

ಬಾಗಲಕೋಟೆ: ಬನದ ತಾಯಿ ಬನಶಂಕರಿ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಬನಶಂಕರಿ ದೇವಿಗೆ ನೆರವೇರಿಸಿದ್ದ ಅಲಂಕಾರ ಆಕರ್ಷಿಸಿತು.
ಬೆಳಗ್ಗೆ ಶ್ರೀದೇವಿಗೆ ಪೂಜೆ, ಅಭಿಷೇಕ ಮಧ್ಯಾಹ್ನ ನೈವೇದ್ಯ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ನಾಡಿನೆಲ್ಲಡೆ ಹರಿದು ಬಂದಿದ್ದ ಜನ ಸ್ತೋಮ ದೇವಿಗೆ ಪೂಜೆ ಸಲ್ಲಿಸಿ ಉತ್ತಮ ಮಳೆ, ಬೆಳೆ, ಆರೋಗ್ಯ ಸಮೃದ್ಧಿಗೆ ಪ್ರಾರ್ಥಿಸಿದರು.