ಫೆ.೨ ರಂದು ರಜತ ಸಂಭ್ರಮ

bkt-31-3
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ನಟರಾಜ ಸಂಗೀತ ನೃತ್ಯ ನಿಕೇತನದ ಸಂಸ್ಥಾಪಕಿ ಶುಭದಾ ದೇಶಪಾಂಡೆ ಮಾತನಾಡಿದರು.
Published on

ಬಾಗಲಕೋಟೆ: ಬಾಗಲಕೋಟೆ ನಗರದ ನಟರಾಜ ಸಂಗೀತ ನೃತ್ಯ ನಿಕೇತನದ ೨೫ನೇ ಸಾರ್ಥಕ ವಸಂತಗಳ ಪೂರೈಸಿದ ಹಿನ್ನಲೆಯಲ್ಲಿ ರಜತ ಸಂಭ್ರಮ ನಮಾಮಿ ಕಾರ್ಯಕ್ರಮ ಫೆ.೨ ರಂದು ಬೆಳಗ್ಗೆ ೧೦ ಗಂಟೆಗೆ ನವನಗರದ ಕಲಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಟರಾಜ ಸಂಗೀತ ನೃತ್ಯ ನಿಕೇತನದ ಸಂಸ್ಥಾಪಕಿ ಶುಭದಾ ದೇಶಪಾಂಡೆ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗದಿಂದ ೫೦೦ಕ್ಕೂ ಹೆಚ್ಚು ಸಂಗೀತ ನೃತ್ಯ ಕಲಾವಿದರು ಭಾಗವಹಿಸುವ ಮೂಲಕ ತಮ್ಮ ಪ್ರತಿಭೆ ಪ್ರದರ್ಶನ ಮಾಡಲಿದ್ದಾರೆ ಎಂದರು.

ಖ್ಯಾತ ಹಿರಿಯ ತಬಲಾ ವಾದಕ ರಾವಸಾಹೇಬ ಮೋರೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾಽಕಾರಿ ಜಾನಕಿ ಕೆ.ಎಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣ ಕುಮಾರ, ಲೇಖಕಿ ಶ್ವೇತಾ ನರಗುಂದ, ಕೆ.ಪಿ.ವೆಂಕಟೇಶ ಮೂರ್ತಿ ಆಗಮಿಸುವರು. ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಷ್ಕೃತ ಸುಗತೇಕರ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು.

ಬೆಳಗ್ಗೆ ೧೦ ರಿಂದ ಸಂಜೆ ೭ ಗಂಟೆಯವರೆಗೆ ನಿರಂತರ ಕಾರ್ಯಕ್ರಮ ನಡೆಯಲಿದೆ. ಭರತನಾಟ್ಯ ನೃತ್ಯ ಹಾಗೂ ಜುಗಲ್ ಬಂದಿ ಕಾರ್ಯಕ್ರಮ ಕೂಡ ಜರುಗಲಿದೆ ಎಂದು ಹೇಳಿದರು. ನಮ್ಮ ಸಂಸ್ಥೆಯು ನಿರಂತರ ೨೫ ವರ್ಷಗಳಿಂದ ಸಂಗೀತ ಕುರಿತು ಪಾಠ ಮಾಡಿಕೊಂಡು ಬರುತ್ತಿದ್ದು ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಕಲಿತು ಹೋಗಿದ್ದು ತಮ್ಮ ಇದರಿಂದ ಹಲವಾರು ವೇದಿಕೆಯಲ್ಲಿ ಹೆಸರು ಮಾಡಿದ್ದಾರೆ. ಸರಿಗಮಪ ಕಾರ್ಯಕ್ರಮಕ್ಕೂ ಕೂಡ ಈಗ ನಮ್ಮ ವಿದ್ಯಾರ್ಥಿ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಮುಖಂಡರಾದ ಗಂಗಾ ಹಂಡಿ, ಶ್ರದ್ಧಾ ಮೇಲ್ನಾಡ, ದೀಪಾ ತೊಗರಿ, ಮಧುರಾ ಸಂಪಗಾAವಿ, ಕೀತಿ ಹಂಚಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net