ಪ್ರೀತಿಸಿದ ಆಂಟಿಗಾಗಿ ಗೌಂಡಿ ಕೆಲಸ ಮಾಡಿದ ಇಂಜಿನಿಯರ್

IMG-20220827-WA0030.jpg
Published on

ವಿಜಯವಾಣಿ ಸುದ್ದಿಜಾಲ ಕಾರವಾರ
ಮೆಕ್ಯಾನಿಕಲ್ ಇಂಜಿನಿಯರ್ ಒಬ್ಬ ತನ್ನ ಪ್ರಿಯತಮೆಗಾಗಿ ಕಾರವಾರಕ್ಕೆ ಬಂದು ಗೌಂಡಿ ಕೆಲಸ ಮಾಡಿಕೊಂಡಿದ್ದ ಸಂಗತಿ ಬಯಲಾಗಿದೆ.

ತಮಿಳುನಾಡು ಮೂಲದ ಪುದುಕೊಟ್ಟೈ ಜಿಲ್ಲೆಯ ಬೀರ್ ಮೊಯಿದ್ದೀನ್ ಎಂಬ ಇಂಜಿನಿಯರ್ ತನ್ನ ಪ್ರಿಯತಮೆಯಾದ ವಿವಾಹಿತ ಮಹಿಳೆ ಆಯೆಶಾ ರೆಹಮತ್-ಉಲ್ಲಾ ಎಂಬಾಕೆಯೊಡನೆ ಕಾರವಾರಕ್ಕೆ ಬಂದು ಕಳೆದ 6 ತಿಂಗಳಿಂದ ನೆಲೆಸಿದ್ದ ಎನ್ನಲಾಗಿದೆ.
ತಮಿಳುನಾಡು ಪೊಲೀಸ್ ಠಾಣೆಯಲ್ಲಿ ಆಯೇಶಾ ನಾಪತ್ತೆ ಪ್ರಕರಣ ದಾಖಲಾಗಿತ್ತು. ಅಲ್ಲಿನ ಪೊಲೀಸರು ಶನಿವಾರ ಕಾರವಾರಕ್ಕೆ ಬಂದು ಇಲ್ಲಿನ ಶಹರ ಠಾಣೆ ಪೊಲೀಸರ ಸಹಕಾರದಲ್ಲಿ ಪ್ರೇಮಿಗಳನ್ನು ತವರಿಗೆ ಕರೆದೊಯ್ದಿದ್ದಾರೆ.


ಆಯೆಶಾ ಹಾಗೂ ಬೀರ್ ಮೊಯಿದ್ದೀನ್ ನಡುವೆ 12 ವರ್ಷಗಳ ಹಿಂದಿನಿಂದಲೇ ಪ್ರೇಮವಿತ್ತು. ಆದರೆ, ಆಕೆಯ ಇಚ್ಛೆಗೆ ವಿರುದ್ಧವಾಗಿ ಬೇರೊಬ್ಬನ ಜತೆ 10 ವರ್ಷದ ಹಿಂದೆಯೇ ವಿವಾಹ ಮಾಡಿ ಕೊಡಲಾಗಿತ್ತು. ಇಬ್ಬರು ಮಕ್ಕಳೂ ಇದ್ದರು. ಆದರೆ, ತನ್ನ ಹಳೆಯ ಪ್ರೇಮಿಯ ಸಂಪರ್ಕ ಬಿಡದ ಆಯೇಶಾ 6 ತಿಂಗಳ ಹಿಂದೆ ತನ್ನ ಪತಿ, ಮಕ್ಕಳನ್ನು ಬಿಟ್ಟು ಪ್ರಿಯತಮ ಬೀರ್ ಮೊಯಿದ್ದೀನ್ ಜತೆ ಬಂದಿದ್ದಳು. ಜೋಡಿ 6 ತಿಂಗಳಿಂದ ಕಾರವಾರದಲ್ಲಿ ನೆಲೆಸಿತ್ತು. ಬೀರ್ ಮೊಯಿದ್ದೀನ್ ಇಂಜಿನಿಯರ್ ಆಗಿದ್ದರೂ ಇಲ್ಲಿ ಜೀವನಕ್ಕಾಗಿ ಗೌಂಡಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net