ಬಸವ ಜಯಮೃತ್ಯುಂಜಯ ಸ್ವಾಮೀಜಿ ಜೊತೆ ನಾವಿದ್ದೇವೆ

bkt-14-12
ಬಾಗಲಕೋಟೆಯಲ್ಲಿ ಸೋಮವಾರ ಜಿಲ್ಲಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಧರಿಯಪ್ಪ ಸಾಂಗ್ಲಿಕರ ಮಾತನಾಡಿದರು. ಸಮಾಜದ ಮುಖಂಡರು ಇದ್ದರು.
Published on

ಬಾಗಲಕೋಟೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪರವಾಗಿ ನಿಂತಿದ್ದಾರೆAದು ಪಂಚಮಸಾಲಿ ಸಮಾಜದ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಟೀಕೆ ಟಿಪ್ಪಣಿ ಮಾಡುತ್ತಿರುವ ಪೀಠದ ಟ್ರಸ್ಟಿಗಳ ವಿರುದ್ಧ ಬಾಗಲಕೋಟೆ ಜಿಲ್ಲಾ ಪಂಚಮಸಾಲಿ ಸಮಾಜದ ಘಟಕ ಆಕ್ರೋಶ ವ್ಯಕ್ತಪಡಿಸಿ, ಯಾವುದೇ ಸಂದರ್ಭದಲ್ಲೂ ಸಮಾಜ ಶ್ರೀಗಳ ಬೆನ್ನಿಗೆ ನಿಲ್ಲಲಿದೆ ಎಂದು ಘೋಷಿಸಿದೆ.

ಬಾಗಲಕೋಟೆಯಲ್ಲಿ ಸೋಮವಾರ ವಿವಿಧ ತಾಲೂಕು ಅಧ್ಯಕ್ಷರ ಜೊತೆ ಸೇರಿ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಅಧ್ಯಕ್ಷ ಧರಿಯಪ್ಪ ಸಾಂಗ್ಲಿಕರ, ಪೂಜ್ಯರ ಮೇಲೆ ಆಪಾದನೆ ಮಾಡುವುದು ಹಾಗೂ ಅವರಿಗೆ ಚ್ಯುತಿ ತರುವ ಕೆಲಸವನ್ನು ಸಮಾಜ ಖಂಡಿಸುತ್ತದೆ. ಶ್ರೀಗಳನ್ನು ಪೀಠದಿಂದ ಇಳಿಸಲು ಟ್ರಸ್ಟ್ ಆಗಲ್ಲ. ನಮ್ಮ ಸಮಾಜವೇ ಆ ಟ್ರಸ್ಟ್ನ್ನು ತೀರಸ್ಕಾರ ಮಾಡಬೇಕು. ಟ್ರಸ್ಟ್ ಏನು ಅವರಪ್ಪನ ಮನೆ ಆಸ್ತಿಯಲ್ಲ ಎಂದು ಗುಡುಗಿದರು.

ಕಾಶಪ್ಪನವರ ಶ್ರೀಗಳ ಬಗ್ಗೆ ಟೀಕೆ ಮಾಡುತ್ತ ಯತ್ನಾಳ್ ಪರವಾಗಿ ಇದ್ದಾರೆ ಎನ್ನುತ್ತಾರೆ. ಈ ಹಿಂದೆ ಶ್ರೀಗಳು ಇದೇ ವಿಜಯಾನಂದ ಕಾಶಪ್ಪನವರ ಪರವಾಗಿ ಇದ್ದರಲ್ಲ. ಅವರ ಕುಟುಂಬ ಕಲಹದ ವೇಳೆಯೂ ಅವರ ಪರವಾಗಿಯೇ ಸ್ವಾಮೀಜಿ ನಿಂತಿದ್ದರು. ಇದನ್ನು ಸಮಾಜ ಸೂಕ್ಷ÷್ಮವಾಗಿ ಗಮನಿಸುತ್ತಿದೆ. ಸಮಯ ಬಂದಾಗ ಅವರಿಗೆ ಸೂಕ್ತ ಉತ್ತರ ಕೊಡುತ್ತಾರೆ ಎಂದರು.

ಕೂಡಲಸ0ಗಮ ಪಂಚಮಸಾಲಿ ಪೀಠದ ಟ್ರಸ್ಟ್ ಕುಟುಂಬಕ್ಕೆ ಸಂಬAಽಸಿದ ಟ್ರಸ್ಟ್ನಂತಿದೆ. ಅಲ್ಲಿ ಗದಗ, ಧಾರವಾಡ ಜಿಲ್ಲೆಯವರು ಇದ್ದಾರೆ. ಕೂಡಲಸಂಗಮ ಪೀಠದ ಮಠದ ಮತ್ತು ಜಾಗ ಟ್ರಸ್ಟ್ನ ಅಧ್ಯಕ್ಷರ ಹೆಸರಿನಲ್ಲಿ ಇದೆ. ಈಗ ಅವರು ಸ್ವಾಮೀಜಿ ಬದಲಿಸಲು ಮುಂದಾದರೆ, ಅದಕ್ಕೆ ಪರ್ಯಾಯವಾಗಿ ಅದೇ ಕೂಡಲಸಂಗಮ ಕ್ಷೇತ್ರದಲ್ಲಿ ಈಗ ಇರುವ ಜಾಗಕ್ಕಿಂತ ಹೆಚ್ಚಿನ ಜಾಗ ಖರೀದಿಸಿ, ಮಠ ಕಟ್ಟುತ್ತೇವೆ. ಶ್ರೀಗಳಿಗೆ ಬೆನ್ನೆಲುಬಾಗಿ ಇಡೀ ಸಮಾಜದ ಇದೆ ಎಂದು ಪರ್ಯಾಯ ಪೀಠ ಕಟ್ಟಿ ನಮ್ಮ ತಾಕತ್ತು ತೋರಿಸುತ್ತೇವೆ ಎಂದು ಟ್ರಸ್ಟಿಗಳಿಗೆ ಎಚ್ಚರಿಕೆ ನೀಡಿದರು.

ಬಸವ ಜಯಮೃತ್ಯುಂಜಯ ಸ್ವಾಮೀಜಿ ರಾಜಕೀಯದಿಂದ ದೂರ ಇದ್ದಾರೆ. ಆದರೆ, ಮಠಕ್ಕೆ ಅಪಾರ ಭಕ್ತರು ಬರುತ್ತಾರೆ. ಹೀಗೆ ಬರುವವರ ಪೈಕಿ ರಾಜಕಾರಣಿಗಳು ಇರುತ್ತಾರೆ. ಅವರು ಯಾವುದೋ ಒಂದು ಪಕ್ಷದ ಪರವಾಗಿ ಇರುತ್ತಾರೆ. ಸಮಾಜದ ವ್ಯಕ್ತಿಗೆ ತೊಂದರೆ, ಅನ್ಯಾಯವಾದಾಗ ಪಕ್ಷಾತೀಯವಾಗಿ ಶ್ರೀಗಳು ಧ್ವನಿ ಎತ್ತುತ್ತಾರೆ. ಈ ಹಿಂದೆ ಇದೇ ಕಾಶಪ್ಪನವರ, ವಿನಯ ಕುಲಕರ್ಣಿ, ಲಕ್ಷಿ÷್ಮÃ ಹೆಬ್ಬಾಳ್ಕರ್ ಪರವಾಗಿಯೂ ಶ್ರೀಗಳು ಮಾತನಾಡಿದ್ದರಲ್ಲ, ಆಗ ಶ್ರೀಗಳು ಕಾಂಗ್ರೆಸ್ ಪರವಾಗಿ ಇದ್ದಾರೆ ಎಂದಿದ್ದಾರಾ ಎಂದು ಕಾಶಪ್ಪನವರ ಟೀಕೆಗೆ ತಿರುಗೇಟು ನೀಡಿದರು.

ಪಂಚಮಸಾಲಿ ಸಮಾಜ ದೊಡ್ಡದಿದೆ. ಹೀಗಾಗಿ ಸಮಾಜದಲ್ಲಿ ಐದು ಪೀಠಗಳಾಗಿ ಪಂಚಪೀಠಗಳಾಗಲಿ. ಸದ್ಯ ಮೂರು ಪೀಠಗಳು ಇದ್ದು, ಇನ್ನೂ ಎರಡು ಪೀಠ ಆಗಲಿ. ಸಮಾಜದ ಹಿತ ಕಾಯಲು ಪೀಠಗಳು ಹೆಚ್ಚಾಗಲಿ ಎಂದರು.

ಯಾವುದೇ ಸರ್ಕಾರ ಇರಲಿ ಅದು ತನ್ನ ವಿರುದ್ಧ ಹೋರಾಟ, ಚಳುವಳಿ, ಪ್ರತಿರೋಧವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಹೋರಾಟವನ್ನು ತಡೆಯಲು ಏನು ಬೇಕೋ ಅದನ್ನು ಮಾಡುತ್ತದೆ. ಇದೀಗ ಮೀಸಲಾತಿ ಹೋರಾಟವನ್ನು ಹತ್ತಿಕ್ಕಲು ಈ ಸರ್ಕಾರ ತಮ್ಮ ಪಕ್ಷದಲ್ಲಿ ಇರುವ ನಮ್ಮ ಸಮಾಜದ ಕೆಲವರನ್ನು ಎತ್ತಿಕಟ್ಟಿ ಹೀಗೆ ಗೊಂದಲ ಮೂಡಿಸುತ್ತಿರಬಹುದು. ಸರ್ಕಾರದ ಈ ಹುನ್ನಾರಕ್ಕೆ ನಮ್ಮ ಸಮಾಜ ಬಲಿ ಆಗುತ್ತದೆ. ಈ ಬಗ್ಗೆ ಸಮಾಜ ಬಾಂಧವರ ಎಚ್ಚೆತ್ತುಕೊಳ್ಳಬೇಕು. ಪಂಚಮಸಾಲಿ ಸಮಾಜ ಶ್ರೀಗಳ ಜೊತೆಗೆ ಇರುತ್ತದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಿಜಯಪುರ ಜಿಲ್ಲಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಬಿ.ಎಂ.ಪಾಟೀಲ, ಜಮಖಂಡಿ ತಾಲೂಕು ಅಧ್ಯಕ್ಷ ಮಹಾದೇವ ಇಟ್ಟಿ, ಮುಧೋಳ ತಾಲೂಕು ಅಧ್ಯಕ್ಷ ಎ.ಪಿ.ದಾನಪ್ಪಗೋಳ, ಮಗದೇವ ಮಾರಾಪೂರ, ಸಿದ್ದುಗೌಡ ಪಾಟೀಲ, ಚನ್ನಪ್ಪ ಪಟ್ಟಣಶೆಟ್ಟಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net