ಬದಲಾವಣೆಗೆ ಬಯಸಿದ್ದಾರೇ ಜನ

bkt-8-3
ಬಾಗಲಕೋಟೆ ನಗರದ ಕಾಮಧೇನು ಸಂಸ್ಥೆಯ ಕಚೇರಿಯಲ್ಲಿ ನಡೆದ ಚುನಾವಣೆ ಪ್ರಚಾರ ಪೂರ್ವಭಾವಿ ಸಭೆಯಲ್ಲಿ ಮಲ್ಲಿಕಾರ್ಜುನ ಚರಂತಿಮಠ ಮಾತನಾಡಿದರು.
Published on

ಬಾಗಲಕೋಟೆ: ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಲ್ಲಿ ಬದಲಾವಣೆಯಾಗಲೇಬೇಕು ಎಂದು ಜನರೇ ಒತ್ತಡ ಹಾಕುತ್ತಿದ್ದಾರೆ. ಜನರ ಮನಸ್ಸಿನಲ್ಲಿ ಒಮ್ಮೆ ಬದಲಾವಣೆ ಬಂದರೆ ಸಾಕು, ಯಾರು ಎಷ್ಟೇ ಪ್ರಯತ್ನ ಮಾಡಿದರೂ, ಅದನ್ನು ತಡೆಯಲು ಸಾಧ್ಯವಿಲ್ಲ ಎಂದು ಯುವ ಮುಖಂಡ ಮಲ್ಲಿಕಾರ್ಜುನ ಚರಂತಿಮಠ ಹೇಳಿದರು.

ನಗರದ ಕುಮಟಗಿ ಶೋರೂಂನಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಚುನಾವಣೆ ಪ್ರಚಾರದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.


ಇದು ಜಿಲ್ಲಾ ಕೇಂದ್ರವಾದ ಕ್ಷೇತ್ರ. ಅದರಲ್ಲೂ ಮುಳುಗಡೆಯಿಂದ ಹಲವಾರು ಸಮಸ್ಯೆಗಳಿವೆ. ಇಲ್ಲಿಂದ ಆಯ್ಕೆಯಾದವರು ನಿತ್ಯವೂ ಜನರ ಕೈಗೆ ಸಿಗಬೇಕು. ಅವರೊಂದಿಗೆ ಗೌರವಯುತವಾಗಿ ಮಾತನಾಡಿ, ಕಷ್ಟಕ್ಕೆ ಸ್ಪಂದಿಸಬೇಕು. ಆದರೆ, ಇಲ್ಲಿನ ಜನಪ್ರತಿನಿಽಗಳನ್ನು ಭೇಟಿಯಾಗಲು ವಸೂಲಿ ಹಚ್ಚುವ ಸಂಪ್ರದಾಯವಿದೆ. ಇದಕ್ಕೆ ಬ್ರೇಕ್ ಹಾಕಬೇಕು. ನೀವು ಚುನಾವಣೆ ಮಾಡಿ, ನಿಮ್ಮೊಂದಿಗೆ ನಾವೆಲ್ಲ ಇದ್ದೇವೆ ಎಂದು ಒತ್ತಡ ಹಾಕುತ್ತಿದ್ದಾರೆ ಎಂದರು.

ಕ್ಷೇತ್ರದ ಪ್ರತಿಯೊಬ್ಬ ಕಾರ್ಯಕರ್ತರು, ಜನರು ಮನಸ್ಸು ಮಾಡಿದರೆ ಈ ಬಾರಿ ಬದಲಾವಣೆ ಸಾಧ್ಯವಿದೆ. ಇದಕ್ಕಾಗಿ ದೊಡ್ಡ ಮಟ್ಟದ ಪಡೆಯೇ ಸಿದ್ದವಾಗಿದೆ. ಇದು ಕೇವಲ ನಗರ ಪ್ರದೇಶದಲ್ಲಿ ಕೇಳಿ ಬರುತ್ತಿಲ್ಲ. ಪ್ರತಿ ಹಳ್ಳಿ ಹಳ್ಳಿಯ ಜನರೂ ಬದಲಾವಣೆಗೆ ಮನಸ್ಸು ಮಾಡಿದ್ದಾರೆ. ಈ ಚುನಾವಣೆ, ಬಾಗಲಕೋಟೆ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ತರಲಿದೆ ಎಂದರು.

ಪ್ರಮುಖರಾದ ಸಂತೋಷ ಹೊಕ್ರಾಣಿ, ವಿಜಯ ಸುಲಾಖೆ, ಶಂಭುಗೌಡ ಪಾಟೀಲ, ಸಂಗನಗೌಡ ಪಾಟೀಲ, ರಾಜು ಚಿತ್ತವಾಡಗಿ, ಚಂದ್ರಕಾಂತ ಕೇಸನೂರ, ರವಿ ಕುಮಟಗಿ ಮುಂತಾದವರು ಮಾತನಾಡಿ, ಬಾಗಲಕೋಟೆ ಕ್ಷೇತ್ರದ ಜನರು ಬದಲಾವಣೆ ಬಯಸಿದ್ದಾರೆ. ಜನರ ಆಶೋತ್ತರಗಳಿಗೆ ಸ್ಪಂದಿಸಿ, ನಾವೆಲ್ಲ ಮುನ್ನಡೆಯೋಣ. ಜನರ ಸಮಸ್ಯೆಗೆ ಸ್ಪಂದಿಸುವ ಜತೆಗೆ ಕಾರ್ಯಕರ್ತರೊಂದಿಗೆ ಬಾಂಧವ್ಯದಿಂದ ಕೆಲಸ ಮಾಡುವ ನಾಯಕರು ಬಾಗಲಕೋಟೆ ಕ್ಷೇತ್ರಕ್ಕೆ ಬೇಕಾಗಿದ್ದಾರೆ. ಅದಕ್ಕಾಗಿ ನಾವೆಲ್ಲ ಚುನಾವಣೆ ಪ್ರಚಾರಕ್ಕೆ ಸಿದ್ಧರಿದ್ದೇವೆ ಎಂದು ಹೇಳಿದರು.

ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಕಟಗೇರಿ, ಮುಖಂಡರಾದ ಮೃತ್ಯುಂಜಯ ಬಳೂಲಮಠ, ಅಶೋಕ ಮುತ್ತಿನಮಠ, ಗುರು ಅನಗವಾಡಿ, ರಾಜು ಗೌಳಿ, ಅರುಣ ಲೋಕಾಪುರ, ಪ್ರಶಾಂತ ಸೋನಕನಾಳ, ನಿಂಗಪ್ಪ ಮೋಕಾಶಿ, ಪ್ರಜ್ವಲ್ ಸಕ್ರಿ, ಪ್ರವೀಣ ಮಗಜಿ, ರಮೇಶ ಬಂಡಿವಡ್ಡರ, ನಾಗರಾಜ ಬಾಸೂತಕರ, ಶಂಕರ ಗಣೇಗರ, ರಾಜು ಬಾಸೂತಕರ, ತಾರಾಸಿಂಗ್ ರಾಠೋಡ, ಸಂಜು ಪವಾರ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net