ಬಣ್ಣದೋಕುಳಿಯಲ್ಲಿ ಮಿಂದೆದ್ದ ಕೋಟೆನಗರಿ

bkt-15-2
ಬಾಗಲಕೋಟೆ ನಗರದ ಹೋಳಿ ಹಬ್ಬದ ಅಂಗವಾಗಿ ಕಾಲೇಜು ರಸ್ತೆಯಲ್ಲಿ ಬಣ್ಣದ ಬಂಡಿಗಳ ಸಮಾಗಮದ ದೃಶ್ಯ.
Published on

ಬಾಗಲಕೋಟೆ: ಅತ್ಯಂತ ವಿಜೃಂಬಣೆಯಿAದ ಆರಂಭವಾಗಿದ್ದ ಐತಿಹಾಸಿಕ ಬಾಗಲಕೋಟೆ ಹೋಳಿ ಹಬ್ಬವು ಎರಡನೇ ದಿನವಾದ ಶನಿವಾರ ಸಂಭ್ರಮ ಸಡಗರದಿಂದ ಜರುಗಿತು. ಬಣ್ಣದೋಕುಳಿಯಲ್ಲಿ ಕೋಟೆನಗರಿ ಅಕ್ಷರಶಃ ಮಿಂದೆದ್ದಿತು.

ಹಳೇ ನಗರ, ನವನಗರ, ವಿದ್ಯಾಗಿರಿಯ ಗಲ್ಲಿಗಲ್ಲಿಗಳಲ್ಲಿ ಬೆಳಗ್ಗೆಯಿಂದಲೆ ಬಣ್ಣದಾಟ ಅಬ್ಬರದಿಂದ ಆರಂಭಗೊAಡಿತು. ಮಕ್ಕಳು, ಮಹಿಳೆಯರು, ವೃದ್ದರು ಸೇರಿದಂತೆ ಎಲ್ಲರು ರಂಗೀನಾಟವಾಡಿ ಸಂಭ್ರಮಿಸಿದರು. ಎರಡನೇ ದಿನ ಶನಿವಾರ ವೆಂಕಟಪೇಟ, ಹಳಪೇಟ, ಜೈನ್‌ಪೇಟ ಮೂರು ಕಡೆಗಳಲ್ಲಿ ಬಣ್ಣದೋಕುಳಿ ನಡೆಯಿತು.

ಚಿಣ್ಣರು, ಯುವಕರು ಹಲಗೆ ಭಾರಿಸುತ್ತಾ ನಗರದ ಪ್ರಮುಖ ಬೀದಿ ಸಂಚರಿಸಿದರು. ಕ್ಷಣ ಕ್ಷಣಕ್ಕೂ ಹೊರ ಹೊಮ್ಮುತ್ತಿದ್ದ ಹಲಗೆ ನೀನಾದಕ್ಕೆ ಗುಂಪು, ಗುಂಪು ಎಲ್ಲರು ಕುಣಿದು ಕುಪ್ಪಳಿಸಿದರು. ನಗರದ ಬಸವೇಶ್ವರ ವೃತ್ತ, ವಲ್ಲಾಭಾಯಿ ಚೌಕ, ಕೊತ್ತಲೇಶ ದೇವಸ್ಥಾನ, ಎಂ.ಜಿ.ರಸ್ತೆ, ಕಾಲೇಜು ರಸ್ತೆ ಸೇರಿದಂತೆ ನಗರದ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಜನ ಸಾಗರವೆ ಸೇರಿ ಪರಸ್ಪರ ಗುಲಾಲ ಎರಚಿ ಸಂಭ್ರಮಿಸಿದರು.

ಬಗೆಬಗೆಯ ಬಣ್ಣವನ್ನು ಹಚ್ಚುತ್ತ ಬಣ್ಣದೋಕುಳಿಗೆ ರಂಗೇರುವAತೆ ಮಾಡಿದರು. ಮಾಧ್ಯಾಹ್ನದ ನಂತರ ನಗರದ ತುಂಬೆಲ್ಲ ಬಣ್ಣದ ಓಕುಳಿ ತೀವ್ರಗೊಂಡಿತು. ಮೂರು ಪೇಟಗಳ ಜನರು ಬಣ್ಣದ ಬಂಡಿಗಳ ಜೊತೆಗೆ ಕೋಟೆ ನಗರಿಯ ಪ್ರಮುಖ ರಸ್ತೆಗಳಲ್ಲಿ ಬಣ್ಣದ ನೀರು ಎರೆಚುತ್ತ ಸಾಗಿದರು. ಬಸವೇಶ್ವರ ವೃತ್ತದಿಂದ ಕಾಲೇಜು ವೃತ್ತದ ವರೆಗೆ ಪರಸ್ಪರ ಎದುರಾದ ವೆಂಕಟಪೇಟ, ಹಳಪೇಟ, ಜೈನ್‌ಪೇಟಯ ಬಣ್ಣದ ಬಂಡಿಗಳು ನೋಡುವುದೇ ಕಣ್ಣಿಗೆ ಹಬ್ಬದಂತೆ ಗೋಚಿರಿಸಿತು.

ಬಂಡಿ, ಟ್ರ‍್ಯಾಕ್ಟರಗಳಲ್ಲಿ ಬಣ್ಣದ ನೀರು ತುಂಬಿದ ಬ್ಯಾರೆಲ್ ಇರಿಸಿ ಎದುರು ಬದುರು ನಿಂತು ಹುಯ್ಯುತ್ತ ಬಣ್ಣದ ಹಬ್ಬದ ಮೆರಗು ಹೆಚ್ಚಿಸಿದರು. ಮೂರು ಪೇಟಗಳ ಜನರು ಒಂದು ಕಡೆಗೆ ಬಣ್ಣದಲ್ಲಿ ಸಮಾಗಮವಾಗುವ ದೃಶ್ಯವನ್ನು ನೋಡಲು ಸಾವಿರಾರು ಜನರು ರಸ್ತೆಯ ಇಕ್ಕೇಲಗಳಲ್ಲಿ ನಿಂತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net