ಫೆ. ೪ ರಂದು ಕ್ರಾಂತಿವೀರರ ಬ್ರಿಗೇಡ್ ಉದ್ಘಾಟನೆ

4879b118-95e4-439c-a52e-06a302fb315a
ಬಾಗಲಕೋಟೆ ಕಾಳಿದಾಸ ಮಂಗಲ ಭವನದಲ್ಲಿ ಸೋಮವಾರ ಪೂರ್ವಭಾವಿ ಸಭೆಯಲ್ಲಿ ಕ್ರಾಂತಿವೀರರ ಬ್ರಿಗೇಡ್ ಪೋಸ್ಟರ್ ಗಳನ್ನು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಸ್ವಾಮೀಜಿಗಳು ಬಿಡುಗಡೆ ಮಾಡಿದರು. ಮಾಧುಲಿಂಗ ಮಹಾರಾಜರು, ವಶಿಷ್ಠ ಸ್ವಾಮೀಜಿ, ದತ್ತು ಮಹಾರಾಜರು ಮತ್ತಿತರರು ಇದ್ದರು.
Published on

ಬಾಗಲಕೋಟೆ: ಫೆ. ೪ ರಂದು ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿಯಲ್ಲಿ ಕ್ರಾಂತಿವೀರರ ಬ್ರಿಗೇಡ್ ೧೦೦೮ ಸ್ವಾಮೀಜಿಗಳ ಪಾದಪೂಜೆ ಮಾಡುವ ಮೂಲಕ ಕ್ರಾಂತಿವೀರರ ಬ್ರಿಗೇಡ್ ಕರ್ನಾಟಕ ಅಽಕೃತವಾಗಿ ಉದ್ಘಾಟನೆ ಆಗಲಿದೆ ಎಂದು ನೂತನ ಬ್ರಿಗೇಡ್ ಸಂಚಾಲಕ ಆಗಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ನಗರದ ಕಾಳಿದಾಸ ಕಲ್ಯಾಣ ಮಂಟಪದಲ್ಲಿ ಸೋಮವಾರ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ, ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈಗಾಗಲೇ ಬ್ರಿಗೇಡ್ ಕುರಿತು ಸಮಿತಿ ರಚಿಸಲಾಗಿದೆ. ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ನಾನು ಸೇರಿ ನಾಲ್ವರನ್ನು ಸಂಚಾಲಕರನ್ನಾಗಿ ನೇಮಕ ಮಾಡಿದ್ದಾರೆ ಎಂದರು.

ಫೆ. ೪ ರಂದು ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ಹೇರಿಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹಾಗೂ ಕನಕಗುರು ಪೀಠದ ಸಿದ್ದರಾಮನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಯಾವುದೇ ರಾಜಕೀಯ ಪಕ್ಷದ ಮುಖಂಡರನ್ನು ಬ್ರಿಗೇಡ್‌ಗೆ ನಾವಾಗಿ ಆಹ್ವಾನಿಸಿಲ್ಲ. ಮುಂದೆ ಯಾರೆಲ್ಲ ಬರುತ್ತಾರೆ ಎನ್ನುವುದು ಬಸವನ ಬಾಗೇವಾಡಿಯಲ್ಲಿ ಗೊತ್ತಾಗುತ್ತದೆ. ಯತ್ನಾಳ್ ಸೇರಿದಂತೆ ನಾವು ಯಾರನ್ನು ಕರೆದಿಲ್ಲ. ಹೀಗಾಗಿ ಅವರು ಸೇರುತ್ತಾರೋ ಇಲ್ಲವೋ ನಮಗೆ ಗೊತ್ತಿಲ್ಲ ಎಂದರು.

ಈ ಸಲ ಯಾವುದೇ ಕಾರಣಕ್ಕೂ ಬ್ರಿಗೇಡ್‌ನಿಂದ ಹಿಂದೆ ಸರಿಯುವುದಿಲ್ಲ. ಮುಖ್ಯವಾಗಿ ಈ ಬ್ರಿಗೇಡ್ ಗೆ ಸಾಧು, ಸಂತರ ನೇತೃತ್ವ ಇದೆ. ರಾಜ್ಯದ ಅನೇಕ ಸಣ್ಣ ಸಣ್ಣ ಮಠಾಽÃಶರು ಇದಕ್ಕೆ ಬೆಂಬಲವಾಗಿ ನಿಂತಿದ್ದಾರೆ ಎಂದರು.

ಮಣಕಾಪುರ ಗುರುಪೀಠದ ಸೋಮೇಶ್ವರ ಸ್ವಾಮೀಜಿ ಮಾತನಾಡಿ, ಕ್ರಾಂತಿವೀರರ ಬ್ರಿಗೇಡ್ ಜಾತ್ಯಾತೀತ, ಪಕ್ಷಾತೀತವಾದ ಸಂಘಟನೆಯಾಗಿದೆ. ೨೫ ಜನ ಸ್ವಾಮೀಜಿಗಳು ಸೇರಿ ಸಂಘಟಿತರಾಗಿ ಅದಕ್ಕೆ ಕ್ರಾಂತಿವೀರರ ಬ್ರಿಗೇಡ್ ಎಂದು ಹೆಸರು ಇಟ್ಟಿದ್ದೇವೆ. ಅನೇಕ ಪದಾಽಕಾರಿಗಳನ್ನು ನೇಮಕ ಮಾಡಿದ್ದೇವೆ. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಸಾಧು ಸನ್ಯಾಸಿಗಳು ಯಾವ ಪರಿಸ್ಥಿತಿಯಲ್ಲಿ ಇದ್ದೇವೆ? ಈ ಬಗ್ಗೆ ನಾವು ಸಂಘಟಿತರಾಗಿ ಈಶ್ವರಪ್ಪ ಅವರ ಬಳಿಗೆ ಹೋಗಿ ಸಂಘಟನೆ ಬಗ್ಗೆ ಹೇಳಿದೇವು. ಅವರು ಸಂತ ಪ್ರೇಮಿಗಳು ಇದ್ದು,. ನಮ್ಮ ಜೊತೆಗೆ ಬಂದಿದ್ದಾರೆ. ಈ ಬ್ರಿಗೇಡ್ ಉದ್ಘಾಟನೆ ಬಳಿಕ ಎಲ್ಲೆಲ್ಲಿ ಹಿಂದು ಧರ್ಮಕ್ಕೆ ಅನ್ಯಾಯವಾಗುತ್ತದೆ, ಎಲ್ಲಿ ಮಠ ಮಂದಿರಗಳು, ಸಾಧು ಸಂತರಿಗೆ ಅನ್ಯಾಯವಾದಾಗ ಅಲ್ಲಿ ಈ ಬ್ರಿಗೇಡ್ ಇರುತ್ತದೆ. ಸೇವಾ ಮನೋಭಾವದಿಂದ ಈ ಸಂಘಟನೆ ಸೇವೆ ಮಾಡುತ್ತದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಬ್ರಿಗೇಡ್‌ನ ಮಾಧುಲಿಂಗ ಮಹಾರಾಜರು, ವಶಿಷ್ಠ ಸ್ವಾಮೀಜಿ, ದತ್ತು ಮಹಾರಾಜರು, ಚಿನ್ಮಯಾನಂದ ಸ್ವಾಮೀಜಿ, ಲಕ್ಕಪ್ಪ ಮಹಾರಾಜರು, ಶಂಕರಾನ0ದ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಬ್ರಿಗೇಡ್ ರಾಜ್ಯಾಧ್ಯಕ್ಷ ಬಸವರಾಜ್ ಬಾಳಿಕಾಯಿ, ರಾಜ್ಯ ಗೌರವಾಧ್ಯಕ್ಷ ಕೆ.ಇ.ಕಾಂತೇಶ್ ವಕ್ತಾರ ವೀರಣ್ಣ ಹಳೇಗೌಡರ, ವೀರೇಶ್ ಉಂಡೋಡಿ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net