

ಕಲಬುರಗಿಯಲ್ಲಿ ಜರುಗಿದ ಸರ್ವ ಸದಸ್ಯರ ಸಭೆಯಲ್ಲಿ ಕೇಂದ್ರ ಸಂಘದ ವೀಕ್ಷಕರ ರಾಷ್ಟೀಯ ಅಧ್ಯಕ್ಷ ಬಿ.ಎಸ್ .ದೇಸಾಯಿ ಸಮ್ಮುಖದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘದ ಕಲಬುರಗಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಸಂತೋಷಕುಮಾರ ಕುಸುಮಾ, ಪ್ರಧಾನ ಕಾರ್ಯದರ್ಶಿಯಾಗಿ ರೇವಣಸಿz್ದೆÃಶ್ವರ ಹಿರೇಮಠ, ಖಜಾಂಚಿಯಾಗಿ ಮಂಜುನಾಥ ರಾಠೋಡ ಹಾಗೂ ರಾಜ್ಯ ಪರಿಷತ್ ಸದಸ್ಯರಾಗಿ ಬಸವರಾಜ ಸಜ್ಜನ ಅವರು ಭಾನುವಾರ ಆಯ್ಕೆಯಾದರು.
ನಗರದಲ್ಲಿ ಭಾನುವಾರ ಜರುಗಿದ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ವೀಕ್ಷಕರಾಗಿ ಆಗಮಿಸಿದ್ದ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ ಗದಗ, ರಾಯಚೂರು ಜಿಲ್ಲಾಧ್ಯಕ್ಷ ಬಸವರಾಜ ನೇತೃತ್ವದಲ್ಲಿ ರಾಷ್ಟಿçÃಯ ಅಧ್ಯಕ್ಷರಾದ ಬಿ.ಎಸ್.ದೇಸಾಯಿ, ಜಿಮ್ಸ್ನ ಸಾವನಕುಮಾರ ಸಮ್ಮುಖದಲ್ಲಿ ನೂತನ ಅಧ್ಯP್ಷÀರ ಹಾಗೂ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಪಾಲ್ಗೊಂಡಿದ್ದ ಸಂಘದ ಸದಸ್ಯರಾಗಿರುವ ಕಲಬುರಗಿ ಜಿಲ್ಲಾ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಫಾರ್ಮಸಿ ಅಧಿಕಾರಿಗಳು ಎಲ್ಲರು ಸೇರಿಕೊಂಡು ಚರ್ಚೆ ನಡೆಸಿ, ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಂಡರು.
ಕುಸುಮಾ ಇತರರು ಒಮ್ಮತದಿಂದ ಆಯ್ಕೆಗೊಂಡ ಬಳಿಕ ರಾಜ್ಯ ಅಧ್ಯಕ್ಷರಾದ ಜಿ.ಕೆ. ಪ್ರಕಾಶ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳ ಅಭಿನಂದನ ಸಮಾರಂಭ ಆಯೋಜಿಸಿ ಎಲ್ಲರನ್ನು ಗೌರವಿಸಲಾಯಿತು. ಅಲ್ಲದೆ ವರ್ಗಾವಣೆಗೊಂಡ ಫಾರ್ಮಸಿ ಅಧಿಕಾರಿಗಳನ್ನು ಸಂಘದ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ಪಧಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.