ಫೆ.೬ ರಿಂದ ೧೦ ವರೆಗೆ ದಿಗ್ವಿಯ ಯಾತ್ರೆ

bkt-4-1
ಬಾಗಲಕೋಟೆ ನಗರದ ಪಕ್ವಾನ್ ಹೊಟೇಲ್‌ನಲ್ಲಿ ಸ್ವಾಗತ ಸಮಿತಿ ಮುಖಂಡರಾದ ಪಂ.ಬಿಂದಾಚಾರ್ಯ ನಾಗರಸಂಪಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸ್ವಾಗತ ಸಮಿತಿ ಮುಖಂಡರಾದ ಡಾ.ಗಿರೀಶ ಮಾಸೂರಕರ, ಎಸ್.ಕೆ.ಕುಲಕರ್ಣಿ, ವಿಕಾಸ ದೇಶಪಾಂಡೆ, ನಾರಾಯಣ ದೇಸಾಯಿ, ಅರುಣ ದೇಸಾಯಿ ಸೇರಿದಂತೆ ಇತರರು ಇದ್ದರು.
Published on

ಬಾಗಲಕೋಟೆ: ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ವಿದ್ಯಾ ಸಿಂಹಾಸನಿದೀಶ್ವರ ೧೦೦೮ ಸುಬಧೇಂದ್ರತೀರ್ಥ ಶ್ರೀಪಾದಂಗಳವರು ದಿಗ್ವಿಜಯ ಯಾತ್ರೆ ಕೈಗೊಂಡಿದ್ದು, ಫೆ.೬ ರಿಂದ ೧೦ ವರೆಗೆ ಬಾಗಲಕೋಟೆ ನಗರ ಯಾತ್ರೆ ನಡೆಯಲಿದೆ ಎಂದು ಪಂ.ಬಿಂದಾಚಾರ್ಯ ನಾಗರಸಂಪಗಿ ಹೇಳಿದರು.
ನಗರದ ಪಕ್ವಾನ್ ಹೊಟೇಲ್ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.೬ ರಂದು ಸಂಜೆ ೬ ಗಂಟೆಗೆ ಶ್ರೀಪದಾಂಗಳವರು ಆಗಮಿಸಲಿದ್ದು, ಹೊಳೆ ಆಂಜನೇಯ ದೇವಸ್ಥಾನ, ಎಂ.ಜಿ.ರಸ್ತೆ, ಸರ್ದಾರ್ ವಲ್ಲಭಬಾಯಿ ಪಟೇಲ್ ಚೌಕ್, ಕೊತ್ತಲೇಶ ದೇವಸ್ಥಾನ ಮುಖಾಂತರ ಭವ್ಯ ಶೋಭಾಯಾತ್ರೆ ನಡೆಯಲಿದೆ. ಪೂರ್ಣ ಕುಂಭ ಸ್ವಾಗತ, ವೇದಘೋಷಗಳು, ವಿವಿಧ ಭಜನಾ ಮಂಡಳಿಗಳು, ಕೋಲಾಟ, ಚಂಡಿ ಮೊದಲ ವಾದ್ಯ ಮೇಳಗಳ ವೈಭವ ಇರಲಿದೆ. ನಂತರ ಸುಜಯೀಂದ್ರ ತೀರ್ಥರ ವೇದಿಕೆಯಲ್ಲಿ ಅನುಗ್ರಹ ಸಂದೇಶ ನೀಡಲಿದ್ದಾರೆ ಎಂದರು.
ಪೌರ ಸನ್ಮಾನ..
ಫೆ.೭ ರಂದು ಸಂಜೆ ೫ ಗಂಟೆಗೆ ಯುವ ಗೋಷ್ಠಿ ನಡೆಯಲಿದೆ. ೬ ಗಂಟೆಗೆ ಪಂಡಿತರಿಂದ ಉಪನ್ಯಾಸ, ಮಂತ್ರಾಲಯ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ವೇದಘೋಷಗಳು ಜರುಗಲಿವೆ. ೭ ಗಂಟೆಗೆ ಸಭಾ ಕಾರ್ಯಕ್ರಮ, ಶ್ರೀಪಾದಂಗಳವರಿಗೆ ಪೌರ ಸನ್ಮಾನ ಹಮ್ಮಿಕೊಳ್ಳಲಾಗಿದ್ದು, ಸುಭಧೇಂದ್ರ ತೀರ್ಥ ಶ್ರೀಪಾದಂಗಳವರು ಸಾನ್ನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಶಾಸಕ ವೀರಣ್ಣ ಚರಂತಿಮಠ, ವಿ.ಪ ಸದಸ್ಯರಾದ ಹನುಮಂತ ನಿರಾಣಿ, ಪಿ.ಎಚ್.ಪೂಜಾರ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಬುಡಾ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ ಇತರರು ಆಗಮಿಸಲಿದ್ದಾರೆ.
ಪಂಡಿತದಿಂದ ಉಪನ್ಯಾಸ:
ಫೆ.೮ ರಂದು ಸಂಜೆ ೫ ಗಂಟೆಗೆ ದಾಸ ಸಾಹಿತ್ಯ ವಿಚಾರಗೋಷ್ಠಿ ನಡೆಯಲಿದ್ದು, ಶ್ರೀಪಾದಂಗಳವರು ಸಾನ್ನಿಧ್ಯ ವಹಿಸಲಿದ್ದಾರೆ. ಸಂಜೆ ೬.೩೦ ಗಂಟೆಗೆ ಪಂಡಿತರಿಂದ ಉಪನ್ಯಾಸ, ಸಂಜೆ ೭ ಗಂಟೆಗೆ ಸಭಾ ಕಾರ್ಯಕ್ರಮ ಜರುಗಲಿದೆ. ಸಚಿವ ಮುರುಗೇಶ ನಿರಾಣಿ, ಸಂಸದ ಪಿ.ಸಿ.ಗದ್ದಿಗೌಡರ, ಮಾಜಿ ಸಚಿವ ಎಚ್.ವೈ.ಮೇಟಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಡಾ.ಗಿರೀಶ ಮಾಸೂಕರ, ಗುರುರಾಜ ದೇಶಪಾಂಡೆ, ಎನ್.ಬಿ.ಆಲೂರ, ಅಮೃತ ಸರದೇಸಾಯಿ, ಹರಿ ಪಾಟೀಲ ಮುಖ್ಯ ಅತಿರ್ಥಿಗಳಾಗಿ ಆಗಮಿಸಲಿದ್ದಾರೆ.
ಉಚಿತ ಆರೋಗ್ಯ ತಪಸಾಣೆ-ವಾಕ್ಯರ್ಥ ಗೋಷ್ಠಿ:
ಡಾ.ಗಿರೀಶ ಮಾಸೂರಕರ ಮಾತನಾಡಿ, ಫೆ.೯ ರಂದು ಬೆಳಗ್ಗೆ ೧೦.೩೦ ಗಂಟೆಗೆ ದುರ್ಗಾ ನಗರದ ದುರ್ಗಾ ಆಸ್ಪತ್ರೆಯಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ. ಶ್ರೀಪಾದಂಗಳವರು ಸಾನ್ನಿಧ್ಯ ವಹಿಸಲಿದ್ದಾರೆ. ಡಾ.ಗಿರೀಶ ಮಾಸೂಕರ ನಿರ್ವಹಣೆ ಮಾಡಲಿದ್ದಾರೆ. ಬಾಗಲಕೋಟೆ ತಜ್ಞ ವೈದ್ಯರ ಸಮೂಹ ವೈದ್ಯಕೀಯ ಸೇವೆ ನೀಡಲಿದ್ದಾರೆ. ಸಂಜೆ ೫ ಗಂಟೆಗೆ ವಿದ್ಯಾಗಿರಿ ವಿಪ್ರ ರಾಯರಮಠದಲ್ಲಿ ವಾಕ್ಯರ್ಥ ಗೋಷ್ಠಿ ಏರ್ಪಡಿಸಲಾಗಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ರಾಜಾ ಎಸ್.ಗಿರಿ ಆಚಾರ್ಯರು ಅಧ್ಯಕ್ಷತೆ ವಹಿಸಲಿದ್ದಾರೆ. ವಿದ್ಯಾಂಸರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಫೆ.೧೦ ರಂದು ಸಂಜೆ ೬ ಗಂಟೆಗೆ ವಿದ್ಯಾಗಿರಿ ವಿಪ್ರ ರಾಯರಮಠದಲ್ಲಿ ಪಂಡಿತರಿಂದ ಉಪನ್ಯಾಸ, ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ತುಲಭಾರ, ಹಮ್ಮಿಣಿ ಸಮರ್ಪಣೆ ಮಾಡಲಾಗುವುದು, ಶ್ರೀಗಳಿಂದ -Àಲ ಮಂತ್ರಾಕ್ಷತೆ ವಿತರಣೆ ಮಾಡಲಾಗುವುದು ಎಂದರು.

