ಬನವಾಸಿಯಲ್ಲಿ ನಾಲ್ವರು ಕಳ್ಳರ ಬಂಧನ

IMG-20220926-WA0018.jpg
Published on

ಕಾರವಾರ: ಶಿರಸಿ ತಾಲೂಕಿನ ಬನವಾಸಿಯ ಮನೆಯಲ್ಲಿ ಕಳ್ಳತನ ಮಾಡಿದ ಇಬ್ಬರು ವಿದ್ಯಾರ್ಥಿಗಳು ಸೇರಿ ನಾಲ್ವರನ್ನು ಅಲ್ಲಿನ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಜನತಾ ಕಾಲೋನಿಯ ಕೂಲಿ ಕೆಲಸ ಮಾ ಮೊಹಮ್ಮದ್ ಕೈಫ್ ಶಿರಗೋಡ, ವಿದ್ಯಾರ್ಥಿಗಳಾದ ಮುಖ್ಯ ರಸ್ತೆಯ ವಿಶ್ವ ಮಹೇಶ ಪಾವಸ್ಕರ್,ಕಡಗೋಡ ರಸ್ತೆಯ ಯಾಸಿನ್ ಭಾಷಾಸಾಬ್ ಹಾಗೂ ಕೃಷಿ ಕೆಲಸ ಮಾಡಿಕೊಂಡಿದ್ದ ಹೊಸಪೇಟ ರಸ್ತೆಯ ರಿಯಾಜ್ ಇಕ್ಬಾಲ್‌ಚೌಧರಿ ಬಂಧಿತರು. ಅವರಿಂದ 2.75 ಲಕ್ಷ ರೂ. ನಗದು ಹಾಗೂ 10 ಗ್ರಾಂ ಬಂಗಾರವನ್ನು ವಶಕ್ಕೆ ಪಡೆಯಲಾಗಿದೆ.

ಸೆ.9 ರಂದು ಅಬ್ದುಲ್ ಅಜೀಂ ಶೇಖ್ ಅವರ ಮನೆಯಲ್ಲಿದ್ದ 2.55 ಲಕ್ಷ ರೂ. ನಗದು ಹಾಗೂ 4 ಗ್ರಾಂ ತೂಕದ ಬಂಗಾರದ ಉಂಗುರಗಳನ್ನು ಕಳವು ಮಾಡಲಾಗಿತ್ತು. ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಂಧಿತರ ತನಿಖೆ ನಡೆಸಲಾಗಿ, ಮೊಹಮ್ಮದ್ ಕೈಫ್ ಶಿರಗೋಡ ಎಂಬಾತ ಈ ಹಿಂದೆ ಬನವಾಸಿಯ ಸುವರ್ಣಾ ಎಂಬುವವರ ಮನೆಯಲ್ಲೂ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net