

ಕಲಬುರಗಿ: ಜಿಲ್ಲಾಧಿಕಾರಿ ಯಶವಂತ ಗುರುಕರ್ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ್ ಬದೋಲೆ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇಬ್ಬರು ಅಧಿಕಾರಿಗಳು ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ಹೆಸರು ಪಡೆದಿದ್ದರು. ನೂತನ ಜಿಲ್ಲಾಧಿಕಾರಿ ಆಗಿ ಫೌಜಿಯಾ ತರನ್ನುಮ್ ಹಾಗೂ ಜಿಪಂ ಸಿಇಒ ಆಗಿ ಭನ್ವರಸಿಂಗ್ ಮೀನಾ ಅವರನ್ನು ನಿಯೋಜಿಸಿ ಸರ್ಕಾರದ ಡಿಪಿಎಆರ್ ಇಲಾಖೆ ಅಧೀನ ಕಾರ್ಯದರ್ಶಿ ಜೇಮ್ಸ್ ತಾರಕನ್ ಆದೇಶ ಹೊರಡಿಸಿದ್ದಾರೆ. ಫೌಜಿಯಾ ೨೦೧೫ರ ಬ್ಯಾಚ್ ಐಎಸ್‌ಎಸ್ ಅಧಿಕಾರಿಯಾಗಿದ್ದು, ಈ ಹಿಂದೆ ಕೆಲ ತಿಂಗಳು ಪಾಲಿಕೆ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಮೀನಾ ೨೦೧೭ರ ಐಎಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ಬಾಲಕೋಟೆಯಲ್ಲಿರುವ ಕೃಷ್ಣಾ ಮೇಲ್ದಂಡೆ ಯೋಜನೆ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿದ್ದರು. ಡಾ.ಗಿರೀಶ್ ಬದೋಲೆ ಅವರನ್ನು ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಕರ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.