ಬಜೆಟ್‌ ಸಂದರ್ಭದಲ್ಲಿ ಶಿರಸಿ ಜಿಲ್ಲೆ ಘೋಷಣೆ..?

2sirsi6
Published on

ಶಿರಸಿ: ಮುಖ್ಯಮಂತ್ರಿಗಳು ಬಜೆಟ್ ಸಮಯದಲ್ಲಿ ಶಿರಸಿ ಜಿಲ್ಲೆ ಘೋಷಣೆಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಸೋಮವಾರ ಮಾತನಾಡಿದ ಅವರು, ಹೊಸ ಹೊಸ ಜಿಲ್ಲೆಯನ್ನಾಗಿ ಮಾಡಿ ಅನ್ನುವ ಬೇಡಿಕೆ ಹಲವು ಕಡೆಯಿಂದ ಬರುತ್ತಿದೆ. ಆದರೆ, ಜಿಲ್ಲೆ ವಿಭಜನೆಯಲ್ಲಿ ಭಾವನಾತ್ಮಕ ಸಂಬಂಧಗಳು ಇರುತ್ತವೆ. ಆರ್ಥಿಕ ಪರಿಸ್ಥಿತಿ ನೋಡಿ ಆಡಳಿತಾತ್ಮಕ ದೃಷ್ಟಿಯಿಂದ ಜಿಲ್ಲೆ ವಿಭಜನೆ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದರು.

ಅರಣ್ಯ ಅತಿಕ್ರಮಣದ ಅರ್ಜಿ ಸಲ್ಲಿಸಿರುವ ಜನರಿಗೆ ಸಮಸ್ಯೆ ಮಾಡುವ ಅರಣ್ಯಾಧಿಕಾರಿಗಳನ್ನು ಜಿಲ್ಲೆಯಿಂದ ಹೊರಗೆ ವರ್ಗಾವಣೆ ಮಾಡಲಾಗುವುದು. ಅರಣ್ಯ ಅತಿಕ್ರಮಣ ಸಕ್ರಮಕ್ಕೆ ಅರ್ಜಿ ಕೊಟ್ಟ ಪ್ರದೇಶದ ಜನರಿಗೆ ಯಾವುದೇ ತೊಂದರೆ ನೀಡುವಂತಿಲ್ಲ. ಸರ್ಕಾರ ನೀಡಿದ ಸೂಚನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ಪಾಲಿಸಬೇಕು. ಇಲ್ಲದಿದ್ದರೆ ಅಂಥ ಅಧಿಕಾರಿಯನ್ನು ಬೇರೆಡೆ ವರ್ಗ ಮಾಡುವುದು ಖಚಿತ ಎಂದರು.

ಪಶು ವೈದ್ಯಕೀಯ ಇಲಾಖೆಯಲ್ಲಿ ಹೆಚ್ಚುವರಿ ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯದ್ಯಂತ ಸಾಧ್ಯವಾದಷ್ಟು ಬೇಗ 400 ಹುದ್ದೆಗಳ ಭರ್ತಿ ಮಾಡ್ತುತ್ತೇವೆ ಎಂದು ಪಶು ಸಂಗೋಪನಾ ಸಚಿವರು ಹೇಳಿದ್ದಾರೆ. ಅದು ಆದ ಕೂಡಲೇ ಜಿಲ್ಲೆಗೆ ಮೊದಲ ಆದ್ಯತೆ ನೀಡಿ ಅಂತ ಹೇಳಲಾಗಿದೆ. ಜಿಲ್ಲೆಯಲ್ಲಿ ಚರ್ಮಗಂಟು ರೋಗಕ್ಕೆ ಚುಚ್ಚುಮದ್ದು ವಿತರಣೆ ಆಗಿದೆ ಎಂದ ಅವರು, ಪಶು ವೈದ್ಯಕೀಯ ಇಲಾಖೆಯ ಅಧಿಕಾರಿಗಳನ್ನು ಬೇರೆ ಕಡೆ ನಿಯೋಜನೆ ಮಾಡದಂತೆ ಅದೇಶವಾಗಿದೆ. ಯಾವುದೇ ಕಾರಣಕ್ಕೂ ಪಶು ವೈದ್ಯರನ್ನು ಬೇರೆ ಕೆಲಸಕ್ಕೆ ನಿಯೋಜನೆ ಮಾಡುವಂತಿಲ್ಲ ಎಂದು ಹೇಳಿದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net