ಬದುಕಿನ ವಿಧಾನ ಪರಿಸರಕ್ಕೆ ಪೂರಕವಾಗಿರಲಿ

bkt-5-1
ಬಾಗಲಕೋಟೆ ನಗರದ ಆದರ್ಶ ವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಜಿಲ್ಲಾಽಕಾರಿ ಜಾನಕಿ ಕೆ.ಎಂ. ಉದ್ಘಾಟಿಸಿದರು.
Published on

ಬಾಗಲಕೋಟೆ: ನಮ್ಮ ಬದುಕಿನ ವಿಧಾನವನ್ನು ಪರಿಸರಕ್ಕೆ ಪೂರಕವಾಗಿ ಬಳಸಿಕೊಂಡರೆ ಮಾತ್ರ ಮುಂದಿನ ಪೀಳಿಗೆ ನೆಮ್ಮದಿಯಿಂದ ಬದುಕಲು ಸಾಧ್ಯವಿದೆ ಎಂದು ಜಿಲ್ಲಾಽಕಾರಿ ಜಾನಕಿ ಕೆ.ಎಂ. ಹೇಳಿದರು.

ನವನಗರದ ಆದರ್ಶ ವಿದ್ಯಾಲಯದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಅರಣ್ಯ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರ, ಶಾಲಾ ಶಿಕ್ಷಣ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಜೀವಿತದ ಕೊನೆಯವರೆಗೂ ಪರಿಸರಕ್ಕೆ ಕೃತಜ್ಞತಾ ಪೂರ್ವಕವಾಗಿ ಇರಬೇಕಾಗುತ್ತದೆ. ಪರಿಸರ ಇಲ್ಲದೇ ಯಾವ ಜೀವಯು ಉಸಿರಾಡಲು ಸಾಧ್ಯವಾಗುವದಿಲ್ಲದೆ ಎಂದರು.

ದೈನAದಿನ ಬದುಕಿನಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಬೇಕಿದೆ. ಯಾವ ಊರಿಗೆ ಹೋಗಿ ಕಾಲಿಟ್ಟರು ಅರ್ಧ ಕಿ.ಮೀ ಮುಂಚೆನೆ ಪ್ಲಾಸ್ಟಿಕ ರಾಶಿ ಸ್ವಾಗತ ಕೋರುತ್ತವೆ. ನೀರಿನ ಮೂಲ ಕೊಳದ ಸಮೀಪ ಪ್ಲಾಸ್ಟಿಕ್ ತೊಟ್ಟಿಗಳನ್ನು ಮಾಡಿರುತ್ತಾರೆ. ಪ್ಲಸ್ಟಿಕ್ ಕರಗಿ ಮಣ್ಣಲ್ಲಿ ಮಣ್ಣಾಗಬೇಕಾದರೆ, ಸಾವಿರ ವರ್ಷಗಳು ಬೇಕಾಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಮಾನವ ಕುಲ ಮಾತ್ರ ಪರಿಸರಕ್ಕೆ ವಿಮುಖವಾಗಿ ಕೆಲಸ ಮಾಡುತ್ತಿದೆ. ನಾವೆಲ್ಲರೂ ಪರಿಸರಕ್ಕೆ ಋಣಿಯಾಗಿದ್ದು, ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ಕಡಿಮೆ ಮಾಡಬೇಕಿದೆ ಎಂದು ತಿಳಿಸಿದರು.

ಪ್ಲಾಸ್ಟಿಕ್ ವೈದ್ಯಕೀಯ ಹಾಗೂ ತಾಂತ್ರಿಕ ಅವಿಷ್ಕಾರಗಳಿಗೆ ಅವಶ್ಯಕತೆ ಇದೆ. ಆದರೆ ನಮ್ಮ ಮನೆಯಲ್ಲಿ ದಿನಕ್ಕೆ ೫ ರಿಂದ ೧೦ ಪ್ಲಾಸ್ಟಿಕ್ ಕವರಗಳು ಬರುತ್ತವೆ. ಅವುಗಳನ್ನು ಕಡಿಮೆ ಮಾಡಬೇಕು. ನಾವೆಲ್ಲರೂ ಕೃತಜ್ಞತಾ ಭಾವನೆಯಿಂದ ಕೆಲಸ ಪ್ರಾರಂಭಿಸಿದಾಗ ಆ ದಿನ ಚೆನ್ನಾಗಿರುತ್ತದೆ. ಇವೆಲ್ಲದಕ್ಕೂ ಮಿಗಿಲಾಗಿರುವುದು ಪರಿಸರ. ಪರಿಸರ ಹಾಳು ಮಾಡಲು ಎಷ್ಟು ವಿಧಾನಗಳಿಗೆ ಅದಕ್ಕೆ ಪೂರಕವಾಗಿ ಬದುಕಲು ಸಹ ವಿಧಾನಗಳಿವೆ. ಬದುಕಿನ ವಿಧಾನವನ್ನು ಪರಿಸರಕ್ಕೆ ಪೂರಕವಾಗಿ ಬಳಸದಿಕೊಂಡು ಜೀವನ ಸಾಗಿಸಬೇಕಿದೆ ಎಂದು ಹೇಳಿದರು.

ಉಪ ಅರಣ್ಯ ಸಂರಕ್ಷಣಾಽಕಾರಿ ರುಥ್ರೇನ್ ಪಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್.ಜಿ.ಮಿರ್ಜಿ ಮಾತನಾಡಿ, ವಿಶ್ವ ಪರಿಸರ ದಿನಾಚರಣೆಯು ಪ್ರತಿ ವರ್ಷ ಜೂ.೫ ರಂದು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಆಚರಿಸಲಾಗುವ ಒಂದು ಜಾಗತಿಕ ಕಾರ್ಯಕ್ರಮವಾಗಿದೆ. ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗಳೊಳಿಸುವುದು ಈ ವರ್ಷದ ಥೀಮ್ ಆಗಿದ್ದು, ಪರಿಸರ ಸಂರಕ್ಷಣೆಯು ನಮ್ಮ ಗೃಹ, ಸಮುದಾಯಗಳು ಮತ್ತು ಆರ್ಥಿಕತೆಯನ್ನು ಕಾಪಾಡಿಕೊಳ್ಳಲು ಮೂಲಾಧಾರವಾಗಿವೆ. ಇದನ್ನು ರಕ್ಷಿಸುವ ಅಗತ್ಯತೆ ಇದೆ ಎಂದು ಹೇಳಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಪರಿಸರ ಅಽಕಾರಿ ಡಾ.ಅನುಲಕುಮಾರ ತಳಗೇರಿ ಮಾತನಾಡಿ, ಪ್ರತಿ ವರ್ಷ ಒಂದೊAದು ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಮಕ್ಕಳು, ಯುವಕರು ಹಾಗೂ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸುವುದು ಅವಶ್ಯವಾಗಿರುತ್ತದೆ. ಪ್ರಕೃತಿ ನಮ್ಮ ಪೂರ್ವಜರಿಂದ ಬಳುವಳಿಯಾಗಿ ದೊರೆತಿಲ್ಲ. ಅದು ನಮಗೆ ಸಾಲದ ರೂಪದಲ್ಲಿ ನೀಡಿದ್ದು, ಮುಂದಿನ ಪೀಳಿಗೆಗೆ ಸುಂದರವಾಗಿ ಹಸ್ತಾತರಿಸುವ ಕಾರ್ಯವಾಗಬೇಕಿದೆ. ಆದ್ದರಿಂದ ಸಾರ್ವಜನಿಕರು ನಮ್ಮ ಸುತ್ತಮುತ್ತಲಿನ ದೈನಂದಿನ ಜೀವನ ಶೈಲಿ ಬದಲಾಯಿಸಿಕೊಳ್ಳಬೇಕಿದೆ ಎಂದರು.

ಈ ಸಂದರ್ಭದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಅಮರನಾಥ ರೆಡ್ಡಿ, ಸಾಮಾಜಿಕ ಅರಣ್ಯ ವಿಭಾಗದ ಉಪ ಸಂರಕ್ಷಣಾಽಕಾರಿ ಸಿ.ಜಿ.ಮಿರ್ಜಿ, ಕ್ಷೇತ್ರ ಶಿಕ್ಷಣಾಽಕಾರಿ ಎಂ.ಎಸ್.ಬಡದಾನಿ, ಸಹಾಯಕ ಅರಣ್ಯ ಅಽಕಾರಿ ರೂಪಾ ವಿ.ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net