ಬದುಕಿನ ಯಶಸ್ಸಿಗೆ ಬುದ್ಧ ತತ್ವಗಳ ಪರಿಪಾಲನೆ ಅತ್ಯವಶ್ಯ

12ark1
Published on

ಅರಕಲಗೂಡು: ಬದುಕಿನ ಯಶಸ್ಸಿಗೆ ಬುದ್ಧ ತತ್ವಗಳ ಪರಿಪಾಲನೆ ಅತ್ಯವಶ್ಯ ಎಂದು ತಹಸೀಲ್ದಾರ್ ಸೌಮ್ಯಾ ಹೇಳಿದರು.

ಪಟ್ಟಣದ ಡಿ.ದೇವರಾಜು ಅರಸು ಭವನದ ಸಭಾಂಗಣದಲ್ಲಿ ಸೋಮವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಂಯುಕ್ತಶ್ರಾಯದಲ್ಲಿ ಆಯೋಜಿಸಿದ್ದ 2558ನೇ ಬುದ್ಧ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗೌತಮ ಬುದ್ಧ ತನ್ನ ಚಿಕ್ಕ ವಯಸ್ಸಿಗೆ ಪ್ರಪಂಚದಾದ್ಯಂತ ಪ್ರವಾಸ ಮಾಡಿ ಗುರು ಹಿರಿಯರ ಮಾರ್ಗದರ್ಶನ ಪಡೆದು ನಂತರ ಅರಳಿಮರದ ಕೆಳಗೆ ಕುಳಿತು ತಪಸ್ಸು ಮಾಡಿ ಜ್ಞಾನದೀಕ್ಷೆ ಪಡೆದರು. ನಂತರ ತನ್ನ ಜ್ಞಾನವನ್ನು ಇತರರಿಗೆ ಪ್ರಚಾರ ಮಾಡುವ ಸಲುವಾಗಿ ದೇಶದ್ಯಾಂತ ಪರ್ಯಟನೆ ಮಾಡಿದರು. ತಮ್ಮ ಅಪಾರ ಶಿಷ್ಯ ವರ್ಗದ ಮೂಲಕ ಬೌದ್ಧ ಧರ್ಮವನ್ನು ಪ್ರಚಾರ ಮಾಡುವಲ್ಲಿ ಯಶಸ್ವಿಯಾದರು. ಬುದ್ಧನ ಮಹಿಮೆ ಇಡೀ ಪ್ರಪಂಚವನ್ನೇ ಆವರಿಸಿದೆ. ಹೀಗಾಗಿ ಭೌದ್ಧ ಧರ್ಮದ ಪ್ರಚಾರಕ ಗೌತಮ ಬುದ್ಧನ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಅದರಂತೆ ನಡೆದುಕೊಂಡಾಗ ಮಾತ್ರ ಉನ್ನತಿ ಕಾಣಲು ಸಾಧ್ಯವಿದೆ ಎಂದರು.

ವಕೀಲ ಬಿ.ಸಿ.ರಾಜೇಶ್, ತಾಲೂಕು ಅಂಬೇಡ್ಕರ್ ವಾದ ಸಂಚಾಲಕ ದುಮ್ಮಿ ಕೃಷ್ಣ ಮಾತನಾಡಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಪುಷ್ಪಲತಾ, ತಾಪಂ ಇಒ ಪ್ರಕಾಶ್, ಪಪಂ ಮುಖ್ಯಾಧಿಕಾರಿ ಬಸವರಾಜು ಟಾಕಪ್ಪ ಶಿಗ್ಗಾವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net