

ಬಾಗಲಕೋಟೆ: ಉತ್ತರ ಕರ್ನಾಟದಲ್ಲೇ ಪ್ರಸಿದ್ಧವಾದ ಬಾದಾಮಿ ಬನಶಂಕರಿ ಜಾತ್ರೆಯಲ್ಲಿ ನಾಟಕಗಳ ಪ್ರದರ್ಶನ ಆರಂಭಗೊಂಡಿದ್ದು, ಕೌಟುಂಬಿಕ ನಾಟಕಗಳನ್ನು ರಚಿಸಲಾಗಿದೆ ಎಂದು ಹಿರಿಯ ನಾಟಕಕಾರ ಜೀವರ್ಗಿ ರಾಜಣ್ಣ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಜಾತಾ ಗುಬ್ಬಿ ಅವರ ಮಾಲೀಕತ್ವದ ಬಿಎಸ್ ಆರ್ ನಾಟಕ ಸಂಘ ಗುಬ್ಬಿ ಪ್ರಸ್ತುತ ಪಡಿಸುವ ಗಂಗಿ ಮನ್ಯಾಗ ಗೌರಿ ಹೊಲ್ದಾಗ ನಾಟಕ ಪ್ರದರ್ಶನ ಭವ್ಯ ರಂಗಸಜ್ಜಿಕೆಯಲ್ಲಿ ನಡೆಯಲಿದೆ. ನಾಟಕವನ್ನು ಮಹಾದೇವ ಹೊಸೂರು ರಚಿಸಿದ್ದಾರೆ ಎಂದರು.
ಟಿವಿ ಧಾರಾವಾಹಿ, ಸಿನಿಮಾ ಹಾಗೂ ರಿಯಾಲಿಟಿ ಶೋಗಳಲ್ಲಿ ದ್ವಂದ್ವಾರ್ಥ ಸಂಭಾಷಣೆಗಳೇ ಮಿಂಚುತ್ತಿರುವ ಸಂದರ್ಭದಲ್ಲಿ ಅಶ್ಲೀಲ ಸಂಭಾಷಣೆಯಿಲ್ಲದ, ಐಟಂ ಸಾಂಗ್‌ಗಳಿಲ್ಲದ ಈ ನಾಟಕ ಹಾಸ್ಯದ ಜೊತೆಗೆ ನೈತಿಕತೆ, ಮನೋವಿಕಾಸ ಹಾಗೂ ಸಾಮಾಜಿಕ ಸಂದೇಶ ನೀಡುವ ನಾಟಕ ಇದೆ ಎಂದು ಹೇಳಿದರು.
ಸುಜಾತಾ ಗುಬ್ಬಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಇವರೊಂದಿಗೆ ಕಾಮಿಡಿ ಕಿಲಾಡಿಗಳ ಹರೀಶ ಹಿರಿ ಯೂರು, ಮಾರುತಿ ಶೆಟ್ಟಿ, ಸಿದ್ದರಾಮ ತತ್ರಾಣಿ ಹಾಸ್ಯಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿರೇಶ ಮುತ್ತಿನಮಠ, ಪ್ರಕಾಶ ಮೂಡಿಗೆರೆ, ಪ್ರಭಯ್ಯ ಹಿರೇಮಠ, ಚಿಕ್ಕೇಶ ಕಲ್ಲೂರ, ಅನುಶ್ರೀ ಧಾರವಾಡ, ಕವಿತಾ ಪಾಟೀಲ ಬನ್ನೂರು ಅಭಿನಯಿಸುತ್ತಿದ್ದಾರೆ. ವಾದ್ಯ ವೃಂದದಲ್ಲಿ ಬಸವಲಿಂಗ ಕೋಡ್ಲಿ ಹಾಗೂ ಮುತ್ತು ದೊಡಮನಿ ಸಾಥ್ ನೀಡುತ್ತಿದ್ದಾರೆ. ಈ ನಾಟಕವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬಂದು ನೋಡಬೇಕೆಂದು ಅವರು ಮನವಿ ಮಾಡಿ ಕೊಂಡರು.
ಹೊಳೆ ಹುಚ್ಚೇಶ್ವರ ನಾಟ್ಯ ಸಂಘ ಕಮತಗಿ ಕಂಪನಿ ಮಾಲೀಕರಾದ ಪಾಪು ಕಲ್ಲೂರ ಮಾತನಾಡಿ, ನಮ್ಮ ಕಂಪನಿಯಿಂದ ನಿರ್ಮಿಸಿರುವ ಬಾದಾಮಿ ಇಮ್ಮಡಿ ಪುಲಕೇಶಿ ಬೃಹತ್ ಪ್ರತಿಮೆ ಅನಾವರಣೆಗೊಳಿಸಲಾಗುವುದು. ಜಾತ್ರೆಯಲ್ಲಿ ಸೌಡಿಲ್ಲದ ಸಾಹುಕಾರ ನಾಟಕ ಪ್ರದರ್ಶನಗೊಳ್ಳಲಿದೆ. ಕಾಮಿಡಿ ಕಿಲಾಡಿ ಖ್ಯಾತಿಯ ಚನಚಿತ್ರ ನಟಿ ಜ್ಯೂ.ಉಮಾಶ್ರೀ ಅಂತ ಪ್ರಸಿದ್ಧವಾಗಿರುವ ಶುಭಲಕ್ಷಿ÷್ಮÃ ಯಲ್ಲಾಪುರ ಮುಖ್ಯ ಹಾಸ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವೃತ್ತಿರಂಗಭೂಮಿ ಇತಿಹಾಸದಲ್ಲೇ ಸಮಾಜಕ್ಕೆ ಉತ್ತಮ ಸಂದೇಶವುಳ್ಳ ನಾಟಕ ಇದಾಗಿದೆ ಎಂದರು.
ನಾಟಕಾರರಾದ ವಿರೇಶ ಮುತ್ತಿನಮಠ, ಡಿ.ಆರ್.ಕರ್ಜಗಿ, ಕುಮಾರಸ್ವಾಮಿ ಹಿರೇಮಠ ಉಪಸ್ಥಿತರಿದ್ದರು.