ಫೆ.೨೦ ವರೆಗೆ ಮಾರುತೇಶ್ವರ ಕಾರ್ತಿಕೋತ್ಸವ

bkt-11-7
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ ಪೋಸ್ಟರ ಬಿಡುಗಡೆಗೊಳಿಸಿದರು. ಮುಖಂಡರಾದ ತಿಪ್ಪಣ್ಣ ಶಿವನಗೌಡ ಗೌಡರ, ಶರಣಪ್ಪ ಬಸಪ್ಪ ಪಾಲಿ, ಹನಮಂತ ವಡ್ಡರ, ಮಲ್ಲಯ್ಯ ಮಲ್ಲೇನ್ನವರ, ಬಸವರಾಜ ಮುಕ್ಕುಪ್ಪಿ ಇದ್ದರು.
Published on

ಬಾಗಲಕೋಟೆ: ಗುಳೆದಗುಡ್ಡ ತಾಲೂಕು ಇಂಜನವಾರಿಯ ಒಪ್ಪತ್ತೇಶ್ವರ ಸಂಸ್ಥಾನಮಠದಲ್ಲಿ ಶ್ರೀಮಾರುತೇಶ್ವರ ಕಾರ್ತಿಕೋತ್ಸವ ಮತ್ತು ಒಪ್ಪತ್ತೇಶ್ವರ ನೂತನ ರಥದ ಲೋಕಾರ್ಪಣೆ ಸಮಾರಂಭವು ಆರಂಭಗೊಂಡಿದ್ದು, ಫೆ.೨೦ ವರೆಗೆ ಜರುಗಲಿದೆ ಎಂದು ಶ್ರೀಮಠದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ ಹೇಳಿದರು.
ಒಪ್ಪತ್ತೇಶ್ವರ ಮಹಾಸ್ವಾಮಿಗಳ ಕುರಿತು ವೇ.ಮೂ. ವೀರಭದ್ರಯ್ಯ, ಕಮತಗಿ ಹಿರೇಮಠದ ವೇ.ಮೂ. ಗಣೇಶ ಶಾಸ್ತ್ರಿಗಳು ಪ್ರವಚನ ನೀಡಲಿದ್ದಾರೆ. ಫೆ.೧೫ ರಂದು ಪುರಾಣ ಕಾರ್ಯಕ್ರಮದ ಸಾಂದರ್ಭಿಕ ತೊಟ್ಟಿಲು ಕಾರ್ಯಕ್ರಮ ಗ್ರಾಮದ ತಾಯಂದಿರಿಂದ ಜರುಗಲಿದ್ದು, ಕುಕನೂರು ಅನ್ನದಾನೇಶ್ವರ ಶಾಖಾಮಠದ ಡಾ. ಮಹಾದೇವ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಕೆಳದಿ ಹಿರೇಮಠದ ರಾಜಗುರು ಡಾ.ಮೃತ್ಯುಂಜಯ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫೆ.೧೬ ರಂದು ಕೆಳದಿ ಸ್ವಾಮೀಜಿ ಸಾನಿಧ್ಯ, ಕಮತಗಿ ಹಿರೇಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಫೆ.೧೯ರಂದು ಮಾರುತೇಶ್ವರ ಕಾರ್ತಿಕೋತ್ಸವ ಗಂಡಾರತಿ ಮೆರವಣಿಗೆ, ಮಾರುತೇಶ್ವರ ಕಾರ್ತಿಕೋತ್ಸವದ ಅಗ್ನ ಶೀಮೋಲಂಘನೆ ಜರುಗಲಿದೆ. ಬೆಳಗ್ಗೆ ೧೦.೩೦ ಗಂಟೆಗೆ ಒಪ್ಪತ್ತೇಶ್ವರ ಜನಕಲ್ಯಾಣ ಟ್ರಸ್ಟ್ ಅಡಿಯಲ್ಲಿ ಪ್ರಕಟವಾದ ಎಚ್.ಟಿ.ರಂಗಾಪುರ ಅವರು ರಚಿಸಿದ ಅನುಪಮ, ಚಂದಿರನ ಪರಿವಾರ, ಬದುಕು ಕೃತಿಗಳು ಲೋಕಾರ್ಪಣೆಗೊಳ್ಳಲಿವೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕೊಣ್ಣೂರಿನ ಚರಂತಿಮಠದ ಡಾ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಕಮತಗಿ ಹೊಳೆಹುಚ್ಚೇಶ್ವರ ಸ್ವಾಮೀಜಿ, ಕೋಟೆಕಲ್ ಅಮರೇಶ್ವರ ಮಠದ ಡಾ.ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ಹಾಲಗೇರಿ ಹಾಲುಮತದ ಗುರು ಶ್ರೀಮುರಗಯ್ಯ ಸಿದ್ದಯ್ಯ ಒಡೆಯ ಉಪಸ್ಥಿತರಿರಲಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ, ಸಂಸದ ಪಿ.ಸಿ.ಗದ್ದಿಗೌಡರ, ಜೆಡಿಎಸ್ ಜಿಲ್ಲಾಧ್ಯಕ್ಷ ಹಣಮಂತ ಮಾವಿನಮರದ, ಕಾಂಗ್ರೆಸ್ ಮುಖಂಡ ಹೊಳೆಬಸು ಶೆಟ್ಟರ, ಮಾಜಿ ಶಾಸಕ ರಾಜಶೇಖರ ಶೀಲವಂತ, ಎಂ.ಕೆ.ಪಟ್ಟಣಶೆಟ್ಟಿ, ಬಿ.ಬಿ.ಚಿಮ್ಮನಕಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಬಿಜೆಪಿ ಅಧ್ಯಕ್ಷ ಎಸ್.ಟಿ.ಪಾಟೀಲ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪುರ ಸೇರಿ ಗಣ್ಯರು ಭಾಗವಹಿಸಲಿದ್ದಾರೆ. ಫೆ.೨೦ ರಂದು ಒಪ್ಪತ್ತೇಶ್ವರ ಕತೃಗದ್ದುಗೆಯ ರುದ್ರಾಭಿಷೇಕ ಜರುಗಿ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದರು.
ಮುಖಂಡರಾದ ತಿಪ್ಪಣ್ಣ ಶಿವನಗೌಡ ಗೌಡರ, ಶರಣಪ್ಪ ಬಸಪ್ಪ ಪಾಲಿ, ಹನಮಂತ ವಡ್ಡರ, ಮಲ್ಲಯ್ಯ ಮಲ್ಲೇನ್ನವರ, ಬಸವರಾಜ ಮುಕ್ಕುಪ್ಪಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net