ಬಡಾವಣೆಯಲ್ಲಿ ಚರಂಡಿ, ರಸ್ತೆ ನಿರ್ಮಿಸಿ

,9-kollegal-1
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 37;
Published on

ಕೊಳ್ಳೇಗಾಲ: ಪಟ್ಟಣದ 1ನೇ ವಾರ್ಡ್ ವ್ಯಾಪ್ತಿಗೆ ಬರುವ ಜಿ.ಪಿ. ಮಲ್ಲಪ್ಪಪುರಂ ಬಡಾವಣೆಯ 5ನೇ ಅಡ್ಡರಸ್ತೆಗೆ ಸುಸಜ್ಜಿತ ಚರಂಡಿ ಹಾಗೂ ರಸ್ತೆ ನಿರ್ಮಿಸಿಕೊಡುವಂತೆ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ ಅವರನ್ನು ನಿವಾಸಿಗಳು ಸೋಮವಾರ ಒತ್ತಾಯಿಸಿದರು.

ನಗರಸಭೆ ಅಧ್ಯಕ್ಷರ ಕಚೇರಿಗೆ ಜಿ.ಪಿ.ಮಲ್ಲಪ್ಪಪುರಂನ ಅಂಕಯ್ಯ ಮಾಸ್ಟರ್, ರಾಜು, ದಿಲೀಪ್ ಸಿದ್ದಪ್ಪಾಜಿ, ಹರೀಶ್, ಬಾಬು, ಸುಹಾಸಿನಿ, ಪವನ್, ರಾಜು ಟೋನಿ, ರಾಮಚಂದ್ರ, ಲೋಕೇಶ್ ಸೇರಿದಂತೆ 20ಕ್ಕೂ ಹೆಚ್ಚು ನಿವಾಸಿಗಳು ದಿಢೀರ್ ಭೇಟಿ ನೀಡಿದರು.

ಈ ವೇಳೆ ನಿವಾಸಿಗಳು ಬಡಾವಣೆಯ 5ನೇ ಅಡ್ಡರಸ್ತೆಯಲ್ಲಿ ಈಗಾಗಲೇ 70 ಮೀಟರ್ ರಸ್ತೆಗೆ ಚರಂಡಿ ಮಾಡದೆ ರಸ್ತೆ ನಿರ್ಮಿಸಲಾಗಿದೆ. ಈ ಕಾಮಗಾರಿಗೆ ಬಹುತೇಕ ನಿವಾಸಿಗಳ ವಿರೋಧವಿದ್ದರೂ ವಾರ್ಡ್ ಸದಸ್ಯೆ ಗುತ್ತಿಗೆದಾರರಿಂದ ಕಾಮಗಾರಿ ಮಾಡಿಸಿದ್ದಾರೆ. ನಗರಸಭೆ ಸದಸ್ಯೆ ವಾರ್ಡ್ ಅಭಿಪ್ರಾಯಕ್ಕೆ ಬೆಲೆ ಕೊಟ್ಟಿಲ್ಲ. ಚರಂಡಿ ಮಾಡದ ಕಾರಣ ಮಳೆ ಬಂದರೆ ರಸ್ತೆಯಲ್ಲಿಯೇ ನೀರು ನಿಲ್ಲುತ್ತದೆ. ಮನೆಯೊಳಗೆ ನೀರು ನುಗ್ಗುತ್ತದೆ ಎಂದು ಆಕ್ರೋಶ ಹೊರ ಹಾಕಿದರು.

ಆದ್ದರಿಂದ ನಗರಸಭೆ ವತಿಯಿಂದ 5ನೇ ಅಡ್ಡರಸ್ತೆಗೆ 5 ಲಕ್ಷ ರೂ. ವೆಚ್ಚದಲ್ಲಿ 70 ಮೀಟರ್ ರಸ್ತೆ ಮಾಡಿದ್ದಾರೆ. ಇನ್ನೂ 30 ಮೀಟರ್ ರಸ್ತೆ ಬಾಕಿ ಉಳಿದಿದೆ. ಅಧ್ಯಕ್ಷರಾದ ನೀವು ಬಾಕಿ ಉಳಿದಿರುವ ರಸ್ತೆಗೆ ಚರಂಡಿ ನಿರ್ಮಿಸಿ ನಂತರ ರಸ್ತೆ ಮಾಡಿಸಿಕೊಡಬೇಕೆಂದು ಒತ್ತಾಯಿಸಿದರು.

ಈ ಕೂಡಲೇ ನಮ್ಮ ವಾರ್ಡ್ ಸದಸ್ಯೆ ಕವಿತಾ ಅವರನ್ನು ನಗರಸಭೆಗೆ ಕರೆಯಿಸಬೇಕು, ನಮ್ಮ ಸಮಸ್ಯೆಗೆ ಆಲಿಸಿ ಸ್ಪಂದಿಸಬೇಕೆಂದು ಆಗ್ರಹಿಸಿದರು.

ನಿವಾಸಿಗಳ ಅಹವಾಲು ಆಲಿಸಿದ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ ಸ್ಥಳದಲ್ಲಿಯೇ ವಾರ್ಡ್ ಸದಸ್ಯರಿಗೆ ದೂರವಾಣಿ ಮೂಲಕ ಕರೆಮಾಡಿ ಸಂಪರ್ಕಿಸಿದ್ದಾಗ ಸದಸ್ಯರು ಹೊರಗಿರುವುದಾಗಿ ಪ್ರತಿಕ್ರಿಯಿಸಿದರು.

ನಂತರ ರೇಖಾ ರಮೇಶ್ ಮಾತನಾಡಿ, ಬಾಕಿ ಉಳಿದಿರುವ ರಸ್ತೆಗೆ ಚರಂಡಿ ಹಾಗೂ ರಸ್ತೆ ಕಾಮಗಾರಿ ನಡೆಸಲು ಕ್ರಮ ವಹಿಸುತ್ತೇನೆ. ಶಾಸಕರು ಹಾಗೂ ವಾರ್ಡ್ ಸದಸ್ಯರ ಜತೆ ಈ ಬಗ್ಗೆ ಚರ್ಚಿಸುತ್ತೇನೆ. ಇನ್ನೆರಡು ದಿನಗಳಲ್ಲಿ ಖುದ್ದು ನಗರಸಭೆ ಇಂಜಿನಿಯರ್ ನಾಗೇಂದ್ರ, ಎಇಇ ಸುರೇಶ್ ಅವರೊಟ್ಟಿಗೆ ಸ್ಥಳ ವೀಕ್ಷಣೆ ಮಾಡುವುದಾಗಿ ಭರವಸೆ ನೀಡಿದರು.

ಈ ವೇಳೆ ನಿವಾಸಿಗಳು ಅಧ್ಯಕ್ಷರಿಗೆ ಹಾರ ಹಾಕಿ ಸನ್ಮಾನಿಸಿ ಧನ್ಯವಾದ ತಿಳಿಸಿ ಹೊರನಡೆದರು.

ಜಿ.ಪಿ.ಮಲ್ಲಪ್ಪಪುರಂನ 5 ಅಡ್ಡರಸ್ತೆಗೆ ಈಗಾಗಲೇ ಗುತ್ತಿಗೆದಾರ 5ಲಕ್ಷ ರೂ.ವೆಚ್ಚದಲ್ಲಿ 75 ಮೀಟರ್ ರಸ್ತೆ ಕಾಮಗಾರಿ ಮಾಡಿದ್ದಾರೆ. 6 ಮೀ.ಇರಬೇಕಿದ್ದ ರಸ್ತೆಯು ಒತ್ತುವರಿಯಾಗಿದೆ. ಪರಿಣಾಮ ರಸ್ತೆ ಬಹಳ ಕಿರಿದಾಗಿದೆ. ಅಲ್ಲದೆ, ರಸ್ತಯಲ್ಲಿ ಯುಜಿಡಿ, 24*7 ನೀರಿನ ಪೈಪ್‌ಗಳಿವೆ. ಆದರಿಂದ ಚರಂಡಿ ನಿರ್ಮಿಸುವುದು ಕಷ್ಟವಾಗಿರುತ್ತದೆ. ಒಂದು ವೇಳೆ ಮಾಡಿದರೂ ರಸ್ತೆ ಚಿಕ್ಕದಾಗುತ್ತದೆ. ಆದರೆ, ಈಗಾಗಲೇ ಆಗಿರುವ 75 ಮೀ.ರಸ್ತೆ ಹೊರತುಪಡಿಸಿ ಉಳಿದ ರಸ್ತೆಗಾದರೂ ಚರಂಡಿ ಹಾಗೂ ರಸ್ತೆ ನಿರ್ಮಿಸಿಕೊಡಿ, ನಾವು ಜಾಗ ಬಿಡಿಸಿಕೊಡುತ್ತೇವೆಂದು ಎಂದು ನಿವಾಸಿಗಳು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಮುಂದೆ ಕ್ರಮ ವಹಿಸಲಾಗುವುದು. ನಾಗೇಂದ್ರ, ನಗರಸಭೆ ಇಂಜಿನಿಯರ್, ಕೊಳ್ಳೇಗಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net