ಸ್ವಾಗತ ಸಮಿತಿ ಮುಖಂಡರಾದ ಎಸ್.ಕೆ.ಕುಲಕರ್ಣಿ, ವಿಕಾಸ ದೇಶಪಾಂಡೆ, ನಾರಾಯಣ ದೇಸಾಯಿ, ಅರುಣ ದೇಸಾಯಿ ಸೇರಿದಂತೆ ಇತರರು ಇದ್ದರು.

ಪ್ರತಿನಿತ್ಯ ಬೆಳಗ್ಗೆ ೧೧ ಗಂಟೆಯಿಂದ ೧೨ ವರೆಗೆ ಸಾಮೂಹಿಕ ಪಾದ ಪೂಜೆ, ಮುದ್ರಾ ಧಾರಣೆ ನಡೆಯಲಿದೆ. ಫೆ.೭ ರಂದು ಕಿಲ್ಲಾ ರಾಯರಮಠ, ಫೆ.೮ ರಂದು, ಫೆ.೯ ರಂದು ವಿಪ್ರ ರಾಯರಮಠ ವಿದ್ಯಾಗಿರಿಯಲ್ಲಿ ಪಾದ ಪೂಜೆ ಜರುಗಲಿದೆ. ಇನ್ನು ಹಳೇ ಬಾಗಲಕೋಟೆ, ವಿದ್ಯಾಗಿರಿ, ನವನಗರದ ಭಕ್ತರ ಮನೆ ಮನೆಗಳಲ್ಲಿ ಪ್ರತಿ ದಿನ ಬೆಳಗ್ಗೆ ೬.೩೦ ಗಂಟೆಯಿಂದ ೧೦.೩೦ ಗಂಟೆ ವರೆಗೆ, ಸಂಜೆ ೪ ಗಂಟೆಯಿಂದ ೬ ಗಂಟೆ ವರೆಗೆ ಪಾದ ಪೂಜೆ ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net