ಬಂಡಿವಡ್ಡರ ನಿವಾಸದ ಮೇಲೆ ಲೋಕಾ ದಾಳಿ

bkt-08-12 (1)
ಬಾಗಲಕೋಟೆ ತಾಲೂಕಿನ ಸೀಮಿಕೇರಿ ಗ್ರಾಮದಲ್ಲಿ ಇರುವ ಗದಗ ನಗರಸಭೆ ಕಾರ್ಯನಿರ್ವಾಹಕ ಇಂಜಿನಿಯರ್ ಹುಚ್ಚೇಶ್ ಬಂಡಿವಡ್ಡರ್ ಅವರ ಸಹೋದರ ರಾಜಶೇಖರ್ ಅವರ ನಿವಾಸದ ಮೇಲೆ ಬುಧವಾರ ಗದಗ ಲೋಕಾಯುಕ್ತ ಸಿಬ್ಬಂದಿ ದಾಳಿ ನಡೆಸಿ ದಾಖಲೆ ಪರಿಶೀಲಿಸುತ್ತಿರುವುದು.
Published on

ಬಾಗಲಕೋಟೆ: ತಾಲೂಕಿನ ಸೀಮಿಕೇರಿ ಗ್ರಾಮದಲ್ಲಿ ಗದಗ ನಗರಸಭೆ ಕಾರ್ಯನಿರ್ವಾಹಕ ಇಂಜನಿಯರ್ ಹುಚ್ಚೇಶ್ ಬಂಡಿವಡ್ಡರ್ ಅವರ ಸಹೋದರ ರಾಜಶೇಖರ ಅವರ ನಿವಾಸದ ಮೇಲೆ ಬುಧವಾರ ಬೆಳಗ್ಗೆ ಗದಗ ಲೋಕಾಯುಕ್ತರು ದಾಳಿ ನಡೆಸಿದರು.

ಗದಗನಲ್ಲಿ ಬಂಡಿವಡ್ಡರ್ ಅವರ ಮೇಲೆ ದಾಳಿ ನಡೆದಿದ್ದು, ಅದಕ್ಕೆ ಸಂಬAಽಸಿದAತೆ ಅವರ ಸಹೋದರ ಮನೆಯ ಮೇಲೂ ಲೋಕಾ ದಾಳಿ ನಡೆದಿದ್ದು, ಮನೆಯಲ್ಲಿ ದಾಖಲೆಗಳ ತಲಾಶ್ ಮಾಡಿದರು.

ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾ ದಾಳಿ ನಡೆದಿದ್ದು, ಸೀಮಿಕೇರಿಯಲ್ಲಿ ಇರುವ ಅವರ ಸಹೋದರ ರಾಜಶೇಖರ ಟೈಲ್ಸ್ ಉದ್ಯಮಿ ಆಗಿದ್ದು, ಅವರ ನಿವಾಸಕ್ಕೆ ಬೆಳ್ಳಂ ಬೆಳಗ್ಗೆ ದಾಳಿ ಮಾಡಿ, ಅನೇಕ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಲೋಕಾ ಪಿಎಸ್‌ಐ ಎಸ್.ಎಸ್.ತೇಲಿ ಹಾಗೂ ಸಿಬ್ಬಂದಿ ಕೆಲ ಗಂಟೆಗಳ ಕಾಲ ಮನೆಯಲ್ಲಿ ಅನೇಕ ದಾಖಲೆಗಳನ್ನು ತಡಕಾಡಿದ್ದು, ಈ ವೇಳೆ ಏನೆಲ್ಲ ದೊರೆತಿವೆ ಎಂದು ತಿಳಿದು ಬಂದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net