆ ಬಸವಣ್ಣನ ಬಗ್ಗೆ ಬಹಳ ಭಕ್ತಿ ಇದೆ. ಏನೋ ಆಡುವ ಮಾತಲ್ಲಿ ಮಾತನಾಡಿರಬಹುದು. ಉದ್ಧೇಶ, ಭಾವನೆ ಬೇರೆ ಬೇರೆ ಇರುತ್ತದೆ. ಮಾತಲ್ಲಿ ಬೇರೆ ಮಾತು ಬಂದಿರಬಹುದು ಎಂದರು.

ಆದರೆ, ಅದೇ ಬನಹಟ್ಟಿಯಲ್ಲಿ ಪ್ರತ್ಯೇಕವಾಗಿ ಸುದ್ದಿಗಾರರ ಜೊತೆ ಮಾತನಾಡಿದ ಯತ್ನಾಳ್ ಮಾತ್ರ, ತಮ್ಮ ಹೇಳಿಕೆಗೆ ಬದ್ಧ. ಆ ಬಗ್ಗೆ ಯಾವುದೇ ಕ್ಷಮೆ ಕೇಳಲ್ಲ, ವಿಷಾದವೂ ಇಲ್ಲ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net