ಬೈಲಕುಪ್ಪೆ ಬಸವೇಶ್ವರ ದೇವಸ್ಥಾನದಲ್ಲಿ ಪ್ರಯುಕ್ತ ವಿಶೇಷ ಪೂಜೆ

oppo_0
oppo_0
Published on

ಬೈಲಕುಪ್ಪೆ: ಇಲ್ಲಿನ ಬಸವೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ನೆರವೇರಿತು.


ಬೈಲಕುಪ್ಪೆ ಬಸವೇಶ್ವರ ಯುವಕ ಸಂಘದ ವತಿಯಿಂದ ಯುವಕರು ಮಂಗಳವಾರ ಮುಂಜಾನೆಯಿಂದಲೇ ದೇವಸ್ಥಾನದ ಆವರಣ ಸ್ವಚ್ಛಗೊಳಿಸಿ, ತಳಿರು-ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಿ ಗರ್ಭಗುಡಿಯಲ್ಲಿರುವ ಬಸವೇಶ್ವರ ವಿಗ್ರಹವನ್ನು ಅರ್ಚಕರು ಸ್ವಚ್ಛಗೊಳಿಸಿ ವಿವಿಧ ಹೂಗಳಿಂದ ಅಲಂಕರಿಸಿ ವಿವಿಧ ಹೋಮ-ಹವನಗಳನ್ನು ನೆರವೇರಿಸಿದರು. ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.


ಬಸವೇಶ್ವರ ವಿಗ್ರಹವನ್ನು ವಾಹನದಲ್ಲಿ ಕೂರಿಸಿ ಕೊಪ್ಪ ಸಮೀಪದಲ್ಲಿರುವ ಕಾವೇರಿ ನದಿಗೆ ಕೊಂಡೊಯ್ದು ಅರ್ಚಕರಾದ ನಿಖಿಲ್ ಹಾಗೂ ಮುದ್ದಪ್ಪ ಅವರ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯ ನೆರವೇರಿಸಿ ಮಂಗಳವಾದ್ಯದೊಂದಿಗೆ ಬೈಲಕುಪ್ಪೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆ ಆಗಮಿಸುವ ರಸ್ತೆಯನ್ನು ಮಹಿಳೆಯರು ರಂಗೋಲಿ ಬಿಡಿಸಿ ಅಲಂಕರಿಸಿದ್ದರು. ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರಲ್ಲದೆ, ವಾದ್ಯ, ತಮಟೆ ಸದ್ದಿಗೆ ಹೆಜ್ಜೆಹಾಕಿ ಕುಣಿದು ಕುಪ್ಪಳಿಸಿದರು.


ದೇಗುಲದ ಗೌರವಾಧ್ಯಕ್ಷ ಟಿ.ಗೋವಿಂದ, ಅಧ್ಯಕ್ಷ ಮಂಜು, ಕಾರ್ಯದರ್ಶಿ ಸೋಮಣ್ಣ, ಸದಸ್ಯರಾದ ಚೇತನ್, ಶಿವ, ಸತೀಶ್, ರಾಮಕೃಷ್ಣ, ಮಹೇಶ್, ರವೀಶ್, ರಮೇಶ್, ಮಂಜು, ಅಭಿ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net