

ಬಾಗಲಕೋಟೆ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸ್ಟೂಡೆಂಟ್ ಎಕ್ಸೀರಿಯನ್ಸ್ ಇನ್ ಇಂಟರ್ ಸ್ಟೇಟ್ ಲಿವಿಂಗ್‌ದಿAದ ಏಕಾತ್ಮಕ ಯಾತ್ರೆಯು ಫೆ.೩ ರಿಂದ ೫ ವರೆಗೆ ಜಿಲ್ಲೆಯಲ್ಲಿ ನಡೆಯಲಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಹೇಳಿದರು.
ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟಿçÃಯ ಏಕಾತ್ಮಕ ಯಾತ್ರೆಯಲ್ಲಿ ೮ ಈಶಾನ್ಯ ರಾಜ್ಯಗಳಿಂದ ೨೩೮ ಪ್ರತಿನಿಽಗಳು ೮ ತಂಡಗಳಲ್ಲಿ ದೇಶಾದ್ಯಂತ ಯಾತ್ರೆಯಲ್ಲಿ ಭಾಗವಹಿಸುವರು. ೩೦ ಪ್ರತಿನಿಽಗಳ ಒಂದು ತಂಡ ಬಾಗಲಕೋಟೆಗೆ ೫೧ ವರ್ಷದಲ್ಲಿ ಇದೇ ಮೊದಲ ಬಾರಿಗೆ ಆಗಮಿಸಲಿದೆ ಎಂದರು.
ಬೆಳಗಾವಿಯಿAದ ಫೆ.೩ ರಂದು ಸಂಜೆ ೪ ಗಂಟೆಗೆ ಬಾಗಲಕೋಟೆ ನಗರಕ್ಕೆ ಆಗಮಿಸುವ ತಂಡಕ್ಕೆ ಸ್ಥಳೀಯ ಕಲಾ ವಾದ್ಯಗಳ ಮೂಲಕ ಭವ್ಯ ಸ್ವಾಗತ ನೀಡಲಾಗುವುದು. ಬೀಳೂರ ಗುರುಬಸವ ಅಜ್ಜನ ದೇವಸ್ಥಾನದಿಂದ ಬಸವೇಶ್ವರ ವೃತ್ತದವರೆಗೆ ಮೆರವಣಿಗೆ ನಡೆಯಲಿದೆ. ಫೆ.೪ ರಂದು ಬಾಗಲಕೋಟೆ ಜಿಲ್ಲೆಯ ಪ್ರವಾಸ ಮಾಡಲಿರುವ ತಂಡ ಬಾಗಲಕೋಟೆಯ ನವನಗರದ ಕಲಾಭವನ, ಬಾದಾಮಿಯ ಬನಶಂಕರಿ ದೇವಿಯ ದರ್ಶನ, ಐಹೊಳೆ, ಪಟ್ಟದಕಲ್ಲು, ಕೂಡಲಸಂಗಮ ಪವಿತ್ರ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲಿದಾರೆ.
ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ, ಫೆ.೫ ರಂದು ಕೇದಾರನಾಥ ಸಕ್ಕರೆ ಕಾರ್ಖಾನೆ ಭೇಟಿ ನೀಡಲಿದ್ದಾರೆ. ನಗರದ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಿದ್ದಾರೆ. ನಂತರ ಬಸವೇಶ್ವರ ಪಾಲಿಟೆಕ್ನಿಕ್ ಕಾಲೇಜಿಗೆ ಭೇಟಿ ನೀಡುವರು. ಸಂಜೆ ೬ಕ್ಕೆ ಬಸವೇಶ್ವರ ಇಂಜನಿಯರಿAಗ್ ಕಾಲೇಜಿನ ಸಭಾಂಗಣದಲ್ಲಿ ನಡೆಯುವ ನಾಗರಿಕ ಅಭಿನಂದನಾ ಕಾರ್ಯಕ್ರಮದಲ್ಲಿ ಪ್ರತಿನಿಽಗಳು ಭಾಗವಹಿಸುವರು ಎಂದು ತಿಳಿಸಿದರು.
ಬಾಗಲಕೋಟೆ ನಗರಕ್ಕೆ ಆಗಮಿಸುವರ ಪ್ರತಿನಿಽಗಳ ತಂಡದವರಿಗೆ ಮನೆಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ವಸತಿ ಇರುವ ಕುಟುಂಬದ ಜತೆ ಬೆರೆತು ಇಲ್ಲಿನ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ಇದು ಅನುಕೂಲವಾಗಲಿದೆ. ಕುಟುಂಬದ ಸದಸ್ಯರಿಗೂ ಈಶಾನ್ಯ ರಾಜ್ಯಗಳ ಕುರಿತು ಮಾಹಿತಿ ವಿನಿಮಯ ಆಗಲಿದೆ ಎಂದು ಹೇಳಿದರು.
ಮುಖಂಡರಾದ ಡಾ.ಸಿ.ಎಸ್.ಪಾಟೀಲ, ಎಚ್.ಡಿ.ಪಾಟೀಲ ಇತರರು ಇದ್ದರು.