ಫೆ. 15ರಿಂದ ಫಾಸ್ಟ್ಯಾಗ್ ಕಡ್ಡಾಯ

5KMT4
Published on

ಕುಮಟಾ: ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ನಿರ್ದೇಶನದಂತೆ ತಾಲೂಕಿನ ಹೊಳೆಗದ್ದೆ ಚತುಷ್ಪಥ ಟೋಲ್ ಬಳಿ ವಾಹನ ಚಾಲಕರಿಗೆ ಫಾಸ್ಟಾ್ಯಗ್ ವಿತರಿಸುವ ಮೂಲಕ ಫಾಸ್ಟಾ್ಯಗ್ ಅಭಿಯಾನವನ್ನು ಶುಕ್ರವಾರ ಆರಂಭಿಸಲಾಯಿತು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಿಪಿಐ ಪರಮೇಶ್ವರ ಗುನಗಾ, ಫೆ. 15ರಿಂದ ಎಲ್ಲ ವಾಹನಗಳಿಗೆ ಫಾಸ್ಟಾ್ಯಗ್ ಕಡ್ಡಾಯಗೊಳಿಸಲಾಗಿದೆ ಮತ್ತು ಟೋಲ್ ನಾಕಾದಲ್ಲಿ ಯಾವುದೇ ನಗದು ಆಕರಣೆ ಇರುವುದಿಲ್ಲ. ಟೋಲ್ ನಾಕಾಕ್ಕೆ ಫಾಸ್ಟಾ್ಯಗ್ ಇಲ್ಲದೆ ಬಂದರೆ ಅಥವಾ ಫಾಸ್ಟಾ್ಯಗ್​ನಲ್ಲಿ ಮೊತ್ತ ತೋರಿಸದಿದ್ದರೆ ಟೋಲ್ ಶುಲ್ಕದ ಮೊತ್ತಕ್ಕಿಂತ ಎರಡು ಪಟ್ಟು ಪಾವತಿಸಬೇಕಾಗುತ್ತದೆ ಎಂದರು.

ವಾಹನದಲ್ಲಿ ಫಾಸ್ಟಾ್ಯಗ್ ಅಳವಡಿಕೆಯಿಂದ ಸಮಯ ಹಾಗೂ ಹಣದ ಉಳಿತಾಯವಾಗಲಿದೆ. ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪಲಿದೆ. ಸಾರ್ವಜನಿಕರಿಗೂ ಅನುಕೂಲ ಎಂದರು.

ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಹಿಡಿಯುವಲ್ಲಿ ಟೋಲ್ ನಾಕಾಗಳು ಸಹಾಯಕವಾಗುತ್ತಿವೆ. ವಾಹನ ಕಳ್ಳತನದಂತಹ ಅನೇಕ ಪ್ರಕರಣಗಳನ್ನು ಫಾಸ್ಟಾ್ಯಗ್ ಸಹಾಯದಿಂದ ಭೇದಿಸಲು ಸಾಧ್ಯವಾಗಿದೆ. ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಅನೇಕ ಮಂದಿ ಟೋಲ್ ದಾಟಿ ಹೋಗುವ ದುಸ್ಸಾಹಸ ಮಾಡಿದರೆ ಸಿಕ್ಕಿಕೊಳ್ಳುತ್ತಾರೆ ಎಂದು ವಿವರಿಸಿದರು. ಪಿಎಸ್​ಐ ಆನಂದಮೂರ್ತಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಸಿಬ್ಬಂದಿ, ಐಆರ್​ಬಿ ಅಧಿಕಾರಿಗಳು ಮತ್ತು ಸಿಬ್ಬಂದಿ, ಪೊಲೀಸರು ಇದ್ದರು.

ಹೊಳೆಗದ್ದೆ ಟೋಲ್ ಬಳಿ ಫಾಸ್ಟಾ್ಯಗ್ ವಿತರಣೆ ಹಾಗೂ ರಿಚಾರ್ಜ್ ಕೇಂದ್ರ ತೆರೆಯಲಾಗಿದೆ. ಟೋಲ್​ನ 20 ಕಿಲೋಮೀಟರ್ ವ್ಯಾಪ್ತಿಯೊಳಗಿನ ಸವಾರರಿಗೆ ಪಾಸ್ ಮಾಡಿಸಿಕೊಳ್ಳುವ ವ್ಯವಸ್ಥೆಯೂ ಇದೆ. ಉಳಿದಂತೆ ತಿಂಗಳ ಪಾಸ್ ವಿತರಣೆ ಮಾಡಲಾಗುತ್ತಿದ್ದು, ಮುಂದಿನ ತಿಂಗಳ ಮಾಸಿಕ ಪಾಸ್​ನ್ನು ಪ್ರಸಕ್ತ ತಿಂಗಳ 25ನೇ ತಾರೀಖಿನಿಂದ ರಿಚಾರ್ಜ್ ಮಾಡಿಸಬಹುದು.| ಪರಮೇಶ್ವರ ಗುನಗಾ, ಸಿಪಿಐ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net