ಪ್ಲಾಸ್ಟಿಕ ಮುಕ್ತರಾಗಿ ಪ್ರಕೃತಿ ಮತ್ತು ಜೀವ ಸಂಕುಲ ಉಳಿಸೋಣ

ba675afa-6708-4625-93ca-264fb2d14164
ಬಟ್ಟೆ ಬ್ಯಾಗಗಳನ್ನು ಬಳಸುವಂತೆ ಜಾಗೃತಿ
Published on

ಬಾಗಲಕೋಟೆ: ನಗರದ ಬಿ. ವ್ಹಿ ವ್ಹಿ ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬಾಗಲಕೋಟ ಆಯ್. ಕ್ಯೂ. ಎ. ಸಿ, ಭೂಗೋಳಶಾಸ್ತ್ರ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಅ ಮತ್ತು ಬ ಘಟಕಗಳ ಅಡಿಯಲ್ಲಿ ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನದ ಅಂಗವಾಗಿ ಜಾಗ್ರತ ಕಾರ್ಯಕ್ರಮ ಜರುಗಿತು.

ಈ ಕಾರ್ಯಕ್ರಮದಲ್ಲಿ ಭೂಗೋಳಶಾಸ್ತ್ರದ ಮುಖ್ಯಸ್ಥರಾದ ಶ್ರೀ. ಎಸ್. ಎನ್. ರಜಪೂತ ರವರು ಮಾತನಾಡಿ ಈ ಮೊದಲು ಸ್ವರ್ಣ ಯುಗ, ಬೆಳ್ಳಿ ಯುಗ ತಾಮ್ರ ಯುಗ ಮತ್ತು ಕಬ್ಬಿನ ಯುಗ ಗಳಿದ್ದವು ಈಗ ಪ್ಲಾಸ್ಟಿಕ್ ಯುಗವಾಗಿದೆ. ಪ್ಲಾಸ್ಟಿಕ್ ನಮಗೆ, ಆರೋಗ್ಯಕ್ಕೆ ಮತ್ತು ಸಮಾಜಕ್ಕೆ ಮಾರಕವಾಗಿದೆ. ಇದು ಕೊಳೆಯಲಾಗದ ಪದಾರ್ಥ ಇದನ್ನು ಬಳಸುವುದನ್ನು ನಿಲ್ಲಿಸಬೇಕು ಎಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಸ್ ಜೆ ಒಡೆಯರ್ ಪ್ಲಾಸ್ಟಿಕ ಮುಕ್ತರಾಗಿ ಪ್ರಕೃತಿ ಮತ್ತು ಜೀವ ಸಂಕುಲ ಉಳಿಸೋಣ ಪ್ಲಾಸ್ಟಿಕ್ ಬ್ಯಾಗಗಳ ಬಳಕೆಯನ್ನು ನಿಷೇಧಿಸಿ ಬಟ್ಟೆ ಬ್ಯಾಗಗಳನ್ನು ಉಪಯೋಗಿಸಬೇಕೆಂದರು.

ಸಂದರ್ಭದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಸಿದ್ದಪಡಿಸಿದ ಬಟ್ಟೆ ಬ್ಯಾಗ್ ಗಳನ್ನು ಪ್ರದಶಿ೯ಸಲಾಯಿತು. ಆಯ್. ಕ್ಯೂ. ಎ. ಸಿ ಸಂಯೋಜಕರಾದ ಶ್ರೀಮತಿ ಪಿ. ಕೆ. ಚೌಗಲಾ ಸ್ವಾಗತಿಸಿದರು. ಎನ್. ಎಸ್. ಎಸ್. ಕಾಯ೯ಕ್ರಮ ಅಧಿಕಾರಿಗಳಾದ ಡಾ. ಎಮ್. ವಿ. ಬಾಜಪ್ಪನವರ ವಂದಿಸಿದರು. ಡಾ. ಜಿ. ಆಯ್. ನಂದಿಕೋಲಮಠ ಮುಖ್ಯಸ್ಥರು ಕನ್ನಡ ವಿಭಾಗ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net