

ಬಾಗಲಕೋಟೆ: ರಾಜ್ಯ ಸರ್ಕಾರ ಬಡವರ, ಮಹಿಳೆಯರ ಸಬಲೀಕರಣ ಮತ್ತು ಸ್ವಾವಲಂಬಿ ಜೀವನಕ್ಕೆ ಪೂರಕವಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಯೋಜನೆಗಳನ್ನು ತಲುಪಿಸುವಲ್ಲಿ ಅನುಷ್ಠಾನ ಇಲಾಖೆಯ ಅಽಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಽಕಾರದ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದರು.
ಜಿಲ್ಲಾ ಪಂಚಾಯಿತಿ ಹಳೇ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದ ಗ್ಯಾರಂಟಿ ಯೋಜನೆಗಳು ಶ್ಲಾಘನೆ ವ್ಯಕ್ತವಾಗಿವೆ. ಇಂದು ಮಹಿಳೆಯರು, ಬಡವರು, ಈ ಯೋಜನೆಗಳ ಸಹಾಯದಿಂದ ಸ್ವಂತ ಮತ್ತು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಅರ್ಹ ಫಲಾನುಭವಿಗೆ ಪಂಚ ಗ್ಯಾರಂಟಿ ಯೋಜನೆಗಳನ್ನು ತಲುಪಿಸುವುದು ಅಽಕಾರಿಗಳ ಕರ್ತವ್ಯವಾಗಿದೆ. ಕ್ಷೇತ್ರಮಟ್ಟದಲ್ಲಿ ಯೋಜನೆ ತಲುಪಿಸುವ ಅಽಕಾರಿ, ಸಿಬ್ಬಂದಿಗಳು ತೋರುವ ವರ್ತನೆ ಮತ್ತು ಸೌಜನ್ಯತೆ ಯೋಜನೆಯ ಯಶಸ್ಸು ಹೆಚ್ವಿಸುತ್ತವೆ. ಅಲ್ಲದೇ ಶಕ್ತಿ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಹೆಚ್ಚುವರಿ ಬಸ್‌ಗಳು ಬಂದಿರುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಪ್ರಗತಿ:
ಮೇ-೨೦೨೫ರ ಅಂತ್ಯಕ್ಕೆ ಅಂದಾಜು ೪೩೪೪೭೩ ಗೃಹ ಜ್ಯೋತಿ ಸ್ಥಾವರಗಳಿದ್ದು, ಅದರಲ್ಲಿ ೪೨೪೨೧೭ ಸ್ಥಾವರಗಳು ಗೃಹ ಜ್ಯೋತಿ ಯೋಜನೆ ಅಡಿ ನೋಂದಾಯಿಸಲ್ಪಟ್ಟಿರುತ್ತವೆ. ಉಳಿದಂತೆ ೧೦,೨೫೬ ಸ್ಥಾವರಗಳ ನೋಂದಣಿ ಹಂತವು ಪ್ರಗತಿಯಲ್ಲಿರುತ್ತದೆ. ಅಂದಾಜು ೩೨೮.೭೦ ಕೋಟಿ ಮೊತ್ತವಾಗಿದೆ ಹಾಗೂ ಶಕ್ತಿ ಯೋಜನೆಯಲ್ಲಿ ಏ.೧ ರಿಂದ ಜೂ.೧೭ ರ ವರೆಗೆ ಒಟ್ಟು ೫೯೫೫.೨೪ ಲಕ್ಷ ಮೊತ್ತವಾಗಿದೆ. ಸಾರಿಗೆ ಸಂಸ್ಥೆಯ ಒಟ್ಟಾರೆ ಆದಾಯದಲ್ಲಿ ಶೇ.೫೬ ರಷ್ಟು ಶಕ್ತಿ ಯೋಜನೆಯ ಪಾಲು ಇದೆ. ಅದರಂತೆ ಅನ್ನಭಾಗ್ಯ ಯೋಜನೆ ಅಡಿ ಹೆಚ್ಚುವರಿಯಾಗಿ ಪ್ರತಿ ಫಲಾನುಭವಿಗೆ ೦೫ ಕೆ.ಜಿಯಂತೆ ಫೆಬ್ರವರಿ ೨೦೨೫ ರಿಂದ ಮೇ ೨೦೨೫ ರ ವರೆಗೆ ೨,೮೯,೭೯೦ ಕ್ವಿಂಟಲ್ ಅಕ್ಕಿಯನ್ನು ವಿತರಿಸಲಾಗಿದೆ.
ಸಭೆಯಲ್ಲಿ ಬಾಗಲಕೋಟೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದ ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾ ಪ್ರಗತಿ ನೋಟ ವಿತರಿಸಲಾಯಿತು. ಸಭೆಯಲ್ಲಿ ಜಿಲ್ಲಾಽಕಾರಿ ಸಂಗಪ್ಪ ಎಂ, ಜಿ.ಪಂ ಸಿಇಒ ಶಶಿಧರ ಕುರೇರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಽಕಾರ ಜಿಲ್ಲಾ ಅಧ್ಯಕ್ಷ ಡಾ.ಸಾಗರ ಎಚ್.ಟೇಕನ್ನವರ, ಉಪಾಧ್ಯಕ್ಷರು ಮತ್ತು ತಾಲೂಕು ಮಟ್ಟದ ಗ್ಯಾರಂಟಿ ಪ್ರಾಽಕಾರದ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.