ಬಣಜಿಗ ಸಮಾಜ ಶರಣ ಸಂಸ್ಕೃತಿಯ ಪ್ರತಿಬಿಂಬ

bkt-13-2
ಬಾಗಲಕೋಟೆ ನಗರದ ವಿದ್ಯಾಗಿರಿಯ ಅಥಣಿ ಕಲ್ಯಾಣ ಮಂಟಪದಲ್ಲಿ ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ಬಾಗಲಕೋಟೆ ತಾಲೂಕು ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಅಂಕಲಗಿಯ ಅಮರಸಿದ್ಧೇಶ್ವರ ಸ್ವಾಮೀಜಿ ಉದ್ಘಾಟಿಸಿದರು.
Published on

ಬಾಗಲಕೋಟೆ: ಬಣಜಿಗ ಸಮಾಜವು ಶರಣ ಸಂಸ್ಕೃತಿಯನ್ನು ಪ್ರತಿ ಬಿಂಬಿಸುತ್ತದೆ. ಯಾರ ಮನಸ್ಸಿಗೂ ನೋವು ಉಂಟು ಮಾಡದೇ ತಮ್ಮ ವೃತ್ತಿಯಲ್ಲಿ ಕಾಯಕ ನಿಷ್ಠೆ ಮೆರೆದಿದೆ. ಇಂತಹ ಸಮಾಜದ ಅನೇಕ ಸಾಧಕರು ದೇಶಕ್ಕೆ,ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು.

ನಗರದ ವಿದ್ಯಾಗಿರಿಯ ಅಥಣಿ ಕಲ್ಯಾಣ ಮಂಟಪದಲ್ಲಿ ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ಬಾಗಲಕೋಟೆ ತಾಲೂಕು ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇತರೆ ಸಮಾಜಗಳೊಂದಿಗೆ ಅನೂನ್ಯ ಸಂಬಂಧವಿಟ್ಟುಕೊಂಡಿದೆ. ಸಮಾಜದ ಆಗು, ಹೋಗುಗಳಿಗೆ ಸದಾ ಸ್ಪಂದಿಸುತ್ತಾ ಬಂದಿದೆ. ಬಣಜಿಗ ಸಮಾಜವು ಬೆನ್ನಿಗೆ ನಿಂತಾಗ ನಾನು ಪ್ರತಿಭಾರಿಯು ಜಯ ಸಾಧಿಸಿದ್ದೇನೆ. ಸರ್ಕಾರ ಹಾಗೂ ಜನಪ್ರತಿನಿಽಗಳು ಯಾರೇ ಇರಲಿ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ದೇಶದ ಅಭಿವೃದ್ಧಿಯಲ್ಲಿ ಜನರು ಪಾಲ್ಗೊಳ್ಳುವ ಅವಶ್ಯಕತೆ ಇದೆ ಎಂದರು.

ಬಾಗಲಕೋಟೆ ಶಿಕ್ಷಣ, ವೈದ್ಯಕೀಯ ಹಾಗೂ ಕೃಷಿಯï ಹಬ್ ಆಗಿದೆ. ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಅವರು ಬಿವಿವಿ ಸಂಘದ ಮೂಲಕ ಶಿಕ್ಷಣದಲ್ಲಿ ಕ್ರಾಂತಿ ಮಾಡಿದ್ದಾರೆ, ಸಂಘದ ವೈದ್ಯಕೀಯ ಕಾಲೇಜು ಸೇರಿದಂತೆ ಅನೇಕ ಹೈಟೆಕ ಆಸ್ಪತ್ರೆಗಳು ನಗರದಲ್ಲಿವೆ. ಹಾಗೂ ರಾಜ್ಯ ೨೦ಕ್ಕೂ ಹೆಚ್ಚುಗಳಲ್ಲಿ ಕಾರ್ಯವ್ಯಾಪ್ತಿ ಹೊಂದಿರುವ ತೋಟಗಾರಿಕೆ ವಿವಿಯಿಂದ ನಮ್ಮ ರೈತರಿಗೆ ಅನುಕೂಲವಾಗಿದೆ ಎಂದರು.

ಶಾಸಕ ಎಚ್.ವೈ.ಮೇಟಿ ಮಾತನಾಡಿ, ಬಣಜಿಗರು ಶರಣ ಸಂಸ್ಕೃತಿ ಪಾಲಿಸುತ್ತ ಶಿಕ್ಷಣ, ದಾಸೋಹಕ್ಕೆ ಒತ್ತು ನೀಡುತ್ತಾರೆ. ಪ್ರತಿ ಚುನಾವಣೆಯಲ್ಲೂ ಬಣಜಿಗ ಸಮಾಜ ನನ್ನ ನೆರವಿಗೆ ನಿಂತಿದೆ. ಜನರು ಒಗ್ಗಟ್ಟಿನಿಂದ ನಿಂತು ಸಮಾಜವನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ. ಬಾಗಲಕೋಟೆ ನಗರದಲ್ಲಿ ಎಲ್ಲ ರೀತಿಯ ವ್ಯಾಪಾರ ಒಂದು ಕಡೆಯೇ ಸಿಗಬೇಕು ಎಂಬ ಯೋಚನೆ ಹೊಂದಲಾಗಿದೆ. ಅದಕ್ಕೆ ತಮ್ಮ ಸಲಹೆ ಹಾಗೂ ಸಹಕಾರ ಮುಖ್ಯವಾಗಿದೆ ಎಂದು ಹೇಳಿದರು.

ಮುಖಂಡ ಆನಂದ ಜಿಗಜಿನ್ನಿ ಮಾತನಾಡಿ, ರಾಜ್ಯಕ್ಕೆ ೭ ಜನ ಮುಖ್ಯಮಂತ್ರಿಗಳನ್ನು ನೀಡಿರುವ ಸಮಾಜದ ಶೇ. ೯೨ ಜನರು ವಿದ್ಯಾವಂತರು. ಕೆಲವೇ ವರ್ಷಗಳಲ್ಲಿ ಅದು ಶೇ. ೧೦೦ ತಲುಪಲಿದೆ. ನಗರದಲ್ಲಿ ೧೯೯೮ ರಲ್ಲಿ ಸಮಾಜದ ಸಂಘಟನೆ ಪ್ರಾರಂಭವಾಯಿತು. ಅಲ್ಲಿಂದ ಇಲ್ಲಿಯವರೆಗೆ ಸಮಾಜವನ್ನು ಸಂಘಟಿಸುವ ಹಿನ್ನೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದಕ್ಕೆ ನಿಮ್ಮ ಸಹಕಾರ ಕೂಡ ದೊರೆತಿದೆ. ಮುಂದು ಕೂಡ ಯಾವುದೇ ಮನಸ್ತಾಪಕ್ಕೆ ಅವಕಾಶ ನೀಡದೆ ಎಲ್ಲರೂ ಸಂಘಟಿತರಾಗಿ ಸಮಾಜವನ್ನು ಕಟ್ಟಿ ಬೆಳೆಸೋಣ ಎಂದರು.

ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಗೌರಿವಿಸಲಾಯಿತು. ಅಂಕಲಗಿಯ ಅಮರಸಿದ್ಧೇಶ್ವರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಕೊಡಗು ವಿವಿ ಕುಲಪತಿ ಡಾ. ಅಶೋಕ ಆಲೂರ, ಸಂಘಟನೆಯ ತಾಲೂಕಾಧ್ಯಕ್ಷ ಬಸವರಾಜ ಶೀಲವಂತ, ಗೌರವಾಧ್ಯಕ್ಷ ಮಲ್ಲಪ್ಪ ಅರಬ್ಬಿ, ಜಿಲ್ಲಾಧ್ಯಕ್ಷ ಶರಣಪ್ಪ ಗುಳೇದ, ರವಿ ಕುಮಟಗಿ, ನಾಗರಾಜ ಹದ್ಲಿ, ಮುತ್ತು ಜೋಳದ, ಅಶೋಕ ಹಂಚಲಿ, ವಿಶ್ವನಾಥ ವೈಜಾಪುರ, ಮುರಗೇಶ ಶಿವನಗುತ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net