ಬಸನಗೌಡ ಯತ್ನಾಳ್ ಹೇಳಿಕೆ ಕೇವಲ ಊಹಾಪೋಹ - ಅಣ್ಣಾಸಾಹೇಬ ಜೊಲ್ಲೆ

04
Published on

ಚಿಕ್ಕೋಡಿ: ಕೇವಲ ಎಂಟು ತಿಂಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆ ಕೇವಲ ಊಹಾಪೋಹ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಹೇಳಿಕೆ ವಿಚಾರವಾಗಿ ಕೆಲವೆಡೆ ಊಹಾಪೋಹಗಳು ಹರಡುತ್ತಿವೆ. ಆದರೂ ಒಳಗೊಳಗೆ ಏನಾದ್ರೂ ಇರಬಹುದು ಎಂದೂ ಅನಿಸುತ್ತದೆ. ಎಲ್ಲರೂ ಆ ರೀತಿ ಹೇಳುತ್ತಾರೆ ಅಷ್ಟೇ.

ಸರ್ಕಾರ ಉರುಳುತ್ತದೆ ಎಂದು ನಾವೂ ಹೇಳುತ್ತೇವೆ. ಆದರೆ, ನಿಜವಾಗಬೇಕಲ್ಲ ಎಂದು ಪ್ರಶ್ನಿಸಿದರು. ರಮೇಶ ಜಾರಕಿಹೊಳಿ ಹಾಗೂ ಬಿ.ಎಲ್.ಸಂತೋಷ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಪಕ್ಷದ ಮುಖಂಡರನ್ನು ನಾವು ಭೇಟಿಯಾಗುತ್ತೇವೆ. ಅವರೂ ಭೇಟಿ ಆಗ್ತಾರೆ. ಇದು ಸಹಜ ಎಂದರು.

ಲಕ್ಷ್ಮಣ ಸವದಿ ಪೆನ್‌ಡ್ರೈವ್ ವಿಚಾರ ಹಾಸ್ಯಾಸ್ಪದ. ಯಾರ ಹತ್ತಿರವೂ ಪೆನ್‌ಡ್ರೈವ್ ಇಲ್ಲ. ಬರೀ ಸುಮ್ಮನೆ ಹೇಳುತ್ತಾರೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net