

ಬಾಗಲಕೋಟೆ: ಬಡಿಗತನ ವೈಜ್ಞಾನಿಕವಾಗಿ ಕೌಶಲ್ಯವುಳ್ಳು ವೃತ್ತಿಯಾಗಿದೆ, ಸಂಘದಿಂದಲೆ ಉದ್ಯೋಗ ಪ್ರಮಾಣ ಪತ್ರ ನಿಡುವ ಕಾರ್ಯ ಶ್ಲಾಘನೀಯ ಎಂದು ಬ್ರಹ್ಮಾಂಡಭೇರಿಮಠದ ಪ,ಪೂಜ್ಯ ಶ್ರೀ ಸುಧೀಂದ್ರ ಮಹಾಸ್ವಾಮಿಗಳು ಹೇಳಿದರು.
ವಿದ್ಯಾಗಿರಿಯ ಶ್ರೀ ಕಾಳಿಕಾಂಭಾ ದೆವಸ್ಥಾನದ ಸಭಾಂಗಣದಲ್ಲಿ ಬಾನುವಾರ ನಡೆದ ಬಾಗಲಕೋಟೆ ತಾಲೂಕಾ ಶ್ರೀ ವಿಶ್ವಕರ್ಮ ಸಮಾಜ ಬಡಿಗತನ ಕಾರ್ಮಿಕರ ನೂತನ ಸಂಘದ ಉಧ್ಘಾಟನೆಯನ್ನು ನೆರೆವೇರಿಸಿ ಮಾತನಾಡಿದರು.
ವೇದಗಳ ಕಾಲದಲ್ಲಿ ಉನ್ನತ ಸ್ಥಾನದಲ್ಲಿದ್ದವರು ವಿಶ್ವಕರ್ಮರು, ನಮ್ಮ ಪಂಚಮೂಲ ವೃತ್ತಿಗಳಲ್ಲಿ ಬಡಿಗತನ ಒಂದು, ಬಡಿಗತನ ವೈಜ್ಷಾನಿಕವಾಗಿ ಕೌಶಲ್ಯವುಳ್ಳ ವೃತ್ತಿಯಾಗಿದೆ, ಕಲಿಯುಗದಲ್ಲಿ ಸಂಘಟನೆಗೆ ಹೆಚ್ಚು ಶಕ್ತಿಯಿದೆ, ಸಮುದಾಯ ಬಡಿಗತನ ವೃತ್ತಿ ಮಾಡುವು ಎಲ್ಲರ ಹೀತಕ್ಕಾಗಿ ಹಾಗೂ ಸರಕಾರದ ಸೌಲಭ್ಯ ಪಡೆಯಲು ಈ ನೂತನ ಸಂಘವನ್ನು ಸ್ಥಾಪಿಸಿದ್ದು, ಈ ಸಂಘದಿಂದಲೆ ಬಡಿಗತನ ಉದ್ಯೋಗ ಪ್ರಮಾಣ ಪತ್ರ ನೀಡುವ ಕಾರ್ಯವನ್ನು ಮಾಡುತ್ತಿರುವುದು ಒಳ್ಳೆಯ ಕೇಲಸ ಇದರಿಂದ ಬಡಿಗತನ ವೃತ್ತಿಮಾಡುವ ಭಾಂದವರು ಬೆರೆ ಬೆರೆ ಕಡೆ ಅಲೆದಾಡುವುದು ತಪ್ಪಿದಂತಾಗುತ್ತದೆ, ಇಂದು ಸಂಘಟನೆಯಿಂದ ನಾವು ನಮ್ಮಹಕ್ಕುಗಳನ್ನು ಪಡೆಯಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ಸುಧಾಕರ ಬಡಿಗೇರ ಮಾತನಾಡಿ ಸರಕಾರದಿಂದ ಬರುವ ಕಾರ್ಮಿಕರ ಯೋಜನೆಗಳು,ಸೌಲಭ್ಯಗಳನ್ನು ತಾವೂ ಸಂಘದ ಮುಖಾಂತರ ಸಮುದಾಯದ ವೃತ್ತು ಭಾಂದವರಿಗೆ ಅರಿವು ಮೂಡಿಸಿ ಅವರಿಗೆ ಸೌಲಭ್ಯಗಳು ದೊರೆಯುವಂತೆ ಈ ಸಂಘ ಕಾರ್ಯೋನ್ಮೂಖವಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೂತನ ಬಡಿಗತ ಕಾರ್ಮಿಕರ ಸಂಘದ ಅಧ್ಯಕ್ಷ ಬಸವರಾಜ ಬಡಿಗೇರ ವಹಿಸಿದ್ದರು,ಅತಿಥಿಗಳಾಗಿ ಇಲಾಖೆಯ ಸಂಗಮೇಶ ಬಿರಾದಾರ,ತಾಲೂಕ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ದೇವೇಂದ್ರ ಅಗಳತಕಟ್ಟಿ ವೇದಿಕೆ ಮೇಲೆ ಇದ್ದರು.