ಬಡ ಕುಟುಂಬದಲ್ಲಿ ದೀಪ ಬೆಳಗುವ ಭರವಸೆ

25KWR3
Published on

ಕಾರವಾರ : ಇನ್ನೂ ವಿದ್ಯುತ್​ನ್ನೇ ಕಾಣದ ನಂದನಗದ್ದಾದ ಬಡ ಕುಟುಂಬಕ್ಕೆ ಸ್ಥಳೀಯರ ಸಹಕಾರದಿಂದ ಮನೆಯಲ್ಲಿ ದೀಪ ಬೆಳಗುವ ಭರವಸೆಯ ಬೆಳಕು ಸಿಕ್ಕಿದೆ.

ನಂದನಗದ್ದಾದ ಸುಲೋಚನಾ ಗೋವಿಂದ ನಾಯ್ಕ ಅವರ ಇಬ್ಬರು ಮಕ್ಕಳು ಡಿಪ್ಲೊಮಾ ಓದುತ್ತಿದ್ದು, ಚಿಮಣಿ ದೀಪದಲ್ಲೇ ಓದುತ್ತಿದ್ದರು.

ಮನೆಯವರು ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದರೂ ಸ್ಥಳೀಯರ ಜಾಗದ ಗಲಾಟೆಯಿಂದ ವಿದ್ಯುತ್ ಸಂಪರ್ಕ ಸಿಕ್ಕಿರಲಿಲ್ಲ. ಇದರಿಂದ ಕುಟುಂಬಕ್ಕೆ ಚಿಮಣ್ಣಿ ಎಣ್ಣೆ ದೀಪವೇ ಬೆಳಕಾಗಿತ್ತು.

ವಿದ್ಯಾರ್ಥಿ ಒಕ್ಕೂಟದ ರಾಘು ನಾಯ್ಕ, ನಗರಸಭೆ ಸದಸ್ಯ ನಂದಾ ಟಿ.ನಾಯ್ಕ ಸ್ಥಳೀಯ ಮುಖಂಡ ಆನಂದು ನಾಯ್ಕ ಸೇರಿ ಪಂಚಾಯಿತಿ ನಡೆಸಿ ಜಾಗದ ಗೊಂದಲ ಬಗೆಹರಿಸಿದ್ದಾರೆ. ಹೆಸ್ಕಾಂ ಎಇಇ ವಿ.ಎಸ್.ಶೇಬಣ್ಣನವರ್ ಸ್ಥಳ ಪರಿಶೀಲನೆ ನಡೆಸಿದ್ದು, ಶೀಘ್ರ ವಿದ್ಯುತ್ ಸಂಪರ್ಕ ನೀಡುವ ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